ಬೆಂಗಳೂರು: ಅನ್‍ಲಾಕ್ ವಿಚಾರದಲ್ಲಿ ಸರ್ಕಾರ ಏನು ತೀರ್ಮಾನ ಕೈಗೊಳ್ಳುತ್ತೋ ಕೈ ಗೊಳ್ಳಲಿ ಏನೇ ಆದರು ಜನರಿಗೆ ಅನುಕೂಲವಾಗುವಂತೆ ಮಾಡಲಿ. ಲಸಿಕೆ ನೀಡಿಕೆ ಒಂದು ದೊಡ್ಡ ಬೋಗಸ್ ಎಲ್ಲಾ ದಾಖಲೆಗಳು ಇವೆ ಅದಕ್ಕೆ ಪ್ರತ್ಯೇಕ ಸುದ್ದಿಗೋಷ್ಠಿ ನಡೆಸುತ್ತೇನೆ. ಏನು ಮಂತ್ರಿ ಹೇಳ್ತಿದ್ದಾರೆ ಅದೆಲ್ಲ ಬರೀ ಸುಳ್ಳು. ನನ್ನ ಬಳಿ ಮಾಹಿತಿ ಇದೆ ಅದರ ಬಗ್ಗೆ ಸಧ್ಯದಲ್ಲೇ ಸುದ್ದಿಗೋಷ್ಠಿ ಮಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಪಕ್ಷ ಬಿಟ್ಟವರನ್ನು ಪಕ್ಷಕ್ಕೆ ವಾಪಸ್ ಕರೆತರುವ ವಿಚಾರವಾಗಿ ನಾನು ಪಕ್ಷ ಬಿಟ್ಟುಹೋದ ಆ 17 ಜನಕ್ಕೆ ಅಂತ ಹೇಳಿಲ್ಲ. ಯಾರೆಲ್ಲಾ ನಮ್ಮ ಪಕ್ಷಕ್ಕೆ ಬರಬೇಕು ಅಂತಿದ್ದಾರೆ ಅವರಿಗೆ ಹೇಳಿದ್ದೇನೆ. ಯಾರಿಗೆ ನಮ್ಮ ಲೀಡರ್ ಶಿಪ್, ನಮ್ಮ ಸಿದ್ಧಾಂತದ ಮತ್ತು ಪಕ್ಷದ ಬಗ್ಗೆ ಒಪ್ಪಿಗೆ ಇದೆಯೋ ಅವರೆಲ್ಲ ಅರ್ಜಿ ಹಾಕಬಹುದು. ಮೊದಲು ಅರ್ಜಿ ಹಾಕಲಿ ಬಳಿಕ ನೋಡೋಣ. ಬ್ಲಾಕ್ ಕಾರ್ಯರ್ತರು ಜಿಲ್ಲಾ ಕಾರ್ಯಕರ್ತರು ಅವರ ಅಭಿಪ್ರಾಯ ಕೇಳ್ತೀವಿ. ಯಾರಬೇಕಾದ್ರು ಅರ್ಜಿ ಹಾಕ್ಲಿ. ಯಾರು ಅರ್ಜಿ ಹಾಕಿದ್ದಾರೆ ಅನ್ನೋದನ್ನು ಈಗ ತಿಳಿಸುವ ಅವಶ್ಯಕತೆ ಇಲ್ಲ. ಯಾರು ಬೇಕಾದರೂ ಅರ್ಜಿ ಹಾಕಬಹುದು ಎಂದಿದ್ದಾರೆ. ಇದನ್ನೂ ಓದಿ : 15 ವರ್ಷದ ದಾಂಪತ್ಯ ಅಂತ್ಯ – ವಿಚ್ಛೇದನಕ್ಕೆ ಮುಂದಾದ ಆಮಿರ್ ಖಾನ್, ಕಿರಣ್ ರಾವ್
Advertisement
Advertisement
ಯಾರಿಗೆ ನಮ್ಮ ಪಕ್ಷದ ಮೇಲೆ ನಂಬಿಕೆ ಇದೆಯೋ ಅವರಲ್ಲರೂ ಬರಬಹುದು ಎಂದಿದ್ದೇನೆ. ನಮ್ಮ ಪಕ್ಷದಿಂದ ಬಿಟ್ಟು ಹೋದ 17 ಜನರು ನನ್ನ ಸಂಪರ್ಕ ಮಾಡಿಲ್ಲ. ಬೇರೆಯವರು ಸಂಪರ್ಕ ಮಾಡಿದ್ದಾರೆ. ಆ 17 ಜನ ಅರ್ಜಿ ಹಾಕಬಹುದಾ ಅನ್ನೋ ಪ್ರಶ್ನೆಗೆ ಯಾರು ಬೇಕಾದರೂ ಅರ್ಜಿ ಹಾಕಬಹುದು ನಾನು ಕೇವಲ 17 ಜನರ ಬಗ್ಗೆ ಮಾತ್ರ ಹೇಳುತ್ತಿಲ್ಲ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
Advertisement
ಡಿಕೆ ಶಿವಕುಮಾರ್ ಎದೆಯಲ್ಲಿ ಇದ್ದಾರೆ ಅಂತ ತೋರಿಸಿದೋವರು ಇದ್ದಾರೆ. ಎಂಟಿಬಿ ನಾಗರಾಜ್ ಗೆ ಟಿಕೆಟ್ ಕೊಡಿಸಿದ್ದು ನಾನೇ. ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡಿಸೋದಕ್ಕೆ ನಾನು ಒಬ್ಬ ಕಾರಣ ನನ್ನಿಂದ ಗೆದ್ದರು ಅಂತ ಹೇಳೋದಿಲ್ಲ ಅದ್ರೆ ಟಿಕೆಟ್ ಕೊಡಿಸಿದ್ದು ನಾನೇ. ಅಮೇಲೆ ಅವರು ಗೆದ್ದರು ಆಗ ನನ್ನ ಎದೆಯಲ್ಲಿ ಕಾಂಗ್ರೆಸ್ ಪಕ್ಷದ ಇದೆ ಅಂತಿದ್ದರು. ಆಮೇಲೆ ಪಾರ್ಟಿ ಬಿಟ್ಟು ಹೋದರು ಏನ್ ಮಾಡೋಕೆ ಆಗುತ್ತೆ ಎಂದು ಕಿಡಿಕಾರಿದ್ದಾರೆ.
Advertisement
ಸಿಡಿ ಸಂಬಂಧಿಸಿದಂತೆ ಕೇಂದ್ರ ಸಚಿವ ಸದಾನಂದಗೌಡ ತಡೆಯಾಜ್ಞೆ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಈಗ ಆ ವಿಚಾರ ಬೇಡ. ಮೊದಲು ನೀವು ತನಿಖೆ ಮಾಡಿ, ಯಾವ ಸಿಡಿ ಏನ್ ವಿಚಾರ ಅಂತ ನೀವು ಹೇಳಿ. ನನಗೆ ಕೇಂದ್ರ ಸಚಿವರ ಮೇಲೆ ಗೌರವ ಇದೆ. ಅವರು ಯಾಕೆ ತಡೆಯಾಜ್ಞೆ ತಂದಿದ್ದಾರೆ ಅಂತ ನನಗೆ ಗೊತ್ತಿಲ್ಲ. ನಮ್ಮ ರಾಜ್ಯದ ಕೇಂದ್ರ ಮಂತ್ರಿ ಅವರು ನಮ್ಮ ರಾಜ್ಯಕ್ಕೆ ನ್ಯಾಯ ಒದಗಿಸಿಕೊಡಲಿ ಇಷ್ಟು ಮಾತ್ರ ನಾನು ಬಯಸುತ್ತೇನೆ ಎಂದು ತಿಳಿಸಿದರು.