ನವದೆಹಲಿ: ವಿಶ್ವಸಂಸ್ಥೆ ನೀಡುವ ಪ್ರತಿಷ್ಠಿತ ಮಿಲಿಟರಿ ಪ್ರಶಸ್ತಿಗೆ ಭಾರತೀಯ ಸೇನಾ ಮೇಜರ್ ಸುಮನ್ ಗವಾನಿ ಆಯ್ಕೆ ಆಗಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಿಂಗ ಸಮಾನತೆಗೆ ಹೋರಾಟ ನಡೆಸಿದ್ದಕ್ಕೆ ಸುಮನ್ ಗವಾನಿ ಮತ್ತು ಬ್ರೆಜಿಲಿನ ನೌಕಾಪಡೆ ಅಧಿಕಾರಿ ಕಾರ್ಲಾ ಮಾಂಟೆರೋ ಡಿ ಕ್ಯಾಸ್ಟ್ರೊ ಅರೌಜೊ ಅವರನ್ನು ಮಿಲಿಟರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಮೂಲಕ ಈ ಪ್ರಶಸ್ತಿಗೆ ಭಾಜನರಾದ ಮೊದಲ ಭಾರತದ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಸುಮನ್ ಗವಾನಿ ಪಾತ್ರರಾಗಿದ್ದಾರೆ.
Advertisement
Advertisement
ಈ ಇಬ್ಬರು ಮಹಿಳಾ ಶಾಂತಿಪಾಲಕರು ಪ್ರಭಾವಿ ಮಾದರಿ ವ್ಯಕ್ತಿಗಳೆಂದು ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇಬ್ಬರು ಮಹಿಳೆಯರು ರೋಲ್ ಮಾಡೆಲ್‍ಗಳು. ತಮ್ಮ ಉತ್ತಮ ಕೆಲಸದಿಂದ ಸಮುದಾಯದ ಏಳಿಗೆಗೆ ಶ್ರಮಿಸಿಸಿದ್ದಾರೆ. ಇವರ ಈ ಸಾಧನೆ ಇತರರಿಗೆ ಪ್ರೇರಣೆಯಾಗಲಿ ಎಂದು ಗುಟೆರಸ್ ಹೇಳಿದ್ದಾರೆ.
Advertisement
ಲಿಂಗ ಸಮಾನತೆಗೆ ಹೋರಾಟ ನಡೆಸಿದವರಿಗೆ ನೀಡಲಾಗುವ ಈ ಪ್ರಶಸ್ತಿಯಲ್ಲಿ 2016ರಲ್ಲಿ ಸ್ಥಾಪಿಸಲಾಗಿದ್ದು, ಮೊದಲ ಬಾರಿಗೆ ಇಬ್ಬರು ಮಹಿಳೆಯರು ಆಯ್ಕೆ ಆಗಿದ್ದಾರೆ.
Advertisement
As #PKDay approaches what better news for us at #UNMISS than #peacekeeper Major Suman Gawani frm. ???????? being co-winner of the #UN Military Gender Advocate of the Year 2019! Read more abt. Maj. Gawani's contributions in #SouthSudan: https://t.co/FJUrXPNBiT #womeninpeacekeeping pic.twitter.com/s7qNtHgnTE
— UNMISS (@unmissmedia) May 26, 2020
ಪ್ರಶಸ್ತಿ ಯಾಕೆ?
ಸುಮನ್ ಗವಾನಿ ದಕ್ಷಿಣ ಸುಡಾನಿನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಈ ಸಂದರ್ಭದಲ್ಲಿ ವಿಶ್ವಸಂಸ್ಥೆಯ 230 ಸೇನಾ ವೀಕ್ಷಕರಿಗೆ ಲೈಂಗಿಕ ದೌರ್ಜನ್ಯ ಮತ್ತು ಸಂಘರ್ಷ ವಿಚಾರಕ್ಕೆ ಮಾರ್ಗದರ್ಶನ ನೀಡಿದ್ದರು. ಅಷ್ಟೇ ಅಲ್ಲದೇ ಮಹಿಳಾ ಸೇನಾ ವೀಕ್ಷಕರ ಸಂಖ್ಯೆ ಹೆಚ್ಚಿಸುವಲ್ಲಿ ಇವರು ಮುಖ್ಯ ಪಾತ್ರವಹಿಸಿದ್ದರು.
ಆಫಿಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ಪದವಿ ಪಡೆದ ಬಳಿಕ 2011ರಲ್ಲಿ ಸುಮನ್ ಗವಾನಿ ಭಾರತೀಯ ಸೇನೆಯನ್ನು ಸೇರಿದ್ದಾರೆ. ಸುಮನ್ ಗವಾನಿ ಅವರು ಮಿಲಿಟರಿ ಕಾಲೇಜಿನಲ್ಲಿ ಟೆಲಿಕಮ್ಯೂನಿಕೇಶನ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
Here is Major Suman Gawani who we interviewed in South Sudan in Jan 2019 on her role that got her selected as the 1st Indian peacekeeper for the prestigious UN award #SSOT @junubiin @ambtstirumurti @AkbaruddinIndia @adgpi @MEAIndia @StratNewsGlobal @Lacroix_UN @UNPeacekeeping pic.twitter.com/nwiMApUIPZ
— amitabh p revi (@amitabhprevi) May 26, 2020