ಬೆಂಗಳೂರು: ವೈದ್ಯಕೀಯ ಶಿಕ್ಷಣ ಖಾತೆ ನನಗೆ ನೀಡುತ್ತಿರುವ ಬಗ್ಗೆ ಸಿಎಂ ಕಚೇರಿಯಿಂದ ಮಾಹಿತಿ ಬಂದಿದೆ ಎಂದು ಸಚಿವ ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಖಾತೆ ತೆಗೆದುಕೊಳ್ಳುವುದು ಮುಖ್ಯ ಅಲ್ಲ. ಯಾರ ಬಳಿಯೂ ಇದ್ದರೂ ಆರೋಗ್ಯ ಮತ್ತು ವೈದ್ಯಕೀಯ ಒಬ್ಬರ ಬಳಿ ಇರಬೇಕು. ಅದನ್ನು ನಿಭಾಯಿಸಲು ಸುಲಭವಾಗುತ್ತೆ.ವ್ಯಾಕ್ಸಿನ್ ಹಂಚಿಕೆ ಮಾಡಬೇಕಾಗಿದೆ. ಯಾವುದೇ ಸರ್ಕಾರ ಬಂದರೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣವನ್ನ ಒಟ್ಟಿಗೆ ಕೊಡಬೇಕು. ಖಾತೆ ಕೊಟ್ಟಿದ್ದರೆ ಸಿಎಂ ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಖಾತೆ ಹಂಚಿಕೆ ವಿಚಾರದಲ್ಲಿ ಸಿಎಂ ಒತ್ತಡ ಇರುವುದು ಸಹಜ. ಹೊಸದಾಗಿ ಸಚಿವರಾಗಿದ್ದವರಿಗೂ ಖಾತೆ ಹಂಚಿಕೆ ಮಾಡಬೇಕಿದೆ. ಮುಖ್ಯಮಂತ್ರಿಗಳ ಮುಂದೆ ಅನೇಕ ಕಠಿಣ ಸವಾಲುಗಳಿವೆ. ಇರುವಂತಹ ಖಾತೆಗಳಲ್ಲಿ ಅದರು ಹೊಂದಾಣಿಕೆ ಮಾಡಬೇಕಾಗುತ್ತೆ. ಈ ರೀತಿಯ ಖಾತೆ ಬದಲಾವಣೆಯಿಂದ ಯಾವುದೇ ನೆಗೆಟಿವ್ ಸಂದೇಶ ರವಾನೆಯಾಗಲ್ಲ ಎಂದು ಹೇಳಿದರು.