ಬೆಂಗಳೂರು: ಒಂದು ರೂಪದಲ್ಲಿ ಗಣೇಶನ ಆಕೃತಿ, ಮತ್ತೊಂದು ಕಡೆಯಿಂದ ಗರುಡನ ರೀತಿ, ತಾಯಿ ಮಗುವಿನ ಆಕೃತಿ, ಜಾಂಬವಂತ ಕರಡಿ ಹೀಗೆ ನಾನಾ ರೂಪದಲ್ಲಿ ಕಾಣುವ ಹಲಸಿನ ಅಪರೂಪದ ಹಣ್ಣು ವಿಸ್ಮಯಕಾರಿ ರೀತಿಯಲ್ಲಿ ಬೆಳವಣಿಗೆಯಾಗಿದೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಜಕ್ಕನಹಳ್ಳಿ ನಿವಾಸಿ ಶಿವಕುಮಾರ್ ಎಂಬವರ ತೋಟದಲ್ಲಿ ಒಂದು ಪುರಾತನವಾದ ಹಲಸಿನ ಮರ ಇದೆ. ಈ ಮರದಲ್ಲಿ ಬಿಟ್ಟ ಹಣ್ಣು ನಾನಾ ಆಕೃತಿಯಲ್ಲಿ ಆ ಹಲಸಿನ ಹಣ್ಣನ್ನ ತಮ್ಮ ಊಹೆಯಂತೆ ಕಾಣತೊಡಗಿದೆ. ಮರದಲ್ಲಿ ಕಂಡ ಈ ಅಪರೂಪದ ಹಣ್ಣನ್ನು ಮಾಲೀಕ ಶಿವಕುಮಾರ್ ಮನೆಗೆ ತಂದು ದೇವರ ಹಣ್ಣು ಎಂದು ಮನೆಯವರಿಗೆ ಮತ್ತು ಸ್ನೇಹಿತರಿಗೆ ತೋರಿಸಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ನಮ್ಮ ತೋಟದಲ್ಲಿ ಸಾಕಷ್ಟು ವರ್ಷದ ಹಳೆಯ ಮರ ಇದೆ. ಈ ಹಲಸಿನ ಮರದಲ್ಲಿ ಈ ಹಣ್ಣು ನೋಡಿದಾಗ ನನಗೆ ನಾಲ್ಕೈದು ರೂಪದಲ್ಲಿ ಗೋಚರವಾಗಿದೆ, ಒಂದು ರೀತಿಯಲ್ಲಿ ಈ ಹಣ್ಣು ನೋಡಲು ಖುಷಿಯಾಗಿದೆ ಎಂದಿದ್ದಾರೆ. ಇನ್ನೂ ಈ ಹಣ್ಣು ಅವರವರ ಮನಸ್ಥಿತಿಗೆ ನೋಡುವ ರೀತಿಯಲ್ಲಿ ಗೋಚರವಾಗುವ ದೃಷ್ಟಿಯಲ್ಲಿ ಕಾಣಬಹುದಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಿಂತಾಮಣಿಯಿಂದ ನವದೆಹಲಿಗೆ 250 ಟನ್ ಮಾವು ಹೊತ್ತು ಹೊರಟ ಕಿಸಾನ್ ರೈಲು