ಬೆಂಗಳೂರು: ಅಪಘಾತ ಎನ್ನುವುದು ಕನ್ನಡ ಚಿತ್ರರಂಗಕ್ಕೆ ಆಘಾತಗಳನ್ನು ನೀಡುತ್ತಲೇ ಬಂದಿದೆ. ಇನ್ನೂ ಎಷ್ಟೋ ಸಿನಿಮಾಗಳಲ್ಲಿ ನಟಿಸಿ ಕನ್ನಡ ಚಿತ್ರರಂಗ ಕೀರ್ತಿಯನ್ನು ಎತ್ತರಕ್ಕೇರಿಸಬೇಕಾದವರು ಬದುಕನ್ನು ಮುಗಿಸುವುದು ಎಂದಿಗೂ ಮರೆಯಲಾಗದ ನೋವಿನ ನೆನಪನ್ನು ಉಳಿಸುತ್ತಿದೆ. ಸಂಚಾರಿ ವಿಜಯ್ ಅವರ ಸಾವು ಎಲ್ಲರನ್ನ ಅಘಾತಗೊಳಿಸಿದೆ. ಕೇವಲ 38 ವರ್ಷಕ್ಕೆ ತಮ್ಮ ಬದುಕಿಗೆ ಫುಲ್ ಸ್ಟಾಪ್ ಇಟ್ಟುಹೋಗಿದ್ದಾರೆ.
Advertisement
ರಾಷ್ಟ್ರ ಪ್ರಶಸ್ತಿ ಪುರಸ್ಕøತ ನಟ ಸಂಚಾರಿ ವಿಜಯ್ ಅವರ ಅಕಾಲಿಕ ನಿಧನ ಕನ್ನಡ ಚಿತ್ರರಂಗಕ್ಕೆ ಅಘಾತ ನೀಡಿದೆ. ಕೇವಲ ನಟನೆಗೆ ಸೀಮಿತವಾಗದೇ ಸಾಮಾಜಿಕ ಕಳಕಳಿಯಿಂದ ಅವರು ಮಾಡುತ್ತಿದ್ದ ಸಮಾಜಮುಖಿ ಕೆಲಸಗಳು ಅವರನ್ನು ಶಾಶ್ವತ ವ್ಯಕ್ತಿತ್ವವಾಗಿಸಿದೆ. ನಾನು ಅವನಲ್ಲ ಅವಳು ಎಂಬ ಸಿನಿಮಾದಲ್ಲಿ ಅಮೋಘ ಅಭಿನಯದ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದರು. ಪ್ರತಿ ಸಿನಿಮಾದಲ್ಲೂ ವಿಭಿನ್ನ ಪಾತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಅಂತರ್ ರಾಷ್ಟ್ರೀಯ ಮನ್ನಣೆಯನ್ನು ದೊರಕಿಸುವ ಕೆಲಸ ಮಾಡಿದ್ದರು. ಇದನ್ನೂ ಓದಿ: ಸ್ನೇಹಿತ ರಘು ತೋಟದಲ್ಲೇ ಮಣ್ಣಲ್ಲಿ ಮಣ್ಣಾದ ವಿಜಯ್
Advertisement
Advertisement
ಈ ಕೊರೋನಾ ಸಂಕಷ್ಟದ ಸಮಯದಲ್ಲಿ, ಚಿತ್ರರಂಗ ಸಂಪೂರ್ಣ ಸ್ಥಬ್ಧವಾಗಿದ್ದಾಗಲೂ, ಸಂಕಷ್ಟದಲ್ಲಿರುವ ಜನರ ನೋವನ್ನು ದೂರಾಗಿಸುವ ಕೆಲಸವನ್ನು ಸಮಾನ ಮನಸ್ಕರ ಸ್ನೇಹಿತರನ್ನ ಒಗ್ಗೂಡಿಸಿಕೊಂಡು ಮಾಡುತ್ತಿದ್ದರು. ಅದೇ ಯಾರೂ ಊಹಿಸಲು ಆಗದ ರೀತಿಯಲ್ಲಿ ಬದುಕನ್ನ ಮುಗಿಸಿ ಸಂಚಾರಿ ವಿಜಯ್ ನಡೆದಿದ್ದಾರೆ. ತಮ್ಮ ಬದುಕಿನ ಪಯಣ ಮುಗಿಸಿದ್ದರೂ ಎಷ್ಟೋ ಜನರ ಬದುಕಿಗೆ ತಮ್ಮ ಅಂಗಾಂಗ ದಾನ ಮಾಡಿದ್ದಾರೆ. ಸಂಚಾರಿ ವಿಜಯ್ ಇನ್ನಿಲ್ಲ ಎನ್ನುವ ನೋವನ್ನು ಕಡಿಮೆ ಮಾಡಿ ಸಾವಿನಲ್ಲೂ ಸಾರ್ಥಕತೆಯನ್ನು ಮೆರೆದಿದ್ದಾರೆ. ಇದನ್ನೂ ಓದಿ: ದೇವರು ನಿಜವಾಗ್ಲೂ ಕ್ರೂರಿ ಅಂದ್ರು ಮೇಘನಾ..!
Advertisement
ನಮ್ಮ ಕನ್ನಡ ಚಿತ್ರರಂಗ ಅಪಘಾತಗಳಿಂದ ಆಗ್ಗಾಗ್ಗೆ ಈ ರೀತಿಯ ಅಘಾತಗಳನ್ನ ಅನುಭವಿಸಿದೆ. ಪ್ರಮುಖವಾಗಿ ನಟ, ನಿರ್ದೇಶಕ ಶಂಕರ್ ನಾಗ್ ಸಹ 1990ರ ಸೆಪ್ಟೆಂಬರ್ 39ರಂದು ಅಪಘಾತದಲ್ಲಿ ನಿಧನ ಹೊಂದಿದ್ದರು. ಶಂಕರ್ ನಾಗ್ ಸಹ ನಟನೆ, ನಿರ್ದೇಶನ ಹೊರತುಪಡಿಸಿ ಸಮಾಜದ ಬಗ್ಗೆ ಅವರಿಗಿದ್ದ ಮುಂದಾಲೋಚನೆಗಳು ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸುತ್ತಿತ್ತು. ಆ ಮಟ್ಟಿಗೆ ಶಂಕರ್ ನಾಗ್ ದೂರದೃಷ್ಟಿಯುಳ್ಳವರಾಗಿದ್ದರು. ಆದರೆ ಆ ಒಂದು ಅಪಘಾತ ಆ ಮಹಾನ್ ನಟ, ನಿರ್ದೇಶಕ, ಸಮಾಜಮುಖಿಯನ್ನ ಬಲಿಪಡೆದುಕೊಂಡಿತ್ತು. ಇದನ್ನೂ ಓದಿ: ತಿಪಟೂರಿನಿಂದ ಧರ್ಮಸ್ಥಳಕ್ಕೆ ಸೈಕಲ್ ಪ್ರವಾಸ ಹೋಗ್ತಿದ್ರು ಸಂಚಾರಿ ವಿಜಯ್
ಮತ್ತೊಬ್ಬ ಪ್ರತಿಭಾವಂತ ನಟ ಕೆಲವೇ ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನ ಮೂಡಿಸಿದ್ದ ನಟ ಸುನಿಲ್ ಸಹ 1994ರ ಜುಲೈ 24 ರಂದು ಅಪಘಾತದಲ್ಲಿ ಅಕಾಲಿಕ ಮರಣಹೊಂದಿದ್ದರು. ಇದನ್ನೂ ಓದಿ: ಮರಗಳನ್ನು ರಕ್ಷಿಸುವ ಬುದ್ಧಿಮಾಂದ್ಯನ ತೆರೆ ಮೇಲೆ ಬಂದ ವಿಜಯ್