ಕೋಲಾರ: ವ್ಯಕ್ತಿಯೋರ್ವನನ್ನ ಆಟೋ ಸಮೇತ ಅರೆಬೆಂದ ಸ್ಥಿತಿಯಲ್ಲಿ ಸುಟ್ಟು ಹಾಕಿ ಹತ್ಯೆ ಮಾಡಿರುವ ಘಟನೆ ಕೋಲಾರದಲ್ಲಿ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಮಲ್ಲಯ್ಯನಗುರ್ಕಿ ಗ್ರಾಮದ ಬಳಿ ನಡೆದಿದೆ.
ಕೋಲಾರದ ಮಲ್ಲಯ್ಯನಗುರ್ಕಿ ಗ್ರಾಮದ ಬಳಿ ಯಾರೋ ಕೊಲೆ ಮಾಡಿ ಆಟೋದಲ್ಲಿ ಶವವಿಟ್ಟು ಆಟೋಗೆ ಬೆಂಕಿ ಇಟ್ಟಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ಅಪ್ಪು ಆಲಿಯಾಸ್ ರಮೇಶ್ ಎಂದು ಗುರುತಿಸಲಾಗಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆಯ ಗಂಗಮ್ಮನಪಾಳ್ಯ ನಿವಾಸಿಯಾಗಿದ್ದಾನೆ. ಮೃತ ರಮೇಶ್ ಆಟೋ ಚಾಲಕ ಕೆಲಸಮಾಡುತ್ತಿದ್ದನು.
ಬೆಂಗಳೂರಿನಲ್ಲಿದ್ದ ರಮೇಶ್ ಲಾಕ್ ಡೌನ್ ನಂತರ ಬಂಗಾರಪೇಟೆಗೆ ಬಂದು ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದನು. ಕಳೆದ ಒಂದು ವರ್ಷದ ಹಿಂದೆಯಷ್ಟೆ ರಮೇಶ್ ಪತ್ನಿಯಿಂದ ದೂರವಾಗಿದ್ದನು. ಈತನ ಇಬ್ಬರು ಮಕ್ಕಳನ್ನ ತಮ್ಮ ರಾಜೇಶ್ ಪೋಷಣೆ ಮಾಡುತ್ತಿದ್ದರು. ಆದರೆ 22 ರಂದು ರಾತ್ರಿ ಕಿಡಿಗೇಡಿಗಳು ಈತನನ್ನು ಕೊಲೆ ಮಾಡಿದ್ದಾರೆ. ಆಟೋ ಸಮೇತ ಸುಟ್ಟು ಹಾಕಿದ್ದಾರೆ. ಈ ಪ್ರಕರಣವನ್ನು ಬಂಗಾರಪೇಟೆ ಪೊಲೀಸರು ದಾಖಲು ಮಾಡಿಕೊಂಡಿದ್ದಾರೆ. ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.