ನವದೆಹಲಿ: ಭಾರತಕ್ಕೆ ಮತ್ತೊಂದು ಸ್ವರ್ಣ ಪದಕ ಸಿಕ್ಕಿದೆ. ಆದರೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅಲ್ಲ. ಹಂಗೇರಿಯಲ್ಲಿ ನಡೆದ ಕೆಡೆಟ್ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಕುಸ್ತಿಯಲ್ಲಿ ಸ್ವರ್ಣ ಗೆದ್ದ ಪ್ರಿಯಾ ಮಲಿಕ್ ಗೆದ್ದಿದ್ದಾರೆ.
India’s Golden Hour! ????????#PriyaMalik wins Gold????at the World Cadet Wrestling Championship in Budapest, Hungary.
More glory to Girl Power. pic.twitter.com/M9yMtM6xz5
— Piyush Goyal (@PiyushGoyal) July 25, 2021
Advertisement
ಜಪಾನ್‍ಗೆ ಸಾವಿರ ಮೈಲುಗಳ ದೂರದಲ್ಲಿರುವ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆಯುತ್ತಿರುವ ವಿಶ್ವ ಕೆಡೆಟ್ ಕುಸ್ತಿ ಚಾಂಪಿಯನ್‍ಷಿಪ್‍ನಲ್ಲಿ ಭಾರತದ ಉದಯೋನ್ಮುಖ ಕುಸ್ತಿಪಟು ಪ್ರಿಯಾ ಮಲಿಕ್ ಸ್ವರ್ಣ ಸಾಧನೆ ಮೆರೆದಿದ್ದಾರೆ. ಹಂಗರಿಯಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‍ಶಿಪ್‍ನಲ್ಲಿ ಕುಸ್ತಿಪಟು ಪ್ರಿಯಾ ಮಲಿಕ್ ಅವರು ಚಿನ್ನವನ್ನು ಗೆದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಪತಾಕೆ ಹಾರಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್ 2021 ರಲ್ಲಿ ನಿನ್ನೆ ಮೀರಾಬಾಯಿ ಚಾನು ವೇಟ್‍ಲಿಫ್ಟಿಂಗ್‍ನಲ್ಲಿ ಬೆಳ್ಳಿ ಗೆದ್ದಿದ್ದಾರೆ. ನಂತರ ಮಹಿಳೆಯೊಬ್ಬರು ದೇಶಕ್ಕೆ ವೈಭವ ತರುವ ಸಂತೋಷದ ಸುದ್ದಿ ಇದಾಗಿದೆ. ಇದನ್ನೂ ಓದಿ: ಖ್ಯಾತ ನಟಿಯ ಕಾರು ಅಪಘಾತ – ಸ್ನೇಹಿತೆ ದಾರುಣ ಸಾವು
Advertisement
So pleased to find a namesake that the entire nation is extremely proud of! Well done #PriyaMalik Go champ ???? #WrestleBudapest pic.twitter.com/SpyebiAQmN
— Priya Malik (@PriyaSometimes) July 25, 2021
Advertisement
ಟೋಕಿಯೊ ಒಲಂಪಿಕ್ಸ್ ನ ನಡುವೆ ನಡೆದ ಕೆಡೆಟ್ ವಿಶ್ವ ಕುಸ್ತಿ ಚಾಂಪಿಯನ್‍ಷಿಪ್‍ನಲ್ಲಿ ಚಿನ್ನದ ಪದಕ ಗೆದ್ದಿರುವ ಪ್ರಿಯಾ ಮಲಿಕ್ ಭಾರತೀಯರು ಹೆಮ್ಮೆ ಪಡುವುದಕ್ಕೆ ಮತ್ತೊಂದು ಕಾರಣವಾಗಿದ್ದಾರೆ. ಮಹಿಳೆಯರ 73 ಕೆ.ಜಿ ತೂಕದ ವಿಭಾಗದ ಫೈನಲ್ ಪಂದ್ಯದಲ್ಲಿ ಬೆಲಾರಸ್‍ನ ಕುಸ್ತಿ ಪಟು ಕ್ಸೆನಿಯಾ ಪಟಾಪೊವಿಚ್ ಅವರನ್ನು 5-0 ಅಂತರದಿಂದ ಮಣಿಸಿದ್ದಾರೆ. ಅವರ ಸಾಧನೆಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Advertisement
Congratulations #PriyaMalik for the Gold medal in #wrestling
World’s Cadet Championship#प्रिया_मलिक @narendramodi @JPNadda @VanathiBJP pic.twitter.com/M6LFd8NK1E
— BJP Mahila Morcha (@BJPMahilaMorcha) July 25, 2021
ಟೋಕಿಯೋ ಒಪಂಪಿಕ್ಸ್ ನಲ್ಲಿ ಮೀರಾಬಾಯ್ ಚನು ಅವರು ಮಹಿಳೆಯರ 49 ಕೆ.ಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದ ಬೆನ್ನಲ್ಲೇ ಭಾರತಕ್ಕೆ ಕೆಡೆಟ್ ವಿಶ್ವ ಚಾಂಪಿಯನ್‍ಷಿಪ್‍ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.