ಕಲಬುರಗಿ: 65 ವರ್ಷದ ವೃದ್ಧ ಭಿಕ್ಷುಕಿಯ ಮೇಲೆ ಕುಡುಕರಿಬ್ಬರು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದ ಬಸ್ ನಿಲ್ದಾಣದಲ್ಲಿ ನಡೆದಿದೆ.
ವೃದ್ಧ ಭಿಕ್ಷುಕಿಯನ್ನು ಸಂಗನಬಸವಮ್ಮ ಎಂದು ಗುರುತಿಸಲಾಗಿದ್ದು, ಇವರು ಬಸ್ ನಿಲ್ದಾಣದ ಬಳಿ ಭಿಕ್ಷಾಟನೆ ಮಾಡಿ ಬಂದ ಹಣದಿಂದ ಊಟ-ಉಪಹಾರ ಮಾಡಿ ಬಸ್ ನಿಲ್ದಾಣದಲ್ಲಿಯೇ ಜೀವನ ನಡೆಸುತ್ತಿದ್ದರು. ಹೀಗೆ ಬಸ್ ನಿಲ್ದಾಣದಲ್ಲಿ ಮಲಗುತ್ತಿದ್ದ ಈ ವೃದ್ಧೆಯ ಮೇಲೆ ರವಿವಾರ ರಾತ್ರಿ ಪಾನಮತ್ತ ಇಬ್ಬರು ಕಾಮುಕರು ಅತ್ಯಾಚಾರ ನಡೆಸಿ ನಂತರ ಆಕೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ.
ಭಿಕ್ಷುಕಿ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗುವ ವೇಳೆ ಗ್ರಾಮದ ಕೆಲ ಸ್ಥಳೀಯರು ಆರೋಪಿಗಳ ಗುರುತು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ನೆಲೋಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಇನ್ನೋರ್ವ ಆರೋಪಿಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದನ್ನೂ ಓದಿ: ಇಂದು ಸಂಜೆ 4 ಗಂಟೆಗೆ ಪಿಯುಸಿ ಫಲಿತಾಂಶ- 5 ಗಂಟೆಗೆ ಆನ್‍ಲೈನ್‍ನಲ್ಲೂ ಲಭ್ಯ