ನವದೆಹಲಿ: ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ವ್ಯಾಕ್ಸಿನ್ ಹಂಚಿಕೆ ಸಿದ್ಧತೆಯಲ್ಲಿರುವ ಕೇಂದ್ರ ಸರ್ಕಾರ ಇದಕ್ಕಾಗಿ ಮೂರು ತಂಡಗಳನ್ನು ರಚಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಈ ಸಂಬಂಧ ರಾಜ್ಯ ಪ್ರಧಾನ ಕಾರ್ಯದರ್ಶಿಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಪತ್ರ ಬರೆದಿದ್ದಾರೆ.
ಸುಗಮ ವ್ಯಾಕ್ಸಿನ್ ಹಂಚಿಕೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ‘ಪ್ರಧಾನ ಕಾರ್ಯ ಪಡೆ’, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಥವಾ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ‘ರಾಜ್ಯ ಕಾರ್ಯಪಡೆ’ ಹಾಗೂ ಜಿಲ್ಲಾಧಿಕಾರಗಳ ನೇತೃತ್ವದಲ್ಲಿ ‘ಜಿಲ್ಲಾ ಕಾರ್ಯಪಡೆ’ ರಚಿಸಲು ಸೂಚಿಸಲಾಗಿದೆ.
Advertisement
Advertisement
ಈ ಮೂರು ತಂಡಗಳ ನೇತೃತ್ವದಲ್ಲಿ ದೇಶಕ್ಕೆ ವ್ಯಾಕ್ಸಿನ್ ಹಂಚಿಕೆಯಾಗಲಿದ್ದು, ವ್ಯಾಕ್ಸಿನ್ ಆಗಮನಕ್ಕೂ ಮುನ್ನ ಗ್ರೌಂಡ್ ಲೆವಲ್ ನಲ್ಲಿ ವಿತರಣೆ ಲೆಕ್ಕಾಚಾರ ಹಾಗೂ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಿದ್ದು, ಇದಕ್ಕಾಗಿ ಈ ಮೂರು ತಂಡಗಳಿಗೆ ಪ್ರತ್ಯೇಕವಾದ ಜವಾಬ್ದಾರಿ ವಹಿಸಲಾಗಿದೆ.
Advertisement
ರಾಜ್ಯದ ಪ್ರಧಾನ ಕಾರ್ಯಪಡೆಯು ವ್ಯಾಕ್ಸಿನ್ ಹಂಚಿಕೆಯಲ್ಲಿ ಎಲ್ಲಾ ಇಲಾಖೆಗಳ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲಿದೆ ಮತ್ತು ಜನರು ಸಮರ್ಪಕವಾಗಿ ವ್ಯಾಕ್ಸಿನ್ ಹಂಚಿಕೆ ಅಭಿಯಾನದಲ್ಲಿ ಭಾಗಿಯಾಗುವಂತೆ ನೋಡಿಕೊಳ್ಳಬೇಕಿದೆ. ಅಲ್ಲದೇ ರಾಜ್ಯಕ್ಕೆ ಆಗಮಿಸುವ ವ್ಯಾಕ್ಸಿನ್‍ಗಳ ಟ್ರ್ಯಾಕಿಂಗ್ ಮಾಡುವುದು ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಲಸಿಕೆಯ ಬಗ್ಗೆ ತಪ್ಪು ಮಾಹಿತಿ ಮತ್ತು ವದಂತಿಗಳಿಗೆ ತಡೆಯುವ ಕೆಲಸ ಮಾಡಲಿದೆ.
Advertisement
ಆರೋಗ್ಯ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿರುವ ರಾಜ್ಯ ಕಾರ್ಯಪಡೆ ಜಿಲ್ಲಾವಾರು ವ್ಯಾಕ್ಸಿನ್ ಹಂಚಿಕೆ ಗಮನಿಸಲಿದೆ. ವ್ಯಾಕ್ಸಿನ್ ಅನ್ನು ಸರ್ಕಾರಿ ಮತ್ತು ಖಾಸಗಿ ವಲಯಗಳಿಗೆ ಹಂಚಿಕೆ ಜವಾಬ್ದಾರಿ ಜೊತೆಗೆ ವ್ಯಾಕ್ಸಿನ್ ಕೇಂದ್ರಗಳ ಮ್ಯಾಪಿಂಗ್ ಮಾಡುವುದು ಈ ತಂಡದ ಕಾರ್ಯವಾಗಿದೆ. ಇದರ ಜೊತೆಗೆ ಜನ ಸಮೂಹ ಮತ್ತು ಸಮಯ ನಿರ್ವಹಣೆ, ಡೋಸ್ ಗಳಿಗೆ ಅವಧಿ ನಿಗದಿ ಪಡಿಸುವುದು, ಆರ್ಥಿಕತೆ ಮತ್ತು ಮಾನವ ಸಂಪನ್ಮೂಲ ನಿರ್ವಹಣೆ ಮಾಡುವುದು ಈ ತಂಡದ ಜವಾಬ್ದಾರಿ ಎಂದು ಆರೋಗ್ಯ ಇಲಾಖೆ ಹೇಳಿದೆ.
ಇನ್ನು ಜಿಲ್ಲಾ ಕಾರ್ಯಪಡೆ ಜಿಲ್ಲೆಗಳಲ್ಲಿ ವ್ಯಾಕ್ಸಿನ್ ಹಂಚಿಕೆ ಮತ್ತು ಪ್ರಮಾಣ ನಿಗಧಿ ಪಡಿಸಲಿದೆ. ಅಲ್ಲದೇ ವ್ಯಾಕ್ಸಿನ್ ಹಂಚಿಕೆಗೆ ಹಳ್ಳಿಗಳಿಂದ ನಗರಗಳವರೆಗೂ ಮ್ಯಾಪಿಂಗ್ ಮತ್ತು ಮೈಕ್ರೋ ಪ್ಲಾನಿಂಗ್ ಮಾಡಿ ಕೋಲ್ಡ್ ಸ್ಟೋರೇಜ್ ಗಳ ಜೊತೆಗೆ ಸಂವಹನ ಹೊಂದುವುದು ಜಿಲ್ಲಾಧಿಕಾರಿಗಳ ಜವಾಬ್ದಾರಿಯಾಗಿದೆ. ಇದಲ್ಲದೇ ಲಸಿಕೆ ಲಾಜಿಸ್ಟಿಕ್ಸ್ ಯೋಜನೆ ಮತ್ತು ಬ್ಲಾಕ್ ಹಂತದಲ್ಲಿ ವಿತರಣೆಗೆ ಯೋಜನೆ ಮಾಡುವುದು ಜಿಲ್ಲಾ ಕಾರ್ಯಪಡೆಗೆ ಜವಾಬ್ದಾರಿವಹಿಸಿದೆ.