ನವದೆಹಲಿ: ಇಂಡೋ-ಟಿಬೆಟನ್ ಗಡಿಯಲ್ಲಿ 5ರ ಪೋರ ಖಡಕ್ ಆಗಿ ಸೆಲ್ಯೂಟ್ ಮಾಡಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಪುಟ್ಟ ಪೋರ ಲಡಾಖ್‍ನಲ್ಲಿ ನಿಂತು ಖಡಕ್ ಆಗಿ ಸೆಲ್ಯೂಟ್ ಹೊಡೆದಿದ್ದು, ಇದೀಗ ನೆಟ್ಟಿಗರ ಮನ ಗೆದ್ದಿದೆ. ಸಾಕಷ್ಟು ಜನ ಶೇರ್ ಮಾಡಿ, ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೀಡಿಯೋವನ್ನು ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್(ಐಟಿಬಿಪಿ) ಸೈನಿಕರು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದೀಗ ಸಖತ್ ವೈರಲ್ ಆಗಿದೆ.
Advertisement
Salute!
Happy and inspiring again…
Nawang Namgyal, the 5 years old student of LKG salutes Indo-Tibetan Border Police (ITBP) jawans near a border village in Ladakh. #Himveers pic.twitter.com/aoA30ifbnU
— ITBP (@ITBP_official) November 15, 2020
Advertisement
ಪುಟ್ಟ ಪೋರ ಉತ್ಸಾಹಭರಿತನಾಗಿ ಹಾಗೂ ಮುಗ್ದತೆಯಿಂದ ಸೆಲ್ಯೂಟ್ ಮಾಡಿದ್ದು, ಸಾಕಷ್ಟು ಜನರ ಮನ ಗೆದ್ದಿದೆ. ಈ ಬಾಲಕನಿಗೆ ಇಂದು ಪ್ಯಾರಾ ಮಿಲಿಟರಿ ಪಡೆ ಸನ್ಮಾನ ಮಾಡಿದೆ. ನವಾಂಗ್ ನಮ್‍ಗ್ಯಾಲ್(5) ಎಲ್‍ಕೆಜಿ ವಿದ್ಯಾರ್ಥಿಯಾಗಿದ್ದು, ಲಡಾಖ್‍ನ ಚುಶುಲ್ ಪ್ರದೇಶದ ನಿವಾಸಿಯಾಗಿದ್ದಾನೆ. ಬಾಲಕ ಸೈನಿಕರಿಗೆ ಸೆಲ್ಯೂಟ್ ಮಾಡುವ ಈ ವೀಡಿಯೋವನ್ನು ಐಟಿಬಿಪಿ ಅಕ್ಟೋಬರ್ ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಾಗಿನಿಂದ ಜಾಲತಾಣಗಳಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿದ್ದಾನೆ.
Advertisement
Advertisement
ಬಾಲಕನ ಉತ್ಸಾಹ ಮುಗ್ದತೆಗೆ ಮನಸೋತ ಐಟಿಬಿಪಿ ಅಧಿಕಾರಿಗಳು ಇಂದು ಆತನಿಗೆ ಸೇನೆ ಸಮವಸ್ತ್ರ ಹಾಕಿ ಸನ್ಮಾನಿಸಿದ್ದಾರೆ. ಸಮವಸ್ತ್ರ ಧರಿಸಿ ಕ್ಯಾಂಪ್‍ನಲ್ಲಿ ಬಾಲಕ ಸೆಲ್ಯೂಟ್ ಮಾಡುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಐಟಿಬಿಪಿ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದ್ದು, ‘ಹ್ಯಾಪಿ ಆ್ಯಂಡ್ ಇನ್‍ಸ್ಪೈರಿಂಗ್ ಅಗೇನ್’ ಎಂದು ಬರೆದು ವೀಡಿಯೋ ಟ್ವೀಟ್ ಮಾಡಲಾಗಿದೆ.
Salute!
Namgyal, a local kid in Chushul, Ladakh saluting the ITBP troops passing by.
The enthusiastic kid saluting with high josh was randomly clicked by an ITBP Officer on 8 October morning. pic.twitter.com/dak8vV8qCJ
— ITBP (@ITBP_official) October 11, 2020
ಮೂಲ ವೀಡಿಯೋವನ್ನು ಐಟಿಬಿಪಿ ಅಧಿಕಾರಿ ಸೆರೆ ಹಿಡಿದಿದ್ದು, ಬಾಲಕ ಸೈನಿಕರಿಗೆ ಸೆಲ್ಯೂಟ್ ಮಾಡುವುದನ್ನು ತೋರಿಸಲಾಗಿದೆ. ಮೊಬೈಲ್ ಹಿಡಿದು ವೀಡಿಯೋ ಮಾಡುತ್ತಿದ್ದ ಅಧಿಕಾರಿ ಈ ರೀತಿ ಮಾಡು ಎಂದು ನಿರ್ದೇಶನ ನೀಡಿದಂತೆ ಬಾಲಕ ಉತ್ಸಾಹಭರಿತನಾಗಿ ಹೆಜ್ಜೆ ಹಾಕಿದ್ದಾನೆ.