ಕೋಲ್ಕತ್ತಾ: ಇಂಟರ್ ನೆಟ್ ಅದೆಷ್ಟೋ ವೀಡಿಯೋ ಕಾರಣವಿಲ್ಲದೇ ವೈರಲ್ ಆಗುತ್ತವೆ. ಕೆಲವೊಮ್ಮೆ ಮನಸ್ಸಿಗೆ ಮುದ ನೀಡುವ ಕೆಲ ವೀಡಿಯೋ ವೈರಲ್ ಆದಾಗ ಒಂದು ರೀತಿಯ ಖುಷಿಯ ಜೊತೆಗೆ ಸಣ್ಣ ಸಂದೇಶವನ್ನ ನೀಡುತ್ತವೆ. ಇದೀಗ ಕೋಲ್ಕತ್ತಾದ ಹೋಟೆಲ್ ನಲ್ಲಿ ವೃದ್ಧ ದಂಪತಿ ಹೆಜ್ಜೆ ಹಾಕಿರೋ ವೀಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಮನಸ್ಸು ಕದ್ದಿದೆ.
ದಿ ಬೊಹೊಬಾಲಿಕಾ ಇನ್‍ಸ್ಟಾಗ್ರಾಂನಲ್ಲಿ ಈ ವೀಡಿ ಯೋ ಪೋಸ್ಟ್ ಮಾಡಲಾಗಿದೆ. ಕೋಲ್ಕತ್ತಾದ ಹಾರ್ಡ್ ರಾಕ್ ಕೆಫೆಯಲ್ಲಿ ವೃದ್ಧ ದಂಪತಿ ಅಲ್ಲಿಯ ಮ್ಯೂಸಿಕ್ ಬ್ಯಾಂಡ್ 90ರ ದಶಕದ ಹಾಡಿಗೆ ಸಂತೋಷದಿಂದ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. ಈ ವೀಡಿಯೋ 25 ಸಾವಿರಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದ್ದು, ನೆಟ್ಟಿಗರು ಶೇರ್ ಮಾಡಿಕೊಳ್ಳುತ್ತಿದ್ದಾರೆ.
View this post on Instagram
ಈ ವೀಡಿಯೋ ಇಂದಿನ ನನ್ನ ದಿನವನ್ನ ಸುಂದರ ಗೊಳಿಸಿತು. ಎಂತಹ ಅದ್ಭುತವಾದ ವೀಡಿಯೋ. ದಂಪತಿಯ ನಡುವಿನ ಹೊಂದಾಣಿಕೆ, ಪ್ರೀತಿ ಎಲ್ಲವೂ ವೀಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಇದು ನಿಜವಾದ ಪ್ರೀತಿ, ಅವರಲ್ಲಿರುವ ಹುಮ್ಮಸ್ಸು ನಮಗೆ ಪ್ರೇರಣೆ ಅಂತ ನೆಟ್ಟಿಗರು ಕಮೆಂಟ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಆದ್ರೆ ದಂಪತಿಯ ಹೆಸರು ತಿಳಿದು ಬಂದಿಲ್ಲ. ನಿಮಗೆ ಈ ವೀಡಿಯೋ ಹೇಗೆ ಅನ್ನಿಸಿತು? ಕಮೆಂಟ್ ಮಾಡಿ.