– ಮೊದಲ ಪಂದ್ಯವಾಡಿತ್ತು ಭಾರತ
ಲಂಡನ್: ಪ್ರತಿ ಕ್ರಿಕೆಟ್ ಅಭಿಮಾನಿಗೂ ಈ ದಿನವನ್ನು ಮರೆಯಲು ಸಾಧ್ಯವೇ ಇಲ್ಲ. ಕ್ರಿಕೆಟ್ ಇತಿಹಾಸದಲ್ಲೇ 1975ರ ಜೂನ್ 7 ಪ್ರಮುಖ ದಿನವೆಂದರೇ ತಪ್ಪಾಗದು. ಅಂದು ಇಂಗ್ಲೆಂಡ್‍ನಲ್ಲಿ ಮೊದಲ ಬಾರಿಗೆ ಪುರುಷರ ವಿಶ್ವಕಪ್ ಪ್ರಾರಂಭವಾಯಿತು.
ಇಂಗ್ಲೆಂಡ್‍ನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯವು ಇಂಗ್ಲೆಂಡ್ ಮತ್ತು ಭಾರತ ನಡುವೆ ನಡೆಯಿತು. ಆದರೆ 1975ರ ವಿಶ್ವಕಪ್ ಅನ್ನು 60 ಓವರ್‌ಗಳ ಸ್ವರೂಪದಲ್ಲಿ ಆಡಲಾಗಿತ್ತು. ಇಂಗ್ಲೆಂಡ್ ಮತ್ತು ಭಾರತ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ಇಂಗ್ಲೆಂಡ್ ತಂಡವು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಡೆನಿಸ್ ಅಮಿಸ್ ಕೇವಲ 108 ಎಸೆತಗಳಲ್ಲಿ 137 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಇಂಗ್ಲೆಂಡ್ ನಿಗದಿತ 60 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 334 ರನ್ ಗಳಿಸಿತ್ತು.
Advertisement
Advertisement
ಟೀಂ ಇಂಡಿಯಾ ಪರ ಸೈಯದ್ ಅಬಿದ್ ಅಲಿ ಎರಡು ವಿಕೆಟ್ ಕಬಳಿಸಿದ್ದರು. ಈ ಪಂದ್ಯದಲ್ಲಿ ಸುನಿಲ್ ಗವಾಸ್ಕರ್ 174 ಎಸೆತಗಳಲ್ಲಿ ಅಜೇಯ 36 ರನ್ ಗಳಿಸಿದ್ದರು. ಆದರೂ ಅವರು ಪ್ರಸಿದ್ಧರಾಗಿದ್ದರು. ಏಕೆಂದರೆ ಆ ಸಮಯದಲ್ಲಿ ಅನೇಕರು ಗವಾಸ್ಕರ್ ನಿಧಾನವಾಗಿ ರನ್ ಕಲೆ ಹಾಕುತ್ತಾರೆ ಎಂದು ಟೀಕಿಸಿದ್ದರು.
Advertisement
ಇಂಗ್ಲೆಂಡ್ ನೀಡಿದ್ದ 335 ರನ್‍ಗಳ ಗುರಿಯನ್ನು ಬೆನ್ನಟ್ಟಲು ಭಾರತವು ವಿಫಲವಾಗಿತ್ತು. ನಿಗದಿತ 60 ಓವರ್ ಗಳಲ್ಲಿ ಟೀಂ ಇಂಡಿಯಾ ಮೂರು ವಿಕೆಟ್ ನಷ್ಟಕ್ಕೆ 132 ರನ್ ಮಾತ್ರ ಕಲೆ ಹಾಕಲು ಶಕ್ತವಾಗಿತ್ತು. ಈ ಮೂಲಕ ಇಂಗ್ಲೆಂಡ್ ವಿರುದ್ಧ ಭಾರತವು 202 ರನ್‍ಗಳ ಅಂತರದಿಂದ ಸೋಲು ಕಂಡಿತ್ತು.
Advertisement
ಟೂರ್ನಿಯ ಫೈನಲ್‍ನಲ್ಲಿ 1975ರ ಜೂನ್ 14ರಂದು ಆಸ್ಟ್ರೇಲಿಯಾವನ್ನು ಕ್ಲೈವ್ ಲಾಯ್ಡ್ ನೇತೃತ್ವದ ವೆಸ್ಟ್ ಇಂಡೀಸ್ ತಂಡ ಸೋಲಿಸಿ ಚೊಚ್ಚಲ ವಿಶ್ವಕಪ್ ಟ್ರೋಫಿಯನ್ನು ಗೆದ್ದು ಬೀಗಿತ್ತು. ಅಷ್ಟೇ ಅಲ್ಲದೆ 1979ರ ವಿಶ್ವಕಪ್ ಅನ್ನು ವಿಂಡೀಸ್ ತಂಡ ಗೆದ್ದುಕೊಂಡಿತ್ತು. ಆದರೆ ಭಾರತವು 1983ರಲ್ಲಿ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿತ್ತು.
ಈವರೆಗೂ ವಿಶ್ವಕಪ್ ಕ್ರಿಕೆಟ್‍ನ 12 ಟೂರ್ನಿಗಳು ನಡೆದಿವೆ. ಇದರಲ್ಲಿ ಆಸ್ಟ್ರೇಲಿಯಾ ಗರಿಷ್ಠ ಐದು ಬಾರಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ವೆಸ್ಟ್ ಇಂಡೀಸ್ ಮತ್ತು ಭಾರತ ತಲಾ ಎರಡು ಬಾರಿ ಟ್ರೋಫಿ ಗೆದ್ದಿದ್ದರೆ, ಶ್ರೀಲಂಕಾ, ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ತಲಾ ಒಮ್ಮೆ ಜಯ ಸಾಧಿಸಿವೆ.
60 ಟು 50 ಓವರ್ ಜರ್ನಿ:
70ರ ದಶಕದಲ್ಲಿ ವಿವಿಧ ದೇಶಗಳು 55 ಓವರ್, 60 ಓವರ್, 40 ಓವರ್, 40 ಓವರ್ (ಎಂಟು ಎಸೆತ) ಹಾಗೂ 35 ಓವರ್ (ಎಂಟು ಎಸೆತ) ಹೀಗೆ ಸಾಕಷ್ಟು ಸ್ವರೂಪಗಳಲ್ಲಿ ಆಡುತ್ತಿದ್ದವು. ಈ ಎಲ್ಲಾ ವಿಭಿನ್ನ ಸ್ವರೂಪಗಳನ್ನು ವಿವಿಧ ದೇಶಗಳ ತಂಡಗಳು ತವರು ನೆಲದಲ್ಲಿ ಆಡುತ್ತಿದ್ದವು. ಆದರೆ ಹೀಗಾಗಿ ಮೊದಲ ಮೂರು ವಿಶ್ವಕಪ್ ಪಂದ್ಯಗಳನ್ನು 60 ಓವರ್ ಗಳಿಗೆ ಸೀಮಿತಗೊಳಿಸಲಾಗಿತ್ತು.
1977ರಲ್ಲಿ ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ಮಧ್ಯೆ ನಡೆದ ಪಂದ್ಯವು ಮೊದಲ ಬಾರಿಗೆ 50 ಓವರ್ ಗಳಲ್ಲಿ ನಡೆದಿತ್ತು. 50 ಓವರ್ ಸ್ವರೂಪವನ್ನು ಅನೇಕ ದೇಶಗಳಿಗೆ ಸರಿ ಅನಿಸಿತು. ಹೀಗಾಗಿ ಇತರ ದೇಶಗಳು ನಿಧಾನವಾಗಿ 50 ಓವರ್ ಪಂದ್ಯವನ್ನು ಅಳವಡಿಸಿಕೊಂಡವು. 1983ರ ವಿಶ್ವಕಪ್‍ನಲ್ಲಿ ಕೊನೆಯದಾಗಿ 60 ಓವರ್ ಟೂರ್ನಿ ನಡೆದಿತ್ತು. ಅದಾದ ಬಳಿಕ ನಡೆದ ಎಲ್ಲ ಟೂರ್ನಿಯಲ್ಲೂ 50 ಓವರ್ ನಲ್ಲೇ ಆಡಲಾಗಿದೆ.