ಯಾದಗಿರಿ: ವೈದ್ಯರು ದೇವರ ಸಮಾನ ಎಂದು ಕರೆಯುತ್ತಾರೆ. ಆದರೆ ಯಾದಗಿರಿಯಲ್ಲಿ ಮಾತ್ರ ವೈದ್ಯರು ಮಾಡಿರುವ ಎಡವಟ್ಟಿನಿಂದ 2 ತಿಂಗಳ ಹಸುಗೂಸು ಸಾವು ಬದುಕಿನ ಮಧ್ಯೆ ಹೋರಾಡುವಂತಾಗಿದೆ. ನಗರದ ವಾತ್ಸಲ್ಯ ಮಕ್ಕಳ ಆಸ್ಪತ್ರೆಯ ವೈದ್ಯರು ಮಾಡಿದ ಕರ್ತವ್ಯ ಲೋಪದಿಂದ ನೆಗಡಿ ಕೆಮ್ಮುನಿಂದ ಬಳಲುತ್ತಿದ್ದ, ಎರಡು ವರ್ಷದ ಮಗು ಈಗ ಪ್ರಜ್ಞಾಹೀನ ಸ್ಥಿತಿಯಲ್ಲಿದೆ.
Advertisement
ಸುರಪುರದ ನಿವಾಸಿ ಮತ್ತು ಸುರಪುರ ನಗರಸಭೆ ಯುಆರ್ ಡ್ಲೂ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಝರಿನಾ ಬೇಗಂ ಎಂಬವರು ತಮ್ಮ ಎರಡು ತಿಂಗಳ ಇಮಜಾನ್‍ಗೆ, ನೆಗಡಿ ಕೆಮ್ಮು ಹಿನ್ನೆಲೆ ಯಾದಗಿರಿ ವಾತ್ಸಲ್ಯ ಮಕ್ಕಳ ಆಸ್ಪತ್ರೆಗೆ ಕರೆತಂದು, ಚಿಕಿತ್ಸೆ ಕೊಡಿಸಲು ಮುಂದಾಗಿದ್ದರು.
Advertisement
ಆಸ್ಪತ್ರೆ ಸಿಬ್ಬಂದಿ ಪಕ್ಕದ ಮಗುವಿಗೆ ಕೊಡುವ ಡೋಸ್ ಇಂಜೆಕ್ಷನ್‍ನ್ನು ಝರಿನಾ ಬೇಗಂ ಮಗುವಿಗೆ ನೀಡಿದ್ದಾರೆ. ಈ ಪರಿಣಾಮ ಮಗು ಗಾಢ ನಿದ್ದೆ ಜಾರಿ ಬಿಟ್ಟಿದೆ. ಕಳೆದ ಏಳೆಂಟು ಗಂಟೆಯಿಂದ ಮಗು ಕಣ್ಣು ಬಿಡುತ್ತಿಲ್ಲ. ಇದರಿಂದಾಗಿ ಗಾಬರಿಗೊಂಡ ಝರಿನಾ ಬೇಗಂ ವೈದ್ಯರಿಗೆ ವಿಷಯ ತಿಳಿಸಿದ್ದಾರೆ. ಆಗ ಮಗುವಿನ ಔಷಧಿ ಬದಲಾದ ವಿಚಾರ ತಿಳಿದಿದೆ. ಈಗ ವೈದ್ಯರು ಉಲ್ಟಾ ಹೊಡೆದಿದ್ದು, ಮಗುವಿಗೆ ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಆಗುವುದಿಲ್ಲ, ರಾಯಚೂರಿಗೆ ಕರೆದುಕೊಂಡು ಹೋಗುವಂತೆ ಒತ್ತಡ ಹಾಕಿದ್ದಾರೆ.
Advertisement
Advertisement
ಹಲವು ವರ್ಷದ ಬಳಿಕ ಝರಿನಾ ಬೇಗಂ ಗಂಡು ಮಗುವಾಗಿದ್ದು, ಗಂಡ ಸಹ ಬಿಟ್ಟು ಹೋಗಿದ್ದಾನೆ. ಈಗ ಮಗುವನ್ನು ಉಳಿಸಿಕೊಳ್ಳಲು ನಾನಾ ಕಷ್ಟಪಡುವಂತಾಗಿದೆ. ಝರಿನಾ ಬೇಗಂ ಆರೋಪ ತಳ್ಳಿಹಾಕಿರುವ ಆಸ್ಪತ್ರೆ ವೈದ್ಯರು ಝರಿನಾ ಬೇಗಂ ಮಾನಸಿಕವಾಗಿ ಸರಿ ಇಲ್ಲ ಅಂತ ಹೇಳಿದ್ದಾರೆ.