ನವದೆಹಲಿ: ಇಡೀ ವಿಶ್ವವನ್ನು ಬೆಂಬಿಡದೇ ಕಾಡುತ್ತಿರುವ ಮಹಾಮಾರಿ ಕೊರೊನಾ ವೈರಸ್‍ಗೆ 5,000,599 ಮಂದಿ ತುತ್ತಾಗಿದ್ದಾರೆ.
50 ಲಕ್ಷ ಸೋಂಕಿತರ ಪೈಕಿ ಈಗಾಗಲೇ 19,70,918 ಮಂದಿ ಗುಣಮುಖರಾಗಿದ್ದು, 3,25,156 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ 27,04,525 ಸಕ್ರಿಯ ಪ್ರಕರಣಗಳಿದ್ದು, 26,59,096(ಶೇ. 98ರಷ್ಟು) ಸಣ್ಣ ಪ್ರಮಾಣದ ಸೋಂಕಿನ ಲಕ್ಷಣಗಳಿದ್ದವರು ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು 45,429(ಶೇ. 2ರಷ್ಟು) ಮಂದಿ ತೀವ್ರ ನಿಗಾ ಘಟಕದಲ್ಲಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
Advertisement
Advertisement
ವಿಶ್ವಾದ್ಯಾಂತ ಕೊರೊನಾ ಪೀಡಿತ ರಾಷ್ಟ್ರಗಳ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಅಮೆರಿಕದಲ್ಲಿ 15,70,583 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 3,08,705 ಮಂದಿ ರಷ್ಯಾದಲ್ಲಿ ಸೋಂಕಿಗೆ ತುತ್ತಾಗಿದ್ದು, ರಷ್ಯಾ ಎರಡನೇ ಸ್ಥಾನದಲ್ಲಿದೆ. ಸ್ಪೇನ್ ಸದ್ಯ ಮೂರನೇ ಸ್ಥಾನದಲ್ಲಿದ್ದು, 2,78,803 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
Advertisement
Advertisement
ಭಾರತದಲ್ಲೂ ಕೊರೊನಾ ಪೀಡಿತರ ಸಂಖ್ಯೆ ಲಕ್ಷದ ಗಡಿ ದಾಟಿದ್ದು, ಈ ವರೆಗೂ 1,07,021 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಕಿ 3,303 ಮಂದಿ ಸಾವನ್ನಪ್ಪಿದರೇ 42,379 ಮಂದಿ ಗುಣಮುಖರಾಗಿದ್ದಾರೆ.