– ನೋಡ ನೋಡುತ್ತಿದ್ದಂತೆ ಮಾಯ
ನವದೆಹಲಿ: ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಗೆ ಗನ್ ತೋರಿಸಿ ಹಾಡಹಗಲೇ ಚಿನ್ನಾಭರಣ ಕದ್ದೊಯ್ದಿರುವ ಆಘಾತಕಾರಿ ಘಟನೆ ನಡೆದಿದೆ.
ಶುಕ್ರವಾರ ಪೂರ್ವ ದೆಹಲಿಯಲ್ಲಿ ಘಟನೆ ನಡೆದಿದ್ದು, ಕೃತ್ಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಈ ವಿಡಿಯೋಗಳನ್ನು ಸ್ವತಃ ಪೊಲೀಸರು ಬಿಡುಗಡೆ ಮಾಡಿದ್ದು, ಇಬ್ಬರ ಪೈಕಿ ಒಬ್ಬ ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಆದರೆ ಗುರುತು ಇನ್ನೂ ಪತ್ತೆಯಾಗಿಲ್ಲ. ಲೂಟಿ ಮಾಡಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಪೂರ್ವ ದೆಹಲಿಯ ವಿವಿಧ ಭಾಗಗಳ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ಸುಮಾರು 3.30ಕ್ಕೆ ಘಟನೆ ನಡೆದಿದ್ದು, ಸಂತ್ರಸ್ತ ಮಹಿಳೆಯನ್ನು ಲಕ್ಷ್ಮಿ ಎಂದು ಗುರುತಿಸಲಾಗಿದೆ. ಮಹಿಳೆ ವಿವಾಹ ಸಮಾರಂಭದಿಂದ ವಾಪಸ್ ಬರುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೈಕ್‍ನಲ್ಲಿ ಬಂದ ಇಬ್ಬರು ಪುರುಷರು ತಮ್ಮ ವಾಹನವನ್ನು ನಿಲ್ಲಿಸಿ, ಒಬ್ಬ ಮಹಿಳೆ ಬಳಿ ಬಂದಿದ್ದಾನೆ. ತಕ್ಷಣವೇ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ವಿವಿಧ ಸಿಸಿಟಿವಿ ದೃಶ್ಯಗಳಲ್ಲಿ ಘಟನೆಯ ವಿಡಿಯೋ ರೆಕಾರ್ಡ್ ಆಗಿದೆ. ಇವುಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಆರೋಪಿ ಒಂದು ಕೈಯ್ಯಲ್ಲಿ ಗನ್ ಹಾಗೂ ಇನ್ನೊಂದು ಕೈಯ್ಯಲ್ಲಿ ಹೆಲ್ಮೆಟ್ ಹಿಡಿದು ಓಡುವ ದೃಶ್ಯ ಸೆರೆಯಾಗಿದೆ ಪೊಲೀಸರು ವಿವರಿಸಿದ್ದಾರೆ.