ಬೆಂಗಳೂರು : ಸ್ಯಾಂಡಲ್‍ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಮಗ ಯಥರ್ವ ಜೊತೆ ಇರುವ ಫೋಟೋವೊಂದನ್ನು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಈ ಫೋಟೋ ಇದೀಗ ಎಲ್ಲೆಡೆ ಧೂಳ್ ಎಬ್ಬಿಸುತ್ತಿದೆ.
View this post on Instagram
ಇತ್ತೀಚೆಗಷ್ಟೇ ರಾಕಿಂಗ್ ಸ್ಟಾರ್ ಯಶ್ ಕುಟುಂಬ ಸಮೇತ ಐಲ್ಯಾಂಡ್ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಬೇಬಿ ಶಾರ್ಕ್ ಗಳನ್ನು ನೋಡಲು ಭೇಟಿ ನೀಡಿದ್ದಾಗ ಮಗ ಯಥರ್ವ್ ಜೊತೆ ಯಶ್ ಫೋಟೋ ಕ್ಲಿಕ್ಕಿಸಿಕೊಂಡಿದ್ದರು.
View this post on Instagram
ಮಾಲ್ಡೀವ್ಸ್ ಟ್ರಿಪ್‍ಗೆ ತೆರಳಿದ್ದ ವೇಳೆ ಯಶ್ ಮಗ ಯಥರ್ವ್ ಯಶ್‍ನನ್ನು ತಮ್ಮ ಕೈ ಮೇಲೆ ಎತ್ತಿಕೊಂಡಿದ್ದು, ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಇನ್ನೂ ಫ್ಯಾಮಿಲಿ ಜೊತೆ ಟ್ರಿಪ್ ಫುಲ್ ಎಂಜಾಯ್ ಮಾಡಿದ್ದ ಯಶ್, ಕಳೆದ ವಾರ ಬೆಂಗಳೂರಿಗೆ ಮರಳಿದ್ದಾರೆ. ಪ್ರವಾಸದ ವೇಳೆ ತೆಗೆದುಕೊಂಡಿದ್ದ ಮಗನೊಂದಿಗಿನ ಫೋಟೋವನ್ನು ಜನವರಿ 27ರಂದು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲೂ ವಿಶೇಷವೆನೆಂದರೆ ಯಶ್ ಕ್ಯಾಪ್ಷನ್ ಎಲ್ಲರ ಗಮನ ಸೆಳೆಯುತ್ತಿದೆ.
View this post on Instagram
ಹೌದು.. ಬೇಬಿ ಶಾರ್ಕ್ ಡು..ಡು..ಡು ಜೊತೆಗೆ ಡಡ್ಡಾ ಶಾರ್ಕ್ ಡು..ಡು..ಡು ಎಂಬ ಪ್ರಾಸ ಪದಗಳೊಂದಿಗೆ ಕ್ಯಾಪ್ಷನ್ ಹಾಕಿ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಯಶ್ ಪತ್ನಿ ರಾಧಿಕಾ ಪಂಡಿತ್ ಜೊತೆ ತಂಗಿದ್ದ ರೆಸಾರ್ಟ್ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಫ್ಯಾಮಿಲಿ ಹಾಲಿಡೇ ಬಹಳ ಮುಖ್ಯ. ಇದು ನಮ್ಮನ್ನು ಪುನರ್ ಯೌವನಗೊಳಿಸುತ್ತದೆ ಎಂದು ರಾಧಿಕಾ ಪಂಡಿತ್ ಹೇಳಿಕೊಂಡಿದ್ದಾರೆ.
View this post on Instagram
ಸದ್ಯ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಿಗ್ ಬಜೆಟ್ ಚಿತ್ರ ಕೆಜಿಎಫ್-2 ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ, ಈ ಚಿತ್ರಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿದ್ದು, ಹೊಂಬಾಳೆ ಬ್ಯಾನರ್ ಆಡಿ ಚಿತ್ರವನ್ನು ನಿರ್ಮಿಸಲಾಗಿದೆ. ಈ ವರ್ಷದ ಕೊನೆಯಲ್ಲಿ ಚಿತ್ರ ಎಲ್ಲ ಥಿಯೇಟರ್‍ಗಳ ಸ್ಕ್ರೀನ್ ಮೇಲೆ ಬರಲಿದೆ ಎನ್ನಲಾಗ್ತಿದೆ.