ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ವಿಶ್ವದ 13 ದೇಶಗಳ ನಾಯಕರ ಪೈಕಿ ಶೇ.66 ಅಂಕಗಳೊಂದಿಗೆ ನಂ 1 ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್ ನಂತಹ ಹಲವು ದೇಶಗಳ ನಾಯಕರನ್ನು ಹಿಂದಿಕ್ಕಿದ್ದಾರೆ.
ಅಮೆರಿಕಾದ ಮಾರ್ನಿಂಗ್ ಕನ್ಸಲ್ಟ್ ಎಂಬ ಡೇಟಾ ಇಂಟೆಲಿಜೆನ್ಸ್ ಸಂಸ್ಥೆ ಈ ರೇಟಿಂಗ್‍ನ್ನು ಮೋದಿಗೆ ನೀಡಿದೆ. ಈ ಸಂಸ್ಥೆ ಪ್ರತಿ ವರ್ಷ ವಿಶ್ವದ ಅಗ್ರಗಣ್ಯ ನಾಯಕರ ಬಗ್ಗೆ ರೇಟಿಂಗ್ ಕಲೆಹಾಕುತ್ತದೆ. ಈ ಪೈಕಿ ಮೋದಿ ಅವರಿಗೆ ಶೇ.66 ರೇಟಿಂಗ್ ಪಡೆದುಕೊಂಡು ಮೊದಲ ಸ್ಥಾನ ಪಡೆದಿದ್ದಾರೆ. ಮೋದಿ ಅವರು ಭಾರತದಲ್ಲಿ ಕೊರೊನಾ ಎರಡನೇ ಅಲೆಯನ್ನು ದಿಟ್ಟವಾಗಿ ಎದುರಿಸಲು ತೆಗೆದುಕೊಂಡ ನಿರ್ಧಾರ ಮತ್ತು ದೇಶವನ್ನು ಮುನ್ನಡೆಸುತ್ತಿರುವ ರೀತಿಗೆ ಈ ರೇಟಿಂಗ್ ಬಂದಿದೆ ಎಂದು ವರದಿಯಾಗಿದೆ. ಈ ನಡುವೆ ಶೇ.28 ರೇಟಿಂಗ್ ಮೋದಿಯವರ ವಿರುದ್ಧ ಬಂದಿದೆ. ಇದನ್ನೂ ಓದಿ: ಕೃಷಿ ಕಾನೂನು ವಾಪಸ್ ಪಡೆಯಲ್ಲ: ಕೇಂದ್ರ ಕೃಷಿ ಸಚಿವ ತೋಮರ್
Global Leader Approval: Among All Adults https://t.co/dQsNxouZWb
Modi: 66%
Draghi: 65%
López Obrador: 63%
Morrison: 54%
Merkel: 53%
Biden: 53%
Trudeau: 48%
Johnson: 44%
Moon: 37%
Sánchez: 36%
Bolsonaro: 35%
Macron: 35%
Suga: 29%
*Updated 6/17/21 pic.twitter.com/FvCSODtIxa
— Morning Consult (@MorningConsult) June 17, 2021
ಮೋದಿ ಬಳಿಕ ಅಧಿಕ ರೇಟಿಂಗ್ ಪಡೆದವರ ಪೈಕಿ ಶೇ. 65 ರೇಟಿಂಗ್ ನೊಂದಿಗೆ ಇಟಲಿಯ ಪ್ರಧಾನಿ ಮಾರಿಯೋ ದಾರ್ಗಿ ಎರಡನೇ ಸ್ಥಾನದಲ್ಲಿದ್ದಾರೆ. ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಶೇ 63 ರೇಟಿಂಗ್ ಪಡೆದರೆ, ಶೇ 54 ರೇಟಿಂಗ್ ಪಡೆದ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ 4ನೇ ಸ್ಥಾನದಲ್ಲಿದ್ದಾರೆ. ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಶೇ.53 ರೇಟಿಂಗ್ ಪಡೆದು ಐದನೇ ಸ್ಥಾನದಲ್ಲಿದ್ದಾರೆ. ಯುಎಸ್ ನ ಅಧ್ಯಕ್ಷ ಜೋ ಬಿಡೆನ್ ಶೇ. 53 ರೇಟಿಂಗ್ ಪಡೆದು ಆರನೇ ಸ್ಥಾನ ಪಡೆದುಕೊಂಡಿದ್ದಾರೆ.