– ಅಪಾಯದಿಂದ ಪಾರು ಮಾಡಿದವರಿಗೆ ಜನ ಸಲಾಮ್
ತಿರುವನಂತಪುರಂ: ನಿಂತಿದ್ದವರು ಇದ್ದಕ್ಕಿಂದಂತೆ ಬಾಲ್ಕನಿಯಿಂದ ಕೆಳಕ್ಕೆ ಬೀಳುತ್ತಿದ್ದಾಗ ವ್ಯಕ್ತಿಯ ಕಾಲನ್ನು ಹಿಡಿದು ರಕ್ಷಿಸಿ ಮಾನವೀಯತೆ ಮೆರೆದ ಘಟನೆಯೊಂದು ಕೇರಳದಲ್ಲಿ ನಡೆಸಿದೆ. ಸದ್ಯ ವ್ಯಕ್ತಿ ರಕ್ಷಣೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Advertisement
ಕೇರಳದ ಕೋಯಿಕ್ಕೋಡ್ ಮೂಲದ ವ್ಯಕ್ತಿ ಇನ್ನೇನು ಕೆಳಗಡೆ ಬಿದ್ದು ಗಂಭೀರ ಗಾಯಗೊಳ್ಳುತ್ತಿದ್ದರು. ಇದೇ ವೇಳೆ ಅವರ ಪಕ್ಕದಲ್ಲಿಯೇ ನಿಂತಿದ್ದವರು ವ್ಯಕ್ತಿ ಬೀಳುತ್ತಿದ್ದಂತೆಯೇ ಅವರ ಕಾಲನ್ನು ಹಿಡಿದುಕೊಳ್ಳುವ ಮೂಲಕ ಭಾರೀ ಅನಾಹುತದಿಂದ ತಪ್ಪಿಸಿದ್ದಾರೆ. ಇದರ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Advertisement
Advertisement
ರಕ್ಷಿಸಿ ಮಾನವೀಯತೆ ಮೆರೆದ ವ್ಯಕ್ತಿಯನ್ನು ತಾಯ್ಯಿಲ್ ಮಿತ್ತಲ್ ಬಾಬೂರಾಜ್ ಎಮದು ಗುರುತಿಸಲಾಗಿದೆ. ವ್ಯಕ್ತಿ ಬೀಳ್ತಿದ್ದ ಕ್ಷಣದಲ್ಲಿ ಏನನ್ನೂ ಯೋಚಿಸಿದೆ ತಕ್ಷಣ ಅವರ ಕಾಲನ್ನು ಹಿಡಿದುಕೊಳ್ಳುವ ಮೂಲಕ ವ್ಯಕ್ತಿಯನ್ನು ರಕ್ಷಿಸಿದ ಬಾಬೂರಾವ್ ಕಾರ್ಯಕ್ಕೆ ಜನ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
Advertisement
ವೀಡಿಯೋದಲ್ಲಿ ಏನಿದೆ..?
ಕಾರಿಡಾರ್ ನಲ್ಲಿ ಇಬ್ಬರು ವ್ಯಕ್ತಿಗಳು ಗೋಡೆಗೆ ಒರಗಿಕೊಂಡು ನಿಂತಿರುತ್ತಾರೆ. ಹೀಗೆ ನಿಂತಿದ್ದ ಇವರು ಸ್ವಲ್ಪ ಹೊತ್ತಿನ ಬಳಿಕ ಮೆರೂನ್ ಕಲರ್ ಶರ್ಟ್ ಧರಿಸಿರುವ ವ್ಯಕ್ತಿ ಇದ್ದಕ್ಕಿದ್ದಂತೆಯೇ ಕೆಳಕ್ಕೆ ಬೀಳುತ್ತಿದ್ದರು. ವ್ಯಕ್ತಿ ಬೀಳುತ್ತಿದ್ದಂತೆಯೇ ಪಕ್ಕದಲ್ಲೇ ನಿಂತಿದ್ದ ಸಹೋದ್ಯೋಗಿ ತಕ್ಷಣವೇ ಎಚ್ಚೆತ್ತು ಅವರ ಕಾಲನ್ನು ಹಿಡಿದುಕೊಂಡಿದ್ದಾರೆ. ಇಷ್ಟೊತ್ತಿಗಾಗಲೇ ಅಕ್ಕಪಕ್ಕದಲ್ಲಿ ಇದ್ದವರು ಓಡಿ ಬಂದು ಬೀಳುತ್ತಿದ್ದ ವ್ಯಕ್ತಿಯ ರಕ್ಷಣೆಗೆ ಸಾಥ್ ನೀಡಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ.
???????????????????? pic.twitter.com/9GPTce1xnt
— Anu Satheesh ???????? (@AnuSatheesh5) March 19, 2021
ವ್ಯಕ್ತಿಯನ್ನು ಬಿನು ಎಂದು ಗುರುತಿಸಲಾಗಿದ್ದು, ಇವರು ಅರೂರು ನಿವಾಸಿ. ಘಟನೆಯ ಬಳಿಕ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಬಿನು ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ರಕ್ಷಣೆಗೆ ನಿಂತವರ ಪರ ಮೆಚ್ಚುಗೆ ವ್ಯಕ್ತವಾಗುತ್ತಿದೆ.