ನವದೆಹಲಿ: ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿ ಮಾತನಾಡಲಿದ್ದಾರೆ. 75ನೇ ಸಭೆಯಲ್ಲಿ ಮಾತನಾಡಲಿರುವ ಅವರು ಭಾರತ 2021-22 ರ ಅವಧಿ ಭದ್ರತಾ ಮಂಡಳಿ ಸದಸ್ಯ ರಾಷ್ಟ್ರವಾಗಿ ಭಯೋತ್ಪಾದನೆ ಬಗ್ಗೆ ಪ್ರಸ್ತಾಪಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
Advertisement
ನ್ಯೂಯಾರ್ಕ್ ನಲ್ಲಿ ನಡೆಯುತ್ತಿರುವ ವರ್ಚುವಲ್ ಸಭೆಯಲ್ಲಿ ಪೂರ್ವ ರೆಕಾರ್ಡ್ ಮಾಡಿರುವ ಪ್ರಧಾನಿ ಮೋದಿ ಭಾಷಣವನ್ನು ಪ್ರಸಾರವಾಗಲಿದೆ. ಇಂದಿನ ಸಭೆಯಲ್ಲಿ ಮೊದಲ ಸ್ಪೀಕರ್ ಆಗಿ ಮೋದಿ ಮಾತನಾಡಲಿದ್ದಾರೆ.
Advertisement
ಪ್ರಧಾನಿ ಮೋದಿ ಭಾಷಣದಲ್ಲಿ ಭಯೋತ್ಪಾದನೆ ವಿರುದ್ಧ ಜಾಗತಿಕ ಕ್ರಮಕ್ಕೆ ಆಗ್ರಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಸುಸ್ಥಿರ ಅಭಿವೃದ್ಧಿ ಮತ್ತು ಹವಮಾನ ಬದಲಾವಣೆ ಬಗ್ಗೆ ಮೋದಿ ಪ್ರಸ್ತಾಪಿಸಲಿದ್ದಾರೆ. ವಿಶ್ವದ ಸಂಸ್ಥೆಯ ಶಾಂತಿ ಪಾಲನಾ ಕಾರ್ಯಾಚರಣೆಯಲ್ಲಿ ಭಾರತ ತೊಡಗಿಸಿಕೊಳ್ಳಲು ನಿಟ್ಟಿನಲ್ಲಿ ಪ್ರಯತ್ನಿಸಲಿದ್ದಾರೆ.
Advertisement
Advertisement
ಇದರ ಜೊತೆಗೆ ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗಿ ಭಾರತ ತನ್ನ ಭಾಷಣದಲ್ಲಿ ಗೌರವ, ಚರ್ಚೆ, ಸಹಕಾರ, ಶಾಂತಿ ಮತ್ತು ಅಭಿವೃದ್ಧಿ ವಿಚಾರಗಳ ಬಗ್ಗೆ ಮೋದಿ ಪ್ರಸ್ತಾವಣೆ ಮಂಡಿಸಲಿದ್ದಾರೆ. ಮತ್ತು ವಿಶ್ವ ಸಂಸ್ಥೆಯ ಅನುಮೋದನೆ ಸಮಿತಿ ಮತ್ತು ಘಟಕಗಳಲ್ಲಿ ವ್ಯಕ್ತಿಗಳ ಬದಲಿಸುವ ಪ್ರಕ್ರಿಯೆಯಲ್ಲಿ ಹೆಚ್ಚು ಪಾರದರ್ಶಕತೆಗಾಗಿ ಪ್ರಧಾನಿ ಮೋದಿ ಒತ್ತಾಯಿಸಲಿದ್ದಾರೆ ಎನ್ನಲಾಗಿದೆ.