ವಿಶ್ವನಾಥ್ ಮುಂದೆ ತಮ್ಮ ಆಸೆ ಹೊರ ಹಾಕಿದ ಚಕ್ರವರ್ತಿ

Public TV
1 Min Read
vishwanth 3

ಬಿಗ್‍ಬಾಸ್ ಮನೆಗೆ ಬಂದಿರೋ ಹೊಸ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ ಹಳೆಯ ಆಟಗಾರರ ಸ್ನೇಹ ಸಂಪಾದಿಸಲು ಪ್ರಯತ್ನಿಸುತ್ತಿದ್ದಾರೆ. ಒಂದು ತಿಂಗಳು ಮನೆಯ ಮಂದಿ ಹೊರಗೆ ಹೇಗೆ ಬಿಂಬಿತರಾಗಿದ್ದಾರೆ ಅನ್ನೋ ವಿಷಯ ಸದ್ಯ ಅಲ್ಲಿರುವ ಚಕ್ರವರ್ತಿ ಅವರಿಗೆ ಮಾತ್ರ ಗೊತ್ತು. ಹೀಗಾಗಿ ಬಂದ ಮೊದಲ ದಿನವೇ ಮನೆಯ ಸದಸ್ಯರಿಗೆ ಅಂಕ ಸಹ ನೀಡಿದ್ರು. ಇದೀಗ ವಿಶ್ವನಾಥ್ ಮುಂದೆ ಕೆಲ ವಿಷಯಗಳನ್ನ ಹಂಚಿಕೊಂಡಿರುವ ಚಕ್ರವರ್ತಿ, ಆಟ ಸೇರಿದಂತೆ ಮನೆಯಲ್ಲಿ ಹೆಚ್ಚು ಸಕ್ರಿಯನಾಗುವಂತೆ ಸಲಹೆ ನೀಡಿದ್ದಾರೆ.

vishwanth 1

ರಘು, ನಿಧಿ, ನನಗೆ ಸೇರಿದಂತೆ ಬಹುತೇಕರಿಗೆ ಈ ಅವಕಾಶ ಸಿಕ್ಕಿದ್ದು ನಮ್ಮ ಜೀವನದ ಸೆಕೆಂಡ್ ಹಾಫ್. ನಾವೆಲ್ಲ 40 ವರ್ಷ ಮೇಲ್ಪಟ್ಟವರು. ಆದ್ರೆ ನೀನು ಇನ್ನೂ ಚಿಕ್ಕವನು. ನಿನ್ನಲ್ಲಿರುವ ಟ್ಯಾಲೆಂಟ್ ಜನತೆಗೆ ತೋರಿಸು. ನಾವೆಲ್ಲ ಇಲ್ಲಿ ಬಂದಿರೋದು ನಮ್ಮ ಪ್ರತಿಭೆ ತೋರಿಸಲು ಎಂದು ಚಕ್ರವರ್ತಿ ಹೇಳಿದ್ರು. ನೀನು ನಿನ್ನ ಪ್ರತಿಭೆ ತೋರಿಸಬೇಕು ಅನ್ನೋದು ನನ್ನ ಆಸೆ ಎಂದು ಹೇಳಿದರು.

vishwanth 2

ಚಕ್ರವರ್ತಿ ಮಾತುಗಳಿಗೆ ಉತ್ತರಿಸಿದ ವಿಶ್ವನಾಥ್, ಬರೆಯೋದಕ್ಕೆ ಪೆನ್ನು, ಪೇಪರ್ ಇಲ್ಲ ಅನ್ನೋ ನೆಪ ಹೇಳಲ್ಲ. ಆದ್ರೆ ಇಲ್ಲಿಯ ಒತ್ತಡದಿಂದ ಆಗ್ತಿಲ್ಲ ಅಂದ ಸಮಜಾಯಿಷಿ ಕೊಟ್ರು. ಅದೇನೇ ಸ್ಟ್ರೆಸ್ ಇರಲಿ, ನಾನು ನಿಂಗೆ ಸಾಹಿತ್ಯ ಬರೆದುಕೊಡ್ತೀನಿ ಅಂತ ಮಾತು ಕೊಟ್ಟರು.

ಚಕ್ರವರ್ತಿ ಚಂದ್ರಚೂಡ ಓರ್ವ ಮಾಜಿ ಪತ್ರಕರ್ತ ಮತ್ತು ಬರಹಗಾರರು. ಇತ್ತ ವಿಶ್ವನಾಥ್ ಸಹ ಒಳ್ಳೆಯ ಗಾಯಕ. ಮುಂದೆ ಈ ಜೋಡಿಯಿಂದ ಹೊಸ ಹಾಡುಗಳನ್ನ ಬಿಗ್ ಮನೆಯಲ್ಲಿ ಕೇಳುವ ಸಾಧ್ಯತೆಗಳಿವೆ.

Share This Article
Leave a Comment

Leave a Reply

Your email address will not be published. Required fields are marked *