ಮಂಡ್ಯ: ಖಾಸಗಿ ಕ್ಲಿನಿಕ್ ವೈದ್ಯ ನೀಡಿದ ಇಂಜೆಕ್ಷನ್‍ನಿಂದ ಯುವಕ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಗ್ರಾಮಸ್ಥರು ಹಾಗೂ ಯುವಕನ ಪೋಷಕರು ಶವವನ್ನು ಅಂತ್ಯಕ್ರಿಯೆ ನಡೆಸದೇ ಮಂಡ್ಯದ ಮಿಮ್ಸ್ ಆಸ್ಪತ್ರೆಯ ಶವಗಾರದ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.
Advertisement
ಮಂಡ್ಯ ತಾಲೂಕಿನ ಚಂದಗಾಲು ಗ್ರಾಮದ ವಿಜಯ್‍ಕುಮಾರ್‍ರವರ ಮಗ ನಿಶಾಂತ್ (17) ಮೃತಪಟ್ಟಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ನಿಶಾಂತ್‍ಗೆ ಜ್ವರ ಇದ್ದ ಕಾರಣ ವಿ.ಸಿ ಫಾಂ ಗೇಟ್ ಬಳಿ ಇರುವ ಖಾಸಗಿ ಕ್ಲಿನಿಕ್‍ಗೆ ಹೋದ ವೇಳೆ ವೈದ್ಯ ಸಂತೋಷ್ ಇಂಜೆಕ್ಷನ್ ನೀಡಿದ್ದಾರೆ. ಇದಾದ ಬಳಿಕ ನಿಶಾಂತ್ ಆರೋಗ್ಯದಲ್ಲಿ ಏರುಪೇರು ಆದ ಕಾರಣ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
Advertisement
Advertisement
ನಂತರ ಮೈಸೂರಿಗೆ ಕರೆದುಕೊಂಡು ಹೋಗಿ ಎಂದು ಮಿಮ್ಸ್ ಸಿಬ್ಬಂದಿ ಶಿಫಾರಸ್ಸು ಮಾಡಿದ್ದಾರೆ. ಬಳಿಕ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಶಾಂತ್ ಸಾವನ್ನಪ್ಪಿದ್ದಾರೆ. ನಿಶಾಂತ್ ಸಾವಿಗೆ ವಿ.ಸಿ ಫಾಂ ಗೇಟ್ ಬಳಿಯ ಖಾಸಗಿ ಕ್ಲಿನಿಕ್‍ನ ವೈದ್ಯ ಸಂತೋಷ್ ನೀಡಿದ ಇಂಜೆಕ್ಷನ್‍ನಿಂದಲೇ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.
Advertisement
ವೈದ್ಯ ಸಂತೋಷ್‍ರನ್ನು ಬಂಧಿಸಿ, ಮೃತ ಯುವಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ಸದ್ಯ ಈ ಪ್ರಕರಣ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇದನ್ನೂ ಓದಿ:ಬ್ಲೂ ಬೇಬಿ ಸಿಂಡ್ರೋಮ್ – ಸಿದ್ದಾರ್ಥ ಆಸ್ಪತ್ರೆಯಲ್ಲಿ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ