ಬೆಂಗಳೂರು: ಗುರುವಾರ ಸಂಜೆ ಸುರಿದ ಮಹಾಮಳೆಗೆ ಮೈಸೂರು ರಸ್ತೆಗೆ ಹೊಂದಿಕೊಂಡಿರುವ ವೃಷಭಾವತಿ ನದಿಯ ತಡೆಗೋಡೆ ಕೊಚ್ಚಿ ಹೋಗಿದೆ. ಸುಮಾರು 130 ಮೀಟರ್ ಉದ್ದದ ತಡೆಗೋಡೆ ಬಿದ್ದಿದೆ.
ರಾತ್ರಿಯೇ ಎಂಜಿನಿಯರ್‌ಗಳು ಭೇಟಿ ನೀಡಿ, ರಸ್ತೆ ಕುಸಿಯದಂತೆ ಕ್ರಮ ಕೈಗೊಂಡಿದ್ದರು. ಅಲ್ಲದೆ, ಮೆಟ್ರೋ ಪಿಲ್ಲರ್‌ಗಳಿಗೆ ಅಪಾಯ ಇಲ್ಲ ಅಂತ ಸ್ಪಷ್ಟ ಪಡಿಸಿದ್ದರು. ರಾತ್ರಿ ಒಂದು ಬದಿಯಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿತ್ತು.
Advertisement
Advertisement
ಇಂದು ಸ್ಥಳಕ್ಕಾಗಮಿಸಿದ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ಪರಿಶೀಲನೆ ನಡೆಸಿದ್ರು. ಬಳಿಕ ಮಾತನಾಡಿ, ಕಾಂಟ್ರಾಕ್ಟ್ ಪಡೆದ ಕಂಪನಿಯನ್ನ ಕರೆಸಿ ಮಾಹಿತಿ ಪಡೆಯಲಾಗುತ್ತದೆ ಎಂದು ತಿಳಿಸಿದರು.
Advertisement
ರಾಜ್ಯದ ಹಲವೆಡೆ ಮುಂಗಾರು ಮಳೆ ಚುರುಕಾಗಿದ್ದು, ಕಲಬುರಗಿಯ ಕುಂಸಿ ಗ್ರಾಮದಲ್ಲಿ ಬ್ರಿಡ್ಜ್ ಕಮ್ ಬ್ಯಾರೇಜ್‍ನಿಂದ ನೀರು ಹೊರಬಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.
Advertisement
Inspected the spot with @BBMPCOMM and other officials near Vrishabhavathi river in Kengeri where a retaining wall collapsed due to persistent rain yesterday. Have instructed the officials to take up the repair work immediately.#BengaluruRains pic.twitter.com/lU8BMjnCLu
— Rakesh Singh IAS (@BBMPAdmn) June 26, 2020
ಹಾವೇರಿಯ ರಾಣೇಬೆನ್ನೂರಿನ ಮೃತ್ಯುಂಜಯ ನಗರ ಸೇರಿದಂತೆ ಹಲವೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ, ಮನೆ ಗೋಡೆಗಳು ಕುಸಿದಿವೆ. ಧಾರವಾಡ, ಕೊಪ್ಪಳ, ಗದಗ, ಕೋಲಾರ, ಚಿಕ್ಕಬಳ್ಳಾಪುರದಲ್ಲೂ ಮಳೆಯ ಆರ್ಭಟ ಜೋರಾಗಿತ್ತು.