ತಿರುವನಂತಪುರಂ: ವಿಶ್ವ ಪರಿಸರ ದಿನದಂದು ಎಲ್ಲರೂ ಕೂಡ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಸಿ ನೆಡುವ ಮೂಲಕ ಆಚರಿಸಿರುವುದನ್ನು ನೋಡಿದ್ದೇವೆ. ಆದರೆ ಕೇರಳದಲ್ಲೊಂದು ಪುಂಡರ ಗುಂಪು ಗಾಂಜಾಗಿಡವನ್ನು ನೆಟ್ಟು ಪರಿಸರ ದಿನ ಆಚರಿಸಿ ಸುದ್ದಿಯಾಗಿದೆ.
ಕೇರಳದ ಕೊಲ್ಲಂ ಜಿಲ್ಲೆಯ ಕಂಡಚಿರಾ ಎಂಬ ಗ್ರಾಮದಲ್ಲಿ ಜೂನ್ 5 ಪರಿಸರದಿನದಂದು ಪುಂಡರ ಗುಂಪು ತಮ್ಮ ಬೀದಿಯಲ್ಲಿ ಗಾಂಜಾ ಗಿಡಗಳನ್ನು ನೆಟ್ಟು, ನಾವು ಇಷ್ಟಪಡುವ ಗಿಡ ಇದಾಗಿರುವ ಕಾರಣ ಅದನ್ನೇ ನೆಟ್ಟಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಅದರ ಬಳಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದನ್ನೂ ಓದಿ: ಮೀನು ಸಾಗಾಟದ ಲಾರಿಯಲ್ಲಿ 200 ಕೆಜಿ ಗಾಂಜಾ ಸಾಗಾಟ
മണ്ണാർക്കാട് എക്സൈസ് സർക്കിൾ ഇൻസ്പെക്ടർ ടോണി ജോസിൻ്റെ നേതൃത്വത്തിൽ സർക്കിൾ പാർട്ടി അട്ടപ്പാടി ഭാഗത്ത് നടത്തിയ റെയ്ഡിൽ പാടവയൽ കുറുക്കത്തിക്കല്ലിന് മുകളിലെ വനത്തിൽ നിന്നും 120 കഞ്ചാവ് ചെടികൾ കണ്ടെടുത്ത് നശിപ്പിച്ച് കേസ്സെടുത്തു. pic.twitter.com/j6t4WcVDk2
— Kerala Excise Department (@KeralaExcise) June 7, 2021
ಈ ಕುರಿತು ತಿಳಿಯುತ್ತಿದ್ದಂತೆ ಅಬಕಾರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಸುಮಾರು 60 ಸೆಂ.ಮೀನಷ್ಟು ಉದ್ದದ ಹಲವು ಗಾಂಜಾ ಗಿಡಗಳನ್ನು ಬೆಳೆಸಿರುವುದು ಕಂಡುಬಂದಿದೆ. ಕೂಡಲೇ ಎಲ್ಲಾ ಗಿಡಗಳನ್ನು ಅಧಿಕಾರಿಗಳು ಕಿತ್ತಿದ್ದಾರೆ. ಯುವಕರ ಗುಂಪೊಂದು ಗಾಂಜಾ ವ್ಯಸನದ ಗೀಳಿನಿಂದ ಈ ರೀತಿ ಕೃತ್ಯವೆಸಗಿದ್ದು, ಪರಿಸರದಿನದ ಅಂಗವಾಗಿ ರಸ್ತೆ ಬದಿಯಲ್ಲಿ ಗಾಂಜಾ ಗಿಡಗಳನ್ನು ನೆಟ್ಟು ಫೋಟೋ ತೆಗೆದುಕೊಂಡಿದ್ದಾರೆ. ಇದುವರೆಗೂ ಆ ಯುವಕರು ಪತ್ತೆಯಾಗಿಲ್ಲ. ಎಂದು ಕೊಲ್ಲಂ ಅಬಕಾರಿ ಸ್ಪೇಷಲ್ ಸ್ವ್ಯಾಡ್ ನ ಸರ್ಕಲ್ ಇನ್ಸ್‍ಪೆಕ್ಟರ್ ನೌಷಾದ್ ಅವರು ಮಾಹಿತಿ ನೀಡಿದ್ದಾರೆ.
ಇಲ್ಲಿನ ಮಂಗಾದ್ ಬೈಪಸ್ ಪ್ರದೇಶದಲ್ಲೂ ಗಾಂಜಾ ಗಿಡ ನೆಟ್ಟಿರುವ ಬಗ್ಗೆ ಮಾಹಿತಿ ಬಂದಿದೆ. ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಯಾವುದೇ ಗಿಡ ಪತ್ತೆಯಾಗಿಲ್ಲ. ಆ ಸಂಬಂಧ ಆರೋಪಿಗಳನ್ನು ಕೂಡಲೇ ಬಂಧಿಸುವುದಾಗಿ ತಿಳಿಸಿದರು. ಈ ಹಿಂದೆ ಮನ್ನರ್ಕಡ್ ಅಬಕಾರಿ ವಲಯದ ಅಧಿಕಾರಿಗಳು ದಾಳಿ ನಡೆಸಿ ಕಾಡಿನಲ್ಲಿ ಬೆಳೆದಿದ್ದ 120 ಗಾಂಜಾ ಗಿಡಗಳನ್ನು ನಾಶಪಡಿಸಿದ್ದರು.