ಲಕ್ನೋ: ವಿವಾಹ ಸಮಾರಂಭದ ವೇಳೆ ಡ್ಯಾನ್ಸ್ ಮಾಡಲು ವಧುವನ್ನು ಎಳೆದಾಡಿದ್ದಕ್ಕೆ ಗಲಾಟೆಯಾಗಿದ್ದು, ಸಿಟ್ಟಿಗೆದ್ದ ಯುವತಿ ವಿವಾಹವನ್ನೇ ಕ್ಯಾನ್ಸಲ್ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ಉತ್ತರ ಪ್ರದೇಶದ ಬರೇಲಿ ಬಳಿ ಘಟನೆ ನಡೆದಿದ್ದು, ಅದ್ಧೂರಿಯಾಗಿ ನಡೆಯುತ್ತಿದ್ದ ವಿವಾಹ ಸಮಾರಂಭದಲ್ಲಿ ವರನ ಕೆಲಸ ಸ್ನೇಹಿತರು ಡ್ಯಾನ್ಸ್ ಮಾಡುವಂತೆ ವಧುವನ್ನು ಎಳೆದಿದ್ದಕ್ಕೆ ಯುವತಿ ಕೋಪಗೊಂಡಿದ್ದಾಳೆ ಈ ವೇಳೆ ವಧು ಹಾಗೂ ವರರ ಸಂಬಂಧಿಕರ ಮಧ್ಯೆ ಗಲಾಟೆ ಉಂಟಾಗಿದ್ದು, ಮದುವೆ ಕ್ಯಾನ್ಸಲ್ ಮಾಡುವ ಹಂತವನ್ನು ತಲುಪಿದೆ.
Advertisement
Advertisement
ಶುಕ್ರವಾರ ವಧು ಹಾಗೂ ಆಕೆಯ ಕುಟುಂಸ್ಥರು ಅದ್ಧೂರಿ ವಿವಾಹ ಸಮಾರಂಭಕ್ಕೆ ಆಗಮಿಸಿದ್ದಾರೆ. ವಧು-ವರ ಇಬ್ಬರೂ ಪದವಿಧರರಾಗಿದ್ದು, ಕಣ್ಣುಜ್ ಹಾಗೂ ಬರೇಲಿಯವರು. ವಿವಾಹ ಸಮಾರಂಭ ಅದ್ಧೂರಿಯಾಗಿ ಹಾಗೂ ಸರಾಗವಾಗಿಯೇ ನಡೆದಿತ್ತು. ಆದರೆ ವರನ ಕೆಲಸ ಸ್ನೇಹಿತರು ಡ್ಯಾನ್ಸ್ ಮಾಡುವಂತೆ ವಧುವನ್ನು ಎಳೆದಿದ್ದಾರೆ. ಬಳಿಕ ಎರಡೂ ಕಡೆಯವರ ಮಧ್ಯೆ ವಾಗ್ವಾದ ನಡೆದಿದೆ.
Advertisement
Advertisement
ವಾಗ್ವಾದ ತಾರಕಕ್ಕೇರಿದ್ದರಿಂದ ವಿವಾಹವನ್ನು ಕ್ಯಾನ್ಸಲ್ ಮಾಡಲಾಗಿದೆ. ಅಲ್ಲದೆ ವಧು ಮರಳಿ ಮನೆಗೆ ತೆರಳಿದ್ದಾರೆ. ಬಳಿಕ ವಧುವಿನ ಕುಟುಂಬದ್ಥರು ವರನ ಕುಟುಂಬದವರ ವಿರುದ್ಧ ವರದಕ್ಷಿಣೆ ದೂರು ದಾಖಲಿಸಿದ್ದಾರೆ. ಬಳಿಕ ಎರಡೂ ಕಡೆಯವರು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ನಿರ್ಧರಿಸಿದ್ದು, ಬಳಿಕ ವರನ ಕುಟುಂಬದ್ಥರು 6.5 ಲಕ್ಷ ನೀಡಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಎಫ್‍ಐಆರ್ ದಾಖಲಾಗದ್ದರಿಂದ ಮಾತುಕತೆ ಮೂಲಕ ಬಗೆಹರಿಸಿಕೊಂಡಿದ್ದಾರೆ.
ಭಾನುವಾರ ವರನ ಕುಟುಂಬಸ್ಥರು ವಧುವಿನ ಕುಟುಂಬದವರನ್ನು ಮನವೊಲಿಸಲು ಯತ್ನಿಸಿದ್ದು, ಮತ್ತೆ ಸರಳ ವಿವಾಹವನ್ನು ಏರ್ಪಡಿಸುವಂತೆ ಮನವಿ ಮಾಡಿದ್ದಾರೆ. ಆದರೆ ವಧು ಇದಕ್ಕೆ ಒಪ್ಪಿಲ್ಲ. ದುರ್ವರ್ತನೆ ತೋರಿದ್ದಾರೆ ಹೀಗಾಗಿ ನಾನು ವಿವಾಹವಾಗಲ್ಲ ಎಂದಿದ್ದಾಳೆ.