ಕೋಲ್ಕತ್ತಾ: ಬಂಗಾಳದಲ್ಲಿ ಚುನಾವಣೆ ಪ್ರಚಾರದ ಅಬ್ಬರ ಕಾವೇರಿದೆ. ಇದರ ಮಧ್ಯೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವೀಲ್ ಚೇರ್ ಮೇಲೆ ಕುಳಿತು ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.
ತಿಂಗಳ ಆರಂಭದಲ್ಲಿ ನಡೆದ ದಾಳಿ ವೇಳೆ ಮಮತಾ ಬ್ಯಾನರ್ಜಿ ಎಡ ಕಾಲಿಗೆ ತೀವ್ರವಾಗಿ ಗಾಯಗೊಂಡಿದ್ದರು. ಇದೀಗ ಎರಡನೇ ಹಂತದಲ್ಲಿ ಮತಚಲಾಯಿಸುವ ನಂದಿಗ್ರಾಮದಲ್ಲಿ ವೀಲ್ ಚೇರ್ ಮೇಲೆ ಕುಳಿತು 8 ಕಿ.ಮೀ ರೋಡ್ ಶೋ ನೆಡೆಸಿದ್ದಾರೆ.
Advertisement
Advertisement
ಗುರುವಾರ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿಯ ಮಾಜಿ ಸಹಾಯಕ ಸುವೇಂದು ಅಧಿಕಾರಿ ನಡುವೆ ನಡೆದ ಚುನಾವಣಾ ಪ್ರಚಾರದ ಮಹಾಯುದ್ಧವನ್ನು ನೋಡಿದ್ದೇವೆ. ಶೀಘ್ರದಲ್ಲಿಯೇ ಚುನಾವಣೆ ಪ್ರಚಾರ ಮುಕ್ತಾಯಗೊಳ್ಳಲಿದೆ.
Advertisement
ತೃಣಮೂಲ ಕಾಂಗ್ರೆಸ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿರುವ ವೀಡಿಯೋದಲ್ಲಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವೀಲ್ ಚೇರ್ ಮೇಲೆ ಕುಳಿತುಕೊಂಡಿದ್ದರೆ, ಸುತ್ತಲು ಪಕ್ಷದ ಕಾರ್ಯಕರ್ತರು ಧ್ವಜಗಳನ್ನು ಹಿಡಿದು ಪಾದಯಾತ್ರೆ ನಡೆಸಿದ್ದಾರೆ.
Advertisement
ತಿಂಗಳ ಆರಂಭದಲ್ಲಿ, ಮಮತಾ ಬ್ಯಾನರ್ಜಿಯವರು ನಾನು ಕಾರಿನಲ್ಲಿ ಸ್ಥಳೀಯ ದೇವಾಲಯಕ್ಕೆ ತೆರಳಿದ್ದಾಗ, ಕಾರ್ ಬಾಗಿಲು ತೆರೆದ ತಕ್ಷಣ 4-5 ಮಂದಿ ಬಂದು ಕಾರ್ ಡೋರ್‍ನನ್ನು ತಳ್ಳಿದರು. ಈ ವೇಳೆ ಪೊಲೀಸರ ಭದ್ರತೆ ಕೂಡ ಇರಲಿಲ್ಲ. ಹೀಗಾಗಿ ನನ್ನ ಕಾಲಿಗೆ ಗಾಯವಾಗಿದೆ ಎಂದು ಆರೋಪಿಸಿದ್ದರು.
ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಪಕ್ಷ ಜಯ ಸಾಧಿಸಲು ಪ್ರಯತ್ನಿಸುತ್ತಿದ್ದು, ಮುಖ್ಯಮಂತ್ರಿಯ ಭದ್ರತೆ ಉಸ್ತುವಾರಿ ವಹಿಸಿಕೊಂಡಿದ್ದ ಪೊಲೀಸ್ ಅಧಿಕಾರಿಯನ್ನು ಚುನವಣಾ ಆಯೋಗ ಅಮಾನತುಗೊಳಿಸಿತ್ತು. ಮತದಾನ ಸಮಿತಿ ಕೂಡ ದಾಳಿಯನ್ನು ಕಡೆಗಣಿಸಿ ಇದು ಅಪಘಾತ ಎಂದು ಹೇಳಿದ್ದಾರೆ ಎಂದರು.
ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಮತದಾನ ನಡೆಸಲಾಗುತ್ತಿದ್ದು, ಮೊದಲ ಹಂತದ ಮತದಾನ ಶನಿವಾರ ನಡೆದಿದೆ ಹಾಗೂ ರಾಜ್ಯದಲ್ಲಿ ಶೇ. 80ಕ್ಕಿಂತ ಹೆಚ್ಚು ಮತದಾನವಾಗಿದೆ. ಮೇ.2ರಂದು ಇದರ ಫಲಿತಾಂಶ ಹೊರ ಬೀಳಲಿದೆ.