– ಮಾಸ್ಕ್, ಸಾಮಾಜಿಕ ಅಂತರ ಯಾವುದೂ ಇಲ್ಲ
ಚಿಕ್ಕಮಗಳೂರು: ತಾಲೂಕಿನ ಮುಳ್ಳಯ್ಯನಗಿರಿ ಬೆಟ್ಟದ ತುದಿಯಲ್ಲಿ ಪ್ರವಾಸಿಗರ ಜಾತ್ರೆಯಾಗಿದ್ದು, ಮಾಸ್ಕ್, ಸಾಮಾಜಿಕ ಅಂತರ ಯಾವುದೂ ಇಲ್ಲದೆ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಈ ಮೂಲಕ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.
Advertisement
ಈ ಬಗ್ಗೆ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಡೆಸಿದೆ. ಯಾಕೆ ಮಾಸ್ಕ್ ಹಾಕಿಲ್ಲ ಎಂದು ಪ್ರಶ್ನಿಸಿದರೆ, ಬೆಟ್ಟ ಹತ್ತೋದಕ್ಕೆ ಸುಸ್ತಾಗುತ್ತೆ, ಕಾಫಿನಾಡ ಗಾಳಿಯನ್ನು ಸವಿಯಬೇಕು, ಕಾರಲ್ಲಿತ್ತು ಮರೆತು ಬಂದೆ, ಜೇಬಲ್ಲಿ ಇದೆ ಹಾಕುತ್ತೇನೆ ಎಂದು ನೆಪ ಹೇಳುತ್ತಾರೆ. ಕೆಲ ಯುವತಿಯರು ವೇಲ್ ತೋರಿಸಿ ಮಾಸ್ಕ್ ಇದೆಯಲ್ಲಾ ಸರ್, ಇದೇ ಮಾಸ್ಕ್ ಎನ್ನುತ್ತಾರೆ. ಆದರೆ ಮುಖಕ್ಕೆ ಮಾತ್ರ ಕಟ್ಟಿಕೊಳ್ಳಲ್ಲ.
Advertisement
Advertisement
ಶುಕ್ರವಾರ ಗುಡ್‍ಫ್ರೈಡೆ ಶನಿವಾರ-ಭಾನುವಾರ ವೀಕ್ ಎಂಡ್ ಎಂದು ಜಿಲ್ಲೆಗೆ ಸಾವಿರಾರು ಪ್ರವಾಸಿಗರು ಆಗಮಿಸಿದ್ದಾರೆ. ಕೊರೊನಾ ನಿಯಮಗಳನ್ನು ಮಾತ್ರ ಪಾಲಿಸುತ್ತಿಲ್ಲ.
Advertisement
ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ಸಿಂಗಲ್ ಡಿಜಿಟ್ ಇದ್ದ ದಿನದ ಸೋಂಕಿತರ ಸಂಖ್ಯೆ ಕಳೆದೊಂದು ವಾರದಲ್ಲಿ 50-60ರ ಗಡಿ ಮುಟ್ಟಿದೆ. ಇದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.
ಮುಳ್ಳಯ್ಯನಗಿರಿಯಲ್ಲಿ ಪೊಲೀಸರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಅಥವಾ ಜಿಲ್ಲಾಡಳಿತ ನೇಮಕ ಮಾಡಿರುವ ಯಾರೂ ಇಲ್ಲ. ಇದು ಪ್ರವಾಸಿಗರ ಬೇಜವಾಬ್ದಾರಿಗೆ ಕಾರಣವಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ಮುಳ್ಳಯ್ಯನಗಿರಿ ಭಾಗಕ್ಕೆ ಅಧಿಕಾರಿಗಳನ್ನು ನೇಮಕ ಮಾಡಬೇಕಿದೆ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.