– ಸಹಾಯಕ್ಕೆ ಬಂದ ಇನಿಯನ ಗೆಳೆಯನಿಂದ್ಲೇ ರೇಪ್
– ಹೋಟೆಲ್, ಫ್ಲ್ಯಾಟ್‍ಗಳಲ್ಲಿರಿಸಿ ನಿರಂತರ ಅತ್ಯಾಚಾರ
– ಚಿನ್ನಾಭರಣ, ನಗದು ದೋಚಿದ ನಯವಂಚಕ
ರಾಂಚಿ: ವೈವಾಹಿಕ ಜೀವನದಲ್ಲಿ ಬೇಸತ್ತು ಇನಿಯನ ಜೊತೆ ಜೂಟ್ ಆಗಲು ಪ್ಲಾನ್ ಮಾಡಿದ್ದ ಮಹಿಳೆ ಮೇಲೆ ಅತ್ಯಾಚಾರ ನಡೆದಿರುವ ಘಟನೆ ಜಾರ್ಖಂಡ್ ರಾಜ್ಯದ ಧನಬಾದ್ ನಗರದಲ್ಲಿ ನಡೆದಿದೆ. ಸಂತ್ರಸ್ತೆ ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಯುವಕ ಪ್ರೇಮಪಾಶದಲ್ಲಿ ಸಿಲುಕಿದ್ರೆ ಸಹಾಯಕ್ಕೆ ಆತನ ಗೆಳೆಯರು ಸದಾ ಮುಂದಿರುತ್ತಾರೆ. ಈ ರೀತಿಯ ಕಥೆಯಾಧರಿತ ಸಿನಿಮಾಗಳನ್ನು ನೋಡಿರಬಹುದು ಮತ್ತು ನಿಮ್ಮ ಪರಿಸರದಲ್ಲಿ ಇಂತಹ ಘಟನೆಗಳು ನಡೆದಿರುತ್ತವೆ. ಆದ್ರೆ ಪ್ರೀತಿಸಿ ಓಡಿ ಹೋಗಲು ಪ್ಲ್ಯಾನ್ ಮಾಡಿದ್ದ ಜೋಡಿಯ ಸಹಾಯಕ್ಕಾಗಿ ಬಂದ ನಯವಂಚಕ ಗೆಳೆಯನ ಪ್ರೇಯಸಿಯನ್ನ ಅತ್ಯಾಚಾರ ಎಸಗಿದ್ದಾನೆ. ಮಹಿಳೆ ಬಳಿಯಲ್ಲಿದ್ದ ಚಿನ್ನಾಭರಣ ಮತ್ತು ನಗದು ದೋಚಿದ್ದಾನೆ.
ಬಾದಲ್ ಗೌತಮ್ ಸ್ನೇಹಿತನ ಗೆಳತಿಯನ್ನ ಅತ್ಯಾಚಾರ ಎಸಗಿದ ಯುವಕ. ಗೌತಮ್ ಧನಬಾದ್ ನಗರದಲ್ಲಿರು ಕೋಲ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿಕೊಂಡಿದ್ದಾನೆ. ಜೋಡಿ ಮನೆಯಿಂದ ಓಡಿ ಹೋಗಲು ಪ್ಲಾನ್ ಮಾಡಿದ್ದಾಗ ಗೌತಮ್ ಇಬ್ಬರ ಸಹಾಯಕ್ಕೆ ಬಂದಿದ್ದನು. ಮಹಿಳೆ ಸಹ ಪ್ರಿಯಕರನ ಗೆಳೆಯ ಅಂತ ಗೌತಮ್ ನನ್ನು ನಂಬಿದ್ದಳು.
ಏನಿದು ಲವ್ ಕಹಾನಿ?: ಪತಿ ಮತ್ತು ಮಕ್ಕಳೊಂದಿಗೆ ಮಹಿಳೆ ಕೋಲ್ಕತ್ತಾದಲ್ಲಿ ವಾಸವಾಗಿದ್ದಳು. ವೈವಾಹಿನ ಜೀವನದಲ್ಲಿ ಬೇಸರಗೊಂಡ ಮಹಿಳೆ ಯುವಕನೊಬ್ಬನ ಜೊತೆ ಓಡಿ ಹೋಗಲು ನಿರ್ಧಾರ ಮಾಡಿದ್ದಳು. ಈ ವೇಳೆ ಮಹಿಳೆಯ ಪ್ರಿಯಕರ ಗೆಳೆಯ ಗೌತಮ್ ಸಹಾಯ ಕೇಳಿದ್ದಾನೆ. ಪ್ಲಾಣ್ ಮಾಡಿಕೊಂಡಂತೆ ಮಹಿಳೆ ಜುಲೈ 11,2020ರಂದು ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಹಣ ಜೊತೆ ಹೊರ ಬಂದಿದ್ದಾಳೆ.
ಗೆಳೆಯನಿಗೆ ಕೈ ಕೊಟ್ಟ ಗೌತಮ್: ಮಹಿಳೆಯನ್ನು ನೋಡುತ್ತಿದ್ದಂತೆ ಗೌತಮ್ ತನ್ನನ್ನು ನಂಬಿದ ಗೆಳೆಯನಿಗೆ ಮೋಸ ಮಾಡಿದ್ದಾನೆ. ಆತನಿಗೆ ತಿಳಿಯದಂತೆ ಮಹಿಳೆಯನ್ನ ಅಪಹರಿಸಿ ರಾಂಚಿ, ದೆಹಲಿಗೆ ಕರೆ ತಂದಿದ್ದಾನೆ. ಹೋಟೆಲ್ ಮತ್ತು ಫ್ಲ್ಯಾಟ್ ನಲ್ಲಿರಿಸಿ ಮಹಿಳೆಯ ಅತ್ಯಾಚಾರ ಎಸಗಿದ್ದಾನೆ. ಕೊನೆಗೆ ಹಣ ಮತ್ತು ಚಿನ್ನ ತೆಗೆದುಕೊಂಡು ಎಸ್ಕೇಪ್ ಆಗಿದ್ದಾನೆ. ಈ ವಿಷಯ ಯಾರಿಗೂ ತಿಳಿಸಿಕೂಡದು ಎಂದು ಧಮ್ಕಿ ಸಹ ಹಾಕಿದ್ದಾನೆ. ಐಎಎಸ್ ಅಧಿಕಾರಿಗಳ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋ ತೋರಿಸಿ ತಾನು ಪ್ರಭಾವಿಶಾಲಿ ವ್ಯಕ್ತಿ ಎಂದು ಹೇಳಿಕೊಂಡಿದ್ದಾನೆ.
ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು, ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ನ್ಯಾಯಾಧೀಶರ ಮುಂದೆಯೂ ಮಹಿಳೆಯ ಹೇಳಿಕೆಯನ್ನು ದಾಖಲಿಸಲಾಗಿದೆ. ಆರೋಪಿ ಗೌತಮ್ ವಿರುದ್ಧ ಈ ಮೊದಲು ದೂರು ದಾಖಲಾಗಿವೆ. ಪ್ರಭಾವಿ ವ್ಯಕ್ತಿಗಳ ಜೊತೆ ಫೋಟೋ ತೆಗೆದುಕೊಳ್ಳುತ್ತಿದ್ದ ಗೌತಮ್, ಅವುಗಳನ್ನೇ ತನ್ನ ನೀತ ಕೃತ್ಯಗಳಿಗೆ ಬಂಡವಾಳನ್ನಾಗಿ ಮಾಡಿಕೊಳ್ಳುತ್ತಿದ್ದನು. ಆರೋಪಿಯನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.