ಕಲಬುರಗಿ: ಇಂದಿ ವಿಶ್ವದಾದ್ಯಂತ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಅಂತೆಯೇ ಇಂದು ಕಲಬುರಗಿಯಲ್ಲಿ ತಂದೆ ಹಾಗೂ ಮಗ ಜಲಯೋಗ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.
ಕಲಬುರಗಿಯ ನಂದಿಕೂರ ಗ್ರಾಮದ ಪವನ್ ವಳಕೇರಿ ಕುಟುಂಬ ಕಳೆದ ಎರಡು ದಶಕದಿಂದ ಚಾಚು ತಪ್ಪದೆ ನಿತ್ಯ ಯೋಗಾಸನ ಮಾಡಿ ಇತರರಿಗೂ ಯೋಗಾಸನ ಕಲಿಸುತ್ತಿದ್ದಾರೆ. ಇನ್ನು ಇಂದು ವಿಶ್ವ ಯೋಗಾ ದಿನಾಚರಣೆ ಹಿನ್ನೆಲೆಯಲ್ಲಿ ಪವನ್ ವಳಕೇರಿ ಹಾಗು ಅವರ ಪುತ್ರ ರವಿಕಿರಣ ವಳಕೇರಿ ಇಬ್ಬರು ಸಹ ಇಂದು ಬೆಳಗ್ಗೆ 6.30ಕ್ಕೆ ಬಾವಿಗಿಳಿದು ಜಲಯೋಗ ಮಾಡಿದ್ದಾರೆ.
ಒಂದು ಬಾರಿ ಬಾವಿಗಿಳಿದು ಈ ತಂದೆ ಮಗ ಜಲಯೋಗ ಮಾಡಲು ಆರಂಭಿಸಿದ್ದರೆ, ಕನಿಷ್ಟ 3 ರಿಂದ 4 ಗಂಟೆಗಳ ಕಾಲ ನಿರಂತರ ಜಲಯೋಗವನ್ನು ಮಾಡುತ್ತಾರೆ. ತಂದೆ ಮಗನ ಈ ಜಲಯೋಗ ನೋಡಲು ಸುತ್ತಮುತ್ತ ನೂರಾರು ಜನ ಜಲಯೋಗ ಮಾಡುವ ನಂದಿಕೂರ ಗ್ರಾಮದ ಬಾವಿ ಬಳಿ ಆಗಮಿಸುತ್ತಾರೆ. ಇದನ್ನೂ ಓದಿ: ಯೋಗ ಭರವಸೆಯ ಆಶಾಕಿರಣ: ಮೋದಿ
ಒಟ್ಟಿನಲ್ಲಿ ಯೋಗಾಸನ ಮಾಡಿದ್ರೆ ಮನುಷ್ಯನಿಗೆ ಬರುವ ನೂರಾರು ಕಾಯಿಲೆಗಳು ದೂರವಾಗುವದರಲ್ಲಿ ಎರಡು ಮಾತಿಲ್ಲ. ಹೀಗಾಗಿಯೇ ಜೂನ್ 21 ರಂದು ವಿಶ್ವ ಯೋಗ ದಿನಾಚರಣೆಯನ್ನು ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಯೋಗ ದಿನ ಅಂತ ಆಚರಿಸುತ್ತಿದ್ದಾರೆ.