`ವಿಶ್ರಾಂತಿಗೆ ತೆರಳಿದ್ದ ತಂದೆ ಹೊರ ಬರಲಿಲ್ಲ, ಕೊಠಡಿಯ ಡೋರ್‌ ಬಡಿದರೂ ತೆಗೆಯಲಿಲ್ಲ’- ಪುತ್ರಿಯಿಂದ ದೂರು

Public TV
1 Min Read
Vijay Shankar Suicide IMA CASE 2

ಬೆಂಗಳೂರು: ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿ ವಿಜಯ್ ಶಂಕರ್ ಪುತ್ರಿ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವಿನಡಿ ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ?
ಐಎಂಎ ಪ್ರಕರಣದಿಂದ ತಂದೆ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಸಿಬಿಐ ತನಿಖೆ, ಪ್ರಾಸಿಕ್ಯೂಷನ್ ಬಗ್ಗೆ ಮಾನಸಿಕ ಘಾಸಿಗೆ ಒಳಗಾಗಿದ್ದರು. ಮಂಗಳವಾರ ಮಧ್ಯಾಹ್ನ ಮನೆಗೆ ಬಂದ ಬಳಿಕ ಮಹಡಿ ಮೇಲೆ ಹೋಗಿದ್ದರು. ವಿಶ್ರಾಂತಿ ಪಡೆಯಲು ಹೋಗಿದ್ದಾರೆ ಎಂದು ನಾವು ಭಾವಿಸಿದ್ದೆವು. ಸಂಜೆ ಎಷ್ಟು ಹೊತ್ತಾದರೂ ಕೊಠಡಿಯಿಂದ ಹೊರ ಬಂದಿರಲಿಲ್ಲ.

Vijay Shankar Suicide IMA CASE 5

ಕೊಠಡಿಯ ಬಾಗಿಲು ಬಡಿದರೂ ತಂದೆ ಡೋರ್ ತೆಗೆಯಲಿಲ್ಲ. ಹೀಗಾಗಿ ಡೋರ್ ಮುರಿದ ಒಳಗೆ ಹೋಗಿದ್ದೆವು. ಈ ವೇಳೆ ನೇಣು ಬಿಗಿದ ಸ್ಥಿತಿಯಲ್ಲಿ ತಂದೆ ಇದ್ದರು. ಕೂಡಲೇ ವೈದ್ಯರನ್ನು ಕರೆಸಿ ನೋಡುವಷ್ಟರಲ್ಲಿ ಪ್ರಾಣ ಹೋಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

57 ವರ್ಷದ ವಿಜಯ್‌ ಶಂಕರ್‌ ನಿನ್ನೆ ಜಯನಗರದ ಟಿ ಬ್ಲಾಕ್‌ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಂಡ ಬಳಿಕ ಕೂಡಲೇ ಮರಣೋತ್ತರ ಪರೀಕ್ಷೆ ನಡೆಸದೇ ಗಂಟಲ ದ್ರವನ್ನು ಕೋವಿಡ್‌ 19 ಪರೀಕ್ಷೆಗೆ ಪಡೆಯಲಾಗಿತ್ತು. ಇಂದು ಮಧ್ಯಾಹ್ನ ಫಲಿತಾಂಶ ನೆಗೆಟಿವ್‌ ಬಂದಿದೆ.

Vijay Shankar Suicide IMA CASE 3

ಈಗ ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ನಡೆಸಲು ದೇಹವನ್ನು ತರಲಾಗಿದೆ. ಪರೀಕ್ಷೆ ಪೂರ್ಣಗೊಂಡ ಬಳಿಕ ಮೃತದೇಹವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರ ಮಾಡಲಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *