ದಾವಣಗೆರೆ: ಕೊರೊನಾ ಸೋಂಕಿತನೊಬ್ಬ ಕೋವಿಡ್ ಕೇರ್ ಸೆಂಟರ್ ಗೆ ಹೋಗದೆ ಹಠ ಹಿಡಿದಿದ್ದು, ಅರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ಮುಂದೆ ವಿಷದ ಬಾಟಲ್ ಹಿಡಿದು ರಾದ್ಧಾಂತ ಮಾಡಿದ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಬಾನುವಳ್ಳಿ ಗ್ರಾಮದಲ್ಲಿ ನಡೆದಿದೆ.
Advertisement
ಗ್ರಾಮದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದ್ದು, ಸೋಂಕು ಇರುವವರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸಬೇಕು ಎಂದು ಜಿಲ್ಲಾಧಿಕಾರಿ ಅದೇಶ ಮಾಡಿದ್ದಾರೆ. ಡಿಸಿ ಆದೇಶದಂತೆ ಬಾನುವಳ್ಳಿ ಪಿಡಿಒ ನಾಗರಾಜ್ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೋಂಕಿತನನ್ನು ಕೋವಿಡ್ ಕೇರ್ ಸೆಂಟರ್ ಗೆ ಕರೆದೊಯ್ಯುಲು ಬಂದಿದ್ದಾರೆ. ಆದರೆ ವ್ಯಕ್ತಿ ಕೋವಿಡ್ ಕೇರ್ ಸೆಂಟರ್ ಗೆ ಹೋಗದೆ ಹಠ ಹಿಡಿದ್ದಾನೆ. ವಿಷ ಕೊಡಿ ಕುಡಿತೀನಿ, ನಾನು ಮಾತ್ರ ಕೋವಿಡ್ ಕೇರ್ ಸೆಂಟರ್ ಗೆ ಬರಲ್ಲ ಎಂದು ಮನೆಗೆ ಹೋಗಿ ವಿಷದ ಬಾಟಲ್ ತಂದು ಅಧಿಕಾರಿಗಳಿಗೆ ಅವಾಜ್ ಹಾಕಿದ್ದಾನೆ. ನೀವೇನಾದ್ರು ಕೋವಿಡ್ ಕೇರ್ ಸೆಂಟರ್ ಗೆ ಕರೆದೊಯ್ದರೆ ನಾನೇ ವಿಷ ಕುಡಿದು ಸತ್ತು ಹೋಗುತ್ತೇನೆ ಎಂದು ಅಧಿಕಾರಿಗಳಿಗೆ ಹೆದರಿಸಿದ್ದಾನೆ.
Advertisement
Advertisement
ಸೋಂಕಿತನನ್ನು ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸಲು ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸ ಪಡುವಂತಾಯಿತು. ಕೊನೆಗೂ ಸೋಂಕಿತ ಕೋವಿಡ್ ಕೇರ್ ಸೆಂಟರ್ ಗೆ ಹೋಗದೆ ಹಠ ಹಿಡಿದು ಮನೆಯಲ್ಲೇ ಕೂತಿದ್ದಾನೆ. ಸೋಂಕಿತನ ಕುಟುಂಬದ ಐದು ಜನರಿಗೂ ಸೋಂಕು ಕಾಣಿಸಿಕೊಂಡಿದೆ ಎನ್ನಲಾಗುತ್ತಿದ್ದು, ಯಾರೂ ಕೋವಿಡ್ ಕೇರ್ ಸೆಂಟರ್ ಗೆ ಹೋಗದೆ ಅಧಿಕಾರಿಗಳ ಹಾಗೂ ಸಿಬ್ಬಂದಿ ಮನವಿಗೆ ಸ್ಪಂದಿಸದೆ, ಹಠ ಹಿಡಿದು ಕುಳಿತಿದ್ದಾರೆ. ಗ್ರಾಮದ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯವರು ಹಲವು ಬಾರಿ ವಿಧವಿಧವಾದ ಕೇಳಿಕೊಂಡರೂ ಸೋಂಕಿತರು ಮಾತ್ರ ಕೊವೀಡ್ ಕೇರ್ ಸೆಂಟರ್ ಗೆ ಹೋಗದೆ ಹಠ ಹಿಡಿದು ಕುಳಿತಿದ್ದಾರೆ.