– ಹುತಾತ್ಮ ಯೋಧರಿಗೆ ಪುಷ್ಪ ನಮನ
ಚಿತ್ರದುರ್ಗ: ಪ್ರೇಮಿಗಳ ದಿನಾಚರಣೆ ಬದಲಾಗಿ ಕೋಟೆನಾಡಿನ ಕಾಲೇಜು ವಿದ್ಯಾರ್ಥಿಗಳಿಂದ ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರ ಬಲಿದಾನ ದಿವಸ್ ಆಚರಣೆ ಮಾಡಲಾಗಿದೆ.
ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದ ಮುಂಭಾಗದಲ್ಲಿ, ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ನಿವೃತ ಯೋಧರು ಸೇರಿ ಪುಲ್ವಾಮಾದಲ್ಲಿ ವೀರ ಮರಣ ಹೊಂದಿದ 40 ಜನ ವೀರಯೋಧರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದ ಬಳಿಕ ಪುಲ್ವಾಮಾ ದಾಳಿ ಕುರಿತು ಮೆಲಕು ಹಾಕಿದ ನಿವೃತ್ತ ಯೋಧ ಸತ್ಯನಾರಾಯಣ, ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಅಮೂಲ್ಯವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಇಂತಹ ಪ್ರೇಮಿಗಳ ದಿನ ಸೇರಿದಂತೆ ದೈನಂದಿನ ಬದುಕಲ್ಲಿ ದುಷ್ಪರಿಣಾಮ ಬೀರುವ ಆಚರಣೆಗಳನ್ನು ಆಚರಿಸುವ ಬದಲಾಗಿ ರಾಷ್ಟ್ರ ಪ್ರೇಮ ಬೆಳಸಿಕೊಂಡು ದೇಶ ಸೇವೆಗೆ ಮುಂದಾಗುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.
ಬಲಿದಾನ್ ದಿವಸ್ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಾದ ಸತ್ಯನಾರಾಯಣ್ ಉಪನ್ಯಾಸಕರಾದ ಲೇಪಾಕ್ಷ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿದಂತೆ ಸಾರ್ವಜನಿಕರು ಭಾಗಿಯಾಗಿದ್ದರು.