ಕಲಬುರಗಿ: ಸರ್ಕಾರದ ಆದೇಶದನ್ವಯ ಗುಲ್ಬರ್ಗಾ ವಿಶ್ವವಿದ್ಯಾಲಯವು ನಿಗದಿಪಡಿಸಿ ಪ್ರಕಟಿಸಿರುವ ವೇಳಾಪಟ್ಟಿಯಂತೆ ಇಂದಿನಿಂದ 14ರ ವರೆಗೆ ನಡೆಯಬೇಕೆದ್ದ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ. ದಿನಾಂಕ 7, 8 ಮತ್ತು 14.08.2021ರ ವರೆಗಿನ ನಡೆಯಬೇಕಿದ್ದ ಪರೀಕ್ಷೆಗಳನ್ನು ರದ್ದುಪಡಿಸಲಾಗಿದ್ದು, ತಿಂಗಳ 27ರ ಬಳಿಕ ಮುಂದೂಡಲಾಗಿದ್ದ ಪರೀಕ್ಷಾ ದಿನಾಂಕಗಳನ್ನು ಪ್ರಕಟಿಸಲಾಗುವುದು ಎಂದು ವಿವಿಯ ಮೌಲ್ಯಮಾಪನ ಕುಲಪತಿಗಳು ತಿಳಿಸಿದ್ದಾರೆ.
ಉಳಿದ ಎಲ್ಲಾ ಪರೀಕ್ಷೆಗಳು ಈ ಮುಂಚೆ ಪ್ರಕಟಿಸಿರುವ ವೇಳಾಪಟ್ಟಿಯಂತೆ ಯಾವುದೇ ಬದಲಾವಣೆ ಇಲ್ಲದೆ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಗುಲ್ಬರ್ಗಾ ವಿವಿ ವ್ಯಾಪ್ತಿಯ ಎಲ್ಲ ಮಹಾವಿದ್ಯಾಲಯಗಳ ಎಲ್ಲಾ ಪ್ರಾಂಶುಪಾಲರರು ಸಂಬಂಧಿಸಿದ ಎಲ್ಲಾ ವಿದ್ಯಾರ್ಥಿಗಳ ಬೋಧಕ/ಬೋಧಕೇತರ ಎಲ್ಲಾ ಸಿಬ್ಬಂದಿಗಳ ಗಮನಕ್ಕೆ ತರಲು ಅವರು ಕೋರಿದ್ದಾರೆ.
ಟಫ್ ಕರ್ಫ್ಯೂ:
ನೆರೆ ರಾಜ್ಯಗಳಲ್ಲಿ ಹೆಚ್ಚಿದ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಯಲ್ಲಿ ಶುಕ್ರವಾರದಿಂದ ಸೋಮವಾರ ಬೆಳಗಿನ ಜಾವದವರಗೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಿ ಜಿಲ್ಲಾಧಿಕಾರಿಗಳಾದ ವಿವಿ ಜೋತ್ಸ್ನಾ ಆದೇಶ ಜಾರಿಮಾಡಿದ್ದಾರೆ. 6.8.2021 ರಿಂದ 16.08.2021ರ ವರೆಗೆ ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಗಿನ ಜಾವ 5ರ ವರೆಗೆ ಎಲ್ಲ ವ್ಯಾಪಾರ ವಹಿವಾಟುಗಳನ್ನು ನಿರ್ಬಂಧಿಸಿ ಆದೇಶ ಹೊರಡಿಸಲಾಗಿದ್ದು, ಆದರೆ ವಾರಂತ್ಯದ ನಿಷೇದಾಜ್ಞೆಯಲ್ಲಿ ಮಧ್ಯಾಹ್ನ 2 ರವರೆಗೆ ಮಾತ್ರ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ.
ಅಲ್ಲದೇ ಇತರೆ ಚಟುವಟಿಕೆಗಳಿಗಾಗಿ ಈ ಹಿಂದಿನ ಅನ್‍ಲಾಕ್‍ನಲ್ಲಿ ಹೊರಡಿಸಿದ ಆದೇಶ ಅನ್ವಯವಾಗಲಿದೆ. ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ಆ.16ರ ವರೆಗೆ ಕಲಬುರಗಿ ನಗರದಾದ್ಯಂತ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿ ಪೊಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ ಅವರು ಕೂಡ ಆದೇಶ ಜಾರಿಮಾಡಿದ್ದಾರೆ.
ಕಫ್ರ್ಯೂ ಇರೋದರಿಂದ ಮಾರುಕಟ್ಟೆಗೆ ಗ್ರಾಹಕರು ಆಗಮಿಸದ ಹಿನ್ನೆಲೆಯಲ್ಲಿ ಕಲಬುರಗಿಯ ವರ್ತಕರು ತರಕಾರಿ ರಸ್ತೆಗೆ ಎಸೆದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಬೆಳಗ್ಗೆ 5 ಗಂಟೆಗೆ ಬಂದು ತರಕಾರಿ ಖರೀದಿ ಮಾಡಿದ್ದೇವೆ. ಆದ್ರೆ ವೀಕೆಂಡ್ ಕರ್ಫ್ಯೂ ಹಾಕಿದ್ದರಿಂದ ಮಾರುಕಟ್ಟೆಗೆ ಬರುವ ಜನರ ಸಂಖ್ಯೆ ಕಡಿಮೆಯಾಗಿದೆ. ಹಾಕಿದ ಬಂಡವಾಳವೂ ಬರುವ ನಿರೀಕ್ಷೆಗಳಿಲ್ಲ. ಸರ್ಕಾರ ಹೀಗೆ ದಿಢೀರ್ ನಿರ್ಧಾರ ತೆಗೆದುಕೊಳ್ಳುವುದು ಎಷ್ಟು ಸರಿ ಎಂದು ವ್ಯಾಪಾರಸ್ಥರು ಪ್ರಶ್ನೆ ಮಾಡಿದರು. ಸವತೆಕಾಯಿ, ಕೋತಂಬರಿ ಸೊಪ್ಪು, ಬದನೆಕಾಯಿ ರಸ್ತೆಗೆ ಎಸೆದ ದೃಶ್ಯಗಳು ಕಲಬುರಗಿಯ ಮಾರುಕಟ್ಟೆಯಲ್ಲಿ ಕಂಡು ಬಂದವು. ಇದನ್ನೂ ಓದಿ: ಕೇಸ್ ಮುಗಿದ್ಮೇಲೆ ಹೈಕಮಾಂಡ್ ರಮೇಶ್ ಜಾರಕಿಹೊಳಿಯನ್ನ ಮಂತ್ರಿ ಮಾಡುತ್ತೆ: ಬಾಲಚಂದ್ರ ಜಾರಕಿಹೊಳಿ