ರಾಯಚೂರು: ಹೊಟ್ಟೆಪಾಡಿಗೆ ಬೀದಿ ಬದಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಮಹಿಳೆಯರ ಅಂಗಡಿಗಳ ಮೇಲೆ ದರ್ಪ ಮೆರೆದಿರುವ ನಗರದ ಸದರ ಬಜಾರ್ ಠಾಣೆ ಪಿಎಸ್‍ಐ ಅಜಂ ತರಕಾರಿ ಹಾಗೂ ಸೊಪ್ಪನ್ನ ಕಾಲಿನಿಂದ ಒದ್ದು ಬಡವರ ಮೇಲೆ ಅಟ್ಟಹಾಸ ತೋರಿಸಿದ್ದಾರೆ.
Advertisement
ವೀಕೆಂಡ್ ಕರ್ಫ್ಯೂ ಹಿನ್ನೆಲೆ ನಗರದಲ್ಲಿ ಎಲ್ಲಾ ವ್ಯಾಪಾರ ವಹಿವಾಟುಗಳು ಬಂದ್ ಆಗಿದ್ದು, ನಗರದ ಚಂದ್ರಮೌಳೇಶ್ವರ ವೃತ್ತದ ಬಳಿ ಅಲ್ಲಲ್ಲಿ ವ್ಯಾಪಾರ ನಡೆಸಿದ್ದ ತರಕಾರಿ ವ್ಯಾಪಾರಿಗಳನ್ನ ಪೊಲೀಸರು ಜಾಗ ಖಾಲಿ ಮಾಡಿಸುತ್ತಿದ್ದರು. ಈ ವೇಳೆ ಏಕಾಏಕೀ ಬಂದ ಪಿಎಸ್‍ಐ ಅಜಂ ತರಕಾರಿ ಹಾಗೂ ಸೊಪ್ಪನ್ನು ಕಾಲಿನಿಂದ ಒದ್ದು ದರ್ಪ ಮೆರೆದಿದ್ದಾರೆ. ಬಡ ಬೀದಿ ವ್ಯಾಪಾರಿಗಳ ತರಕಾರಿ ವಸ್ತುಗಳನ್ನ ಚಲ್ಲಾಪಿಲ್ಲಿ ಮಾಡಿದ್ದಾರೆ. ಇದನ್ನೂ ಓದಿ: ಸೋಮವಾರದಿಂದ ಹೊಸ ರೂಲ್ಸ್, ಹೊಸ ಲೈಫ್ – ಅನ್‍ಲಾಕ್ 2.ಔಗೆ ಬೆಂಗಳೂರಿಗರ ಸಿದ್ಧತೆ
Advertisement
Advertisement
ಲಾಕ್‍ಡೌನ್ ಹಿನ್ನೆಲೆ ಕೆಲಸವಿಲ್ಲದೆ ಕಷ್ಟದಲ್ಲಿರುವ ಮಹಿಳೆಯರು, ವೃದ್ದೆಯರು ತಳ್ಳೊಬಂಡಿಗಳಲ್ಲಿ ಬೀದಿಬದಿಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದರು. ವೀಕೆಂಡ್ ಕರ್ಫ್ಯೂ ಕರ್ತವ್ಯ ನಿರ್ವಹಿಸುವ ನೆಪದಲ್ಲಿ ಬಡ ಮಹಿಳಾ ವ್ಯಾಪಾರಿಗಳ ಮೇಲೆ ಪೊಲೀಸ್ ಅಧಿಕಾರಿ ತನ್ನ ಅಹಂಕಾರ ತೋರಿಸಿದ್ದಾರೆ. ಕರ್ಫ್ಯೂ ಹಿನ್ನೆಲೆ ವ್ಯಾಪಾರ ಮಾಡುತ್ತಿರುವವರನ್ನ ಜಾಗ ಖಾಲಿ ಮಾಡಿಸುವುದು ಸರಿ, ಆದರೆ ಬಡವರ ಮೇಲೆ ದರ್ಪ ಮೆರೆದು ತರಕಾರಿ ಒದ್ದಿರುವುದಕ್ಕೆ ಸಾರ್ವಜನಿಕ ವಲಯಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
Advertisement