ಮಂಡ್ಯ: ವೈಯಕ್ತಿಕ ದ್ವೇಷಕ್ಕಾಗಿ ಜಮೀನಲ್ಲಿ ಬೆಳೆದಿದ್ದ ತೆಂಗು ಹಾಗೂ ಅಡಿಕೆ ಸಸಿಗಳನ್ನು ಕಿತ್ತು ಹಾಕಿರುವ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ರಾಮನಕೊಪ್ಪಲು ಗ್ರಾಮದಲ್ಲಿ ನಡೆದಿದೆ.
Advertisement
ರಾಮನಕೊಪ್ಪಲು ಗ್ರಾಮದ ಚಂದ್ರಪ್ಪ ಅವರು ತಮ್ಮ ಜಮೀನಿನಲ್ಲಿ 100 ಅಡಿಕೆ ಹಾಗೂ 100 ತೆಂಗಿನ ಸಸಿಗಳನ್ನು ಕಿತ್ತುಹಾಕಲಾಗಿದೆ. ಇದಲ್ಲದೇ ಎಲೆಕ್ಟ್ರಿಕ್ ಕೇಬಲ್‍ನ್ನು ಸಹ ಕಟ್ ಮಾಡಲಾಗಿದೆ. ಇದೇ ಗ್ರಾಮದ ಮೋಹಿತ್ ಎಂಬಾತ ವೈಯಕ್ತಿಕ ದ್ವೇಷಕ್ಕಾಗಿ ಈ ಕೃತ್ಯ ನಡೆಸಿದ್ದಾನೆ ಎಂದು ರೈತರು ಆರೋಪ ಮಾಡಿದ್ದಾರೆ.
Advertisement
Advertisement
ಈ ಸಂಬಂಧ ಜೂನ್ 13 ರಂದು ಚಂದ್ರಪ್ಪ ಕೆಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮೋಹಿತ್ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ದೂರಿನಲ್ಲಿ ಹೇಳಿದ್ದರು. ದೂರು ನೀಡಿ ಇಷ್ಟು ದಿನಗಳು ಆದರು ಸಹ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ರಾಜಕೀಯ ಒತ್ತಡ ಇರುವುದರಿಂದ ಪೊಲೀಸರು ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿಲ್ಲ ಎನ್ನಲಾಗುತ್ತಿದೆ. ಪೊಲೀಸರು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ರೈತನಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
Advertisement