ಬಿಗ್‍ಬಾಸ್ ಫಿನಾಲೆ ವಾರ ಮನೆಯ ಸ್ಪರ್ಧಿಗಳು ತಮ್ಮ ತಮ್ಮ ಆಸೆಗಳನ್ನು ಬಿಗ್‍ಬಾಸ್ ಮುಂದೆ ವ್ಯಕ್ತಪಡಿಸಲು ಅವಕಾಶ ಸಿಕ್ಕಿತ್ತು. ಆಗ ವೈಷ್ಣವಿ ಕೇಳಿರುವ ಬೇಡಿಕೆಯ ಬದಲಾಗಿ ಬಿಗ್‍ಬಾಸ್ ಇನ್ನೊಂದು ಸರ್ಪ್ರೈಸ್ ನೀಡಿದ್ದಾರೆ.
ಅದರಂತೆ ಬಿಗ್‍ಬಾಸ್ ದೊಡ್ಮನೆಯ ಗಾರ್ಡನ್ ಏರಿಯಾದಲ್ಲಿ ವೈಷ್ಣವಿ ಅವರ ಬಿಗ್‍ಬಾಸ್ ಜರ್ನಿಯ ಕ್ಯೂಟ್ ಫೋಟೋಗಳನ್ನು ಜಗಮಗಿಸುವ ಲೈಟ್‍ಗಳ ಮಧ್ಯೆ ಇಟ್ಟು, ವೈಷ್ಣವಿ ಅವರ ಕುರಿತಾಗಿ ಮನೆಯವರಿಗೆ ಇರುವ ಅಭಿಪ್ರಾಯವನ್ನು ಹಂಚಿಕೊಳ್ಳಲು ಅವಕಾಶ ಕೊಟ್ಟಿದ್ದಾರೆ. ಈ ವೇಳೆ ಮನೆಮಂದಿ ಆಡಿರುವ ಕೆಲವು ಮಾತುಗಳನ್ನು ಕೇಳಿ ವೈಷ್ಣವಿ ತುಂಬಾ ಸಂತೋಷಪಟ್ಟಿದ್ದಾರೆ.
View this post on Instagram
ಬಿಗ್‍ಬಾಸ್ ಮನೆಯಲ್ಲಿ ನನಗೆ ಒಳ್ಳೆಯ ಸ್ನೇಹಿತರು ಸಿಕ್ಕಿದ್ದಾರೆ. ತುಂಬಾ ಸ್ಪೆಷಲ್ ನನಗೆ ಆಗಿದೆ. ಪ್ರತಿ ದಿನವನ್ನು ನಾನು ಎಂಜಾಯ್ ಮಾಡಿದ್ದೇನೆ. ಬಿಗ್‍ಬಾಸ್ ಕಳುಹಿಸಿರುವ ಈ ಫೋಟೋಗಳು ಒಂದೊಂದು ಒಂದು ಕಥೆ ಹೇಳುತ್ತವೆ. ಮಂಜಣ್ಣ ಅವರು ನನಗೆ ಕಾಂಪಿಟೇಟರ್ ಅಲ್ಲ ಎಂದು ಕಮೆಂಟ್ ಮಾಡಿದ್ದರು. ನಾನು ಅದನ್ನು ಚಾಲೆಂಜ್ ಆಗಿ ತೆಗೆದುಕೊಂಡು ಪ್ರಯತ್ನಿಸಿದ್ದೇನೆ. ನಿನ್ನ ಬೆಸ್ಟ್ ನೀನು ಮಾಡು ಎಂದು ನನಗೆ ಕೆಲವು ಕಿವಿ ಮಾತು ಹೇಳಿದ್ದರು. ಹೀಗಾಗಿ ನಾನು ಇಲ್ಲಿವರೆಗೂ ಬಂದಿದ್ದೇನೆ ಥ್ಯಾಕ್ಸ್ ಮಂಜಣ್ಣ ಎಂದರು.
ಮೊದಲ ದಿನದಿಂದಲೂ ಹೇಗೆ ಇದ್ದಾರೆ ಈವರೆಗೂ ಹಾಗೇ ಇದ್ದಾರೆ. ಒಳ್ಳೆಯ ಸ್ನೇಹಿತನನ್ನು ನಾನು ನಿಮ್ಮಲ್ಲಿ ನೋಡುತ್ತೇನೆ ಎಂದು ಅರವಿಂದ್ ಹೇಳಿದ್ದಾರೆ. ವೈಷ್ಣವಿ ನನಗೆ ಬಿಗ್‍ಬಾಸ್ ಮನೆಗಿಂತ ಬರುವ ಮೊದಲೆ ಗೊತ್ತು. ನಿಮ್ಮ ಮನಸ್ಸು ಒಳ್ಳೆಯದು. ನಿಮ್ಮ ನಗು, ಅಡುಗೆ, ಜೋಕ್ಸ್ ಎಲ್ಲ ನನಗೆ ಇಷ್ಟ ಎಂದು ದಿವ್ಯಾ ಉರುಡುಗ ಹೇಳಿದ್ದಾರೆ. ಈ ಮನೆಯಲ್ಲಿ ಮನಸ್ಸು ಬಿಚ್ಚಿ ಮಾತನಾಡಲು ಇರುವ ಏಕೈಕ ವ್ಯಕ್ತಿ ಅಂದ್ರೆ ವೈಷ್ಣವಿ ಆಗಿದ್ದಾರೆ. ಯಾರನಾದ್ರೂ ನಂಬಬೇಕು, ಹೃದಯದಿಂದ ಮಾತನಾಡಬೇಕು ಎಂದು ಈ ಮನೆಯಲ್ಲಿ ಇದ್ದರೇ ಅದು ಇವರಾಗಿದ್ದಾರೆ. ಮೊದಲು ಅಷ್ಟು ಗೇಮ್ ಆಡದ ವೈಷ್ಣವಿ ನಂತರ ಚೆನ್ನಾಗಿ ಆಡುತ್ತಲೆ ಬಂದರು. ತಾಯಿ ಗುಣವನ್ನು ಹೊಂದಿರುವ ವೈಷ್ಣವಿ ಒಳ್ಳೆಯದಾಗಲಿ ಎಂದು ಸಂಬರಗಿ ಹೇಳಿದ್ದಾರೆ.
ವೈಷ್ಣವಿ ನಿನ್ನ ಹೆಸರಿನಷ್ಟೇ ನೀನು ಸುಂದರವಾಗಿದ್ದೀಯ. ನನಗೆ ತಾಳ್ಮೆ ಬಂದಿದೆ ಎಂದರೆ ಅದುವೆ ನಿನ್ನಿಂದ ಎಂದು ದಿವ್ಯಾ ಸುರೇಶ್ ಹೇಳಿದ್ದಾರೆ. ಸ್ಪರ್ಧಿನೇ ಅಲ್ಲ ಎಂದು ವೈಷ್ಣವಿಯನ್ನು ಹೇಳಿದ್ದೆ. ಆದರೆ ವೈಷ್ಣವಿ ಆಟವೇ ನಂತರ ಬದಲಾಯಿತ್ತು. ವೈಷ್ಣವಿ ತುಂಬಾ ತರ್ಲೆ, ಚೇಷ್ಟೆ ಮಾಡಿದ್ದೇವೆ ತುಂಬಾ ಸಂತೋಷವಾಗಿದೆ ಎಂದು ಮಂಜು ಹೇಳಿದ್ದಾರೆ. ಹೀಗೆ ಮನೆಮಂದಿ ವೈಷ್ಣವಿಯನ್ನು ಹಾಡಿ ಹೋಗಳಿದ್ದಾರೆ.