ವೈದ್ಯಕೀಯ ಪರೀಕ್ಷೆ ಬರೆಯಲು ಬಂದ ಸಾಯಿ ಪಲ್ಲವಿ – ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್

Public TV
1 Min Read
dai pallavi

– ಮಾಸ್ಕ್ ತೊಟ್ಟು ಗೌಪ್ಯವಾಗಿ ಬಂದರೂ ಕಂಡುಹಿಡಿದ ಅಭಿಮಾನಿಗಳು

ಚೆನ್ನೈ: ವೈದ್ಯಕೀಯ ಪರೀಕ್ಷೆ ಬರೆಯಲು ಕಾಲೇಜಿಗೆ ಹೋದ ನಟಿ ಸಾಯಿ ಪಲ್ಲವಿಯವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿರುವ ಘಟನೆ ತಿರುಚ್ಚಿಯಲ್ಲಿ ನಡೆದಿದೆ.

ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿಯವರು, ಈ ವಾರದ ಆರಂಭದ ದಿನಗಳಲ್ಲಿ ತಿರುಚ್ಚಿಯಲ್ಲಿರುವ ಎಂಎಎಂ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಸಾಯಿ ಪಲ್ಲವಿ ಅವರು ಹಳೇಯ ವಿದ್ಯಾರ್ಥಿ ಸಂಘದ ಸಭೆಯಲ್ಲಿ ಭಾಗವಹಿಸಲು ಅಲ್ಲಿಗೆ ಬಂದಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ಅವರು ಅಲ್ಲಿಗೆ ಯಾಕೆ ಬಂದಿದ್ದರು ಎಂದು ತಿಳಿದು ಬಂದಿದೆ.

SAI PALLAVI

ಸಾಯಿ ಪಲ್ಲವಿಯವರು ನಟನೆಯ ಜೊತೆಗೆ ವೈದ್ಯಕೀಯ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಸಾಯಿಯವರು ಜಾರ್ಜಿಯದಲ್ಲಿ ವೈದ್ಯಕೀಯ ಕಾಲೇಜಿನಲ್ಲಿ 2016ರಿಂದ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಅವರು ಭಾರತದಲ್ಲಿ ಔಷಧಿಯ ಬಗ್ಗೆ ಅಧ್ಯಯನ ಮಾಡಲು, ವಿದೇಶಿ ವೈದ್ಯಕೀಯ ಪದವಿ ಪರೀಕ್ಷೆಯನ್ನು ಪಾಸ್ ಮಾಡಬೇಕಿದೆ. ಈ ಪರೀಕ್ಷೆಯನ್ನು ಬರೆಯಲು ಸಾಯಿ ತಿರುಚ್ಚಿಯ ಎಂಎಎಂ ಕಾಲೇಜಿಗೆ ಬಂದಿದ್ದಾರೆ ಎಂದು ಅವರ ಆಪ್ತ ಮೂಲಗಳು ಮಾಹಿತಿ ನೀಡಿವೆ.

ಪರೀಕ್ಷೆಯಲ್ಲಿ ಭಾಗವಹಿಸಲು ಸಾಯಿ ಪಲ್ಲವಿ ಮಾಸ್ಕ್ ತೊಟ್ಟು, ದುಪ್ಪಟ್ಟ ಹೊದ್ದುಕೊಂಡು ಹೋಗಿದ್ದಾರೆ. ಆದರೆ ಕಾಲೇಜಿನಲ್ಲಿ ಕೆಲ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸಾಯಿ ಪಲ್ಲವಿಯವರನ್ನು ಕಂಡು ಹಿಡಿದಿದ್ದಾರೆ. ಈ ವೇಳೆ ಅವರ ಜೊತೆ ಸೆಲ್ಫಿಗಳನ್ನು ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ. ಈಗ ನಟಿ ಅಭಿಮಾನಿಗಳ ಜೊತೆ ತೆಗೆದುಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Naga Chaitanya and Sai Pallavi Stills from Love Story Movie Ay Pilla Song 1 2

ಸದ್ಯ ಸಾಯಿ ಪಲ್ಲವಿ ಪ್ರಸ್ತುತ ಎರಡು ತೆಲುಗು ಚಲನಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಲವ್ ಸ್ಟೋರಿ ಮತ್ತು ವಿರಾಟಾ ಪರ್ವಂ ಎಂಬ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ. ಶೇಖರ್ ಕಮ್ಮುಲಾ ನಿರ್ದೇಶನದ ಲವ್ ಸ್ಟೋರಿ ಚಿತ್ರೀಕರಣ ಸೆಪ್ಟೆಂಬರ್ 7ರಿಂದ ಪ್ರಾರಂಭವಾಗಲಿದೆ. ಇದರಲ್ಲಿ ನಾಗ ಚೈತನ್ಯ ನಾಯಕನಟನಾಗಿ ಅಭಿನಯಿಸಿದ್ದಾರೆ. ವಿರಾಟಾ ಪರ್ವಂ ಸಿನಿಮಾದಲ್ಲಿ ಸಾಯಿ ರಾಣಾ ದಗ್ಗುಬಾಟಿ ಮತ್ತು ಪ್ರಿಯಮಣಿಯವರ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *