ಮುಂಬೈ: ಸೋಶಿಯಲ್ ಮೀಡಿಯದಲ್ಲಿ ಪರಿಚಯವಾದ ಅಮೆರಿಕ ಮಹಿಳೆಯ ಮಾತು ಕೇಳಿ ವ್ಯಕ್ತಿಯೊಬ್ಬ 11 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ವಂಚಿತಗೊಂಡ ವ್ಯಕ್ತಿ ಮುಂಬೈ ವಿಮಾನ ನಿಲ್ದಾಣದ ಸಮೀಪವಿರುವ 5 ಸ್ಟಾರ್ ಹೋಟೆಲ್‍ನ ಪರ್ಚೆಸಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ಆದರೆ ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡಿರುವುದಾಗಿ ತಿಳಿಸಿದ್ದಾನೆ.
Advertisement
Advertisement
ಕಳೆದ ಡಿಸೆಂಬರ್ ತಿಂಗಳಿನಲ್ಲಿ ಅಮೆರಿಕಾದ ವೈನರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯಿಂದ ಈತನಿಗೆ ಫ್ರೆಂಡ್ ರಿಕ್ವೆಸ್ಟ್ ಬಂದಿದ್ದು, ನಂತರ ಇಬ್ಬರು ಮೊಬೈಲ್ ಸಂಖ್ಯೆಯನ್ನು ಹಂಚಿಕೊಂಡು ವಾಟ್ಸಪ್ ಕಾಲ್ ನಲ್ಲಿ ಮಾತನಾಡಲು ಆರಂಭಿಸಿದ್ದಾರೆ. ಹೀಗೆ ಮಹಿಳೆ ಒಮ್ಮೆ ಭಾರತದಲ್ಲಿ ಮೀನುಗಾರಿಕೆ ವ್ಯಾಪಾರ ಮಾಡಲು ಯೋಚಿಸಿದ್ದು, ಸಹಾಯ ಮಾಡುತ್ತೀರಾ ಎಂದು ವ್ಯಕ್ತಿಗೆ ಕೇಳಿದ್ದಾಳೆ. ಅಲ್ಲದೆ ವ್ಯಾಪಾರ ನಡೆಸಲು ಫಾರ್ಮ್‍ವೊಂದನ್ನು ಖರೀದಿಸುವುದಾಗಿ ಕೂಡ ಮಹಿಳೆ ವ್ಯಕ್ತಿಯೊಂದಿಗೆ ಚರ್ಚೆ ನಡೆಸಿದ್ದಳು. ಹೀಗೆ ಕೆಲವು ದಿನಗಳ ನಂತರ ವ್ಯಕ್ತಿಗೆ ಮನೆಯ ವಿಳಾಸವನ್ನು ಕೇಳಿ ಆತನಿಗೆ ವ್ಯಾಪಾರ ನಡೆಸಲು ವ್ಯವಸ್ಥೆಗೊಳಿಸಲು 50,000 ಪೌಂಡ್‍ಗಳನ್ನು ಮತ್ತು ಉಡುಗೊರೆ ಕಳುಹಿಸುವುದಾಗಿ ತಿಳಿಸಿದ್ದಾಳೆ.
Advertisement
ಒಮ್ಮೆ ಮಹಿಳೆಯೇ ಕಸ್ಟಮ್ಸ್ ಅಧಿಕಾರಿಗಳ ಹೆಸರಿನಲ್ಲಿ ವ್ಯಕ್ತಿಗೆ ಕರೆ ಮಾಡಿ ಮಹಿಳೆಯೊಬ್ಬಳು ಅಕ್ರಮವಾಗಿ ವಿದೇಶಿ ಕರೆನ್ಸಿಯನ್ನು ಆಮದು ಮಾಡಿಕೊಂಡಿದ್ದಾಳೆ. ಈ ಚಟುವಟಿಕೆ ಭಾರತೀಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ಹಾಗಾಗಿ ಹಣ ಬೇಕಾದರೆ ಶುಲ್ಕ ಪಾವತಿಸಬೇಕಾಗುತ್ತದೆ. ಜೊತೆಗೆ ನಿಮ್ಮ ಇಮೇಲ್ ಐಡಿಯನ್ನು ಕಳುಹಿಸಬೇಕಾಗುತ್ತದೆ ಎಂದು ಹೇಳಿದ್ದಾಳೆ. ನಂತರ ಶೀಘ್ರವೇ ವ್ಯಕ್ತಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಹಣವನ್ನು ಅಕ್ರಮವಾಗಿ ಆಮದು ಮಾಡಿಕೊಳ್ಳಲಾಗಿದೆ ಈ ಕುರಿತ ಕ್ರಮ ಕೈಗೊಳ್ಳಬಾರದಿದ್ದಲ್ಲಿ ದಂಡ ಪಾವತಿಸಬೇಕಾಗುತ್ತದೆ ಎಂಬ ಸಂದೇಶ ಬಂದಿದೆ.
Advertisement
ಈ ಮೇಲ್‍ನನ್ನು ನಿಜ ಎಂದು ನಂಬಿದ ವ್ಯಕ್ತಿ ಕೂಡಲೇ ಮಹಿಳೆಗೆ ಕರೆ ಮಾಡಿದ್ದಾನೆ. ಆಗ ಮಹಿಳೆ ಭಾರತಕ್ಕೆ ಆಗಮಿಸಿದಾಗ ನಿಮ್ಮ ಹಣವನ್ನು ಹಿಂದಿರುಗಿಸುವುದಾಗಿ ಮಾತು ನೀಡಿ ಸದ್ಯ ದಂಡ ಪಾವತಿಸುವಂತೆ ವ್ಯಕ್ತಿಗೆ ತಿಳಿಸಿದ್ದಾಳೆ. ಹೀಗಾಗಿ ವ್ಯಕ್ತಿ ತನ್ನ ಬಳಿ ಹಣವಿಲ್ಲದಿದ್ದರೂ ತನ್ನ ಸ್ನೇಹಿತರು, ಸಂಬಂಧಿಕರಿಂದ ಹಣ ಪಡೆದಿದ್ದಾನೆ. ಜೊತೆ ತನ್ನ ತಾಯಿ ಮತ್ತು ಪತ್ನಿ ಒಡೆವೆಯನ್ನು ಕೂಡ ಮಾರಾಟ ಮಾಡಿದ್ದಾನೆ.
ಶುಲ್ಕ ಪಾವತಿಸಿದ ನಂತರವೂ ಪಾರ್ಸೆಲ್ ಬರದಿದ್ದನ್ನು ಕಂಡು ವ್ಯಕ್ತಿಗೆ ಅನುಮಾನ ಬಂದು ಕೂಡಲೇ ಪೊಲೀಸರನ್ನು ಸಂಪರ್ಕಿಸಿದ್ದಾನೆ. ಬಳಿಕ ಪೊಲೀಸರಿಗೆ ಘಟನೆ ಕುರಿತಂತೆ ವಿವರಿಸಿ, ಸಾಲಗಾರರು ಹಣ ಹಿಂದಿರುಗಿಸುವಂತೆ ಕೇಳುತ್ತಿದ್ದಾರೆ, ಆದರೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ನನಗೆ ಉದ್ಯೋಗ ಬೇರೆ ಇಲ್ಲ ನಾನು ಭಾರೀ ಸಾಲ ಮಾಡಿದ್ದೇನೆ ಎಂದು ತಿಳಿಸಿದ್ದಾನೆ.