– ಪೊರಕೆ ಹಿಡಿದ ಅಧಿಕಾರಿಗೆ ವ್ಯಕ್ತವಾಗ್ತಿದೆ ಪ್ರಶಂಸೆ
ಮುಂಬೈ: ಸೋಮವಾರ ಪುಣೆಯ ತಿಲಕ್ ರಸ್ತೆಯಲ್ಲಿ ನಡೆದ ಅಪಘಾತದ ನಂತರ ಸಾರ್ವಜನಿಕರಿಗೆ ತೊಂದರೆಯಾಗಬಾರದೆಂದು ಟ್ರಾಫಿಕ್ ಮಹಿಳಾ ಕಾನ್ಸ್ ಟೇಬಲ್ ಕಸಗುಡಿಸುವ ಮೂಲಕ ರಸ್ತೆಯನ್ನು ಸ್ವಚ್ಛಗೊಳಿಸಿದ್ದಾರೆ.
Advertisement
ಸೋಮವಾರ ಸಂಜೆ ತಿಲಕ್ ನಗರದಲ್ಲಿ ಸಂಭವಿಸಿದ ಅಪಘಾತದ ನಂತರ ಮೋಟಾರ್ ಸೈಕಲ್‍ನ ಗಾಜು ಮತ್ತು ಫೈಬರ್ ತುಂಡುಗಳು ರಸ್ತೆಯಲ್ಲಿ ಬಿದ್ದಿದ್ದವು. ಇದನ್ನು ಗಮನಿಸಿದ ಟ್ರಾಫಿಕ್ ಪೊಲೀಸ್ ಕಾನ್ಸ್ ಟೇಬಲ್ ಅಮಲ್ದಾರ್ ರಜಿಯಾ ಸಯ್ಯದ್, ಪೊರಕೆ ಹಿಡಿದು ರಸ್ತೆಯನ್ನು ಗುಡಿಸುತ್ತಿರುವ ದೃಶ್ಯ ಕ್ಯಾಮೆರಾವೊಂದರಲ್ಲಿ ಸೆರೆಯಾಗಿದೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
Advertisement
महिला पोलीस अंमलदार रजिया सय्यद यांनी किरकोळ अपघातामुळे रस्त्यावर पडलेल्या काचा स्वतः हातात झाडू घेऊन बाजूला केल्या. सय्यद यांनी सामजिक जाणीव ठेवून घेतलेला हा पुढाकार कौतुकास्पद आहे.@PuneCityPolice @CPPuneCity pic.twitter.com/oSq482Fg18
— ANIL DESHMUKH (@AnilDeshmukhNCP) January 20, 2021
Advertisement
ಇದೇ ವಿಚಾರವಾಗಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ವೀಡಿಯೋವನ್ನು ಮೈಕ್ರೋ ಬ್ಲೋಗಿಂಗ್‍ನಲ್ಲಿ ಶೇರ್ ಮಾಡಿಕೊಳ್ಳುವುದರ ಜೊತೆಗೆ ಮಹಿಳಾ ಪೊಲೀಸ್ ಅಮಲ್ದಾರ್ ರಜಿಯಾ ಸಯ್ಯದ್, ಸಣ್ಣ ಅಪಘಾತದಿಂದ ರಸ್ತೆ ಮೇಲೆ ಬಿದ್ದಿದ್ದ ಗಾಜಿನ ತುಂಡುಗಳಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಕಾರಣದಿಂದ ತಾವೇ ಪೊರಕೆ ಹಿಡಿದು ಕಸ ಗುಡಿಸುಲು ಮುಂದಾಗಿದ್ದಾರೆ. ನಾಗರೀಕರ ಸುರಕ್ಷತೆಗೆ ಅವರು ಕೈಗೊಂಡಿರುವ ಕಾರ್ಯ ಮೆಚ್ಚುವಂತದ್ದು ಎಂದು ಟ್ವೀಟ್ ಮಾಡಿದ್ದಾರೆ.
Advertisement
ನಾಗರಿಕರ ಸುರಕ್ಷತೆಗಾಗಿ ಮಹಿಳಾ ಟ್ರಾಫಿಕ್ ಪೊಲೀಸ್ ಪೊರಕೆ ಹಿಡಿದು ರಸ್ತೆಯನ್ನು ಸ್ವಚ್ಛಗೊಳಿಸಿರುವ ವೀಡಿಯೋಗೆ ಇದೀಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.