ಮುಂಬೈ: ಸ್ವಚ್ಛತಾ ಕಾಮಗಾರಿಯ ವೇಳೆ ಕಾರ್ಮಿಕರನ್ನು ಮ್ಯಾನ್‍ಹೋಲ್‍ಗೆ ದಬಾಯಿಸಿ ಇಳಿಸುವ ಅಧಿಕಾರಿಗಳನ್ನು ನಾವು ನೋಡಿದ್ದೇವೆ. ಅದರೆ ಸೀರೆಯುಟ್ಟು ಮ್ಯಾನ್‍ಹೋಲ್‍ಗೆ ಇಳಿದು ಕೆಲಸ ಮಾಡಿಸುತ್ತಿರುವ ಮುನ್ಸಿಪಲ್ ಆಫೀಸರ್ ಅಧಿಕಾರಿಯ ವೀಡಿಯೋ ವೈರಲ್ ಆಗಿದೆ.
Advertisement
ಥಾಣೆಯಲ್ಲಿ ಮಳೆ ಹೆಚ್ಚಾಗಿರುವುದರಿಂದ ಮಳೆ ನೀರು ಸರಾಗವಾಗಿ ಹೋಗಲು ಚರಂಡಿ ವ್ಯವಸ್ಥೆ ಸರಿ ಇದೆಯೇ ಎಂದು ಮಹಿಳಾ ಅಧಿಕಾರಿ ಪರಿಶೀಲನೆ ನಡೆಸಿದ್ದಾರೆ. ಭಿವಾಂಡಿ-ನಿಜಾಂಪುರ್ ಮುನ್ಸಿಪಲ್ ಕಾರ್ಪೋರೇಷನ್ (ಬಿಎನ್‍ಎಂಸಿ)ನ ಸ್ಯಾನಿಟರಿ ಇನ್ಸ್‍ಪೆಕ್ಟರ್ ಸುವಿಧಾ ಚವಾಣ್, ಮರದ ಏಣಿಯ ಸಹಾಯದಿಂದ ಮ್ಯಾನ್ ಹೋಲ್ ಒಳಗೆ ಇಳಿದು ಪರಿಶಿಲನೆ ನಡೆಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಕತ್ತೆಗಳ ಸಂಖ್ಯೆ ಹೆಚ್ಚಳ
Advertisement
Advertisement
ವೀಡಿಯೋದಲ್ಲಿ ಏನಿದೆ:
ಮ್ಯಾನ್‍ಹೋಲ್‍ನಲ್ಲಿ ಸ್ವಚ್ಛತಾ ಕೆಲಸ ನಡೆಯುತ್ತಿತ್ತು. ವೇಳೆ ಅಲ್ಲಿಗೆ ಬಂದ ಮಹಿಳಾ ಅಧಿಕಾರಿ ಸ್ವತಃ ಮ್ಯಾನ್‍ಹೋಲ್ ಒಳಕ್ಕೆ ಇಳಿದಿದ್ದಾರೆ. ಮ್ಯಾನ್‍ಹೋಲ್‍ಗೆ ಮರದ ಏಣಿಯೊಂದನ್ನು ಇರಿಸಿ ಉಟ್ಟ ಸೀರೆಯಲ್ಲೇ ಕೆಳಕ್ಕಿಳಿದ ಸುವಿಧಾ, ಒಳಗೆ ಏನೇನು ಕೆಲಸ ನಡೆಯುತ್ತಿದೆ ಎಂದು ಫೋಟೋ ತೆಗೆದು, ಅಲ್ಲಿದ್ದ ಕಾರ್ಮಿಕರ ಬಳಿ ಮಾತನಾಡಿ ಸ್ವಚ್ಛತಾ ಕೆಲಸ ಪರಿಶೀಲನೆ ಮಾಡಿದ್ದಾರೆ. ಈ ಘಟನೆಯ ವೀಡಿಯೋ ಈಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಘಟನೆ ಮಹಾರಾಷ್ಟ್ರದ ಭಿವಾಂಡಿ, ನಿಜಾಮ್‍ಪುರ್ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಫೀಸ್ ಕಟ್ಟುವಂತೆ ಒತ್ತಾಯ ಮಾಡುವ ಶಾಲೆಗಳ ವಿರುದ್ಧ ಕ್ರಮ: ಸಿಎಂ
Advertisement
ಮುಂಗಾರು ಪ್ರಾರಂಭವಾಗುತ್ತಿರುವುದರಿಂದ ಅವ್ಯವಸ್ಥೆ ಆಗದಂತೆ ನೋಡಿಕೊಳ್ಳುವುದಕ್ಕಾಗಿ ಪಾಲಿಕೆ ವ್ಯಾಪ್ತಿಯ ವಿವಿಧೆಡೆ ಸ್ವಚ್ಛತಾ ಕಾರ್ಯಗಳ ಬಗ್ಗೆ ಹೀಗೆಯೇ ನಿಗಾ ವಹಿಸುತ್ತಿದ್ದು, ಇವರು ಇಷ್ಟೊಂದು ಮುತುವರ್ಜಿ ವಹಿಸಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿ ಇಂತಹ ಅಧಿಕಾರಿಗಳು ಇರಬೇಕು ಎಂದು ಶ್ಲಾಘಿಸುತ್ತಿದ್ದಾರೆ.