ವಿವಾಹಿತೆಯ ಮೇಲೆ ಲವ್-ಮಹಿಳೆಯ ಪತಿಯನ್ನ ಕೊಂದು ನೇತಾಕಿದ

Public TV
1 Min Read
crime

– ಮದ್ವೆಯಾಗಿದ್ರೂ ಮಹಿಳೆ ಹಿಂದೆ ಓಡಾಡ್ತಿದ್ದ
– ಕೊಲೆಯ ಬಳಿಕ ಗ್ರಾಮದಿಂದ ಪರಾರಿ

ಪಾಟ್ನಾ: ವಿವಾಹಿತೆಯನ್ನ ಪ್ರೀತಿಸುತ್ತಿದ್ದ ವ್ಯಕ್ತಿಯೋರ್ವ ಆಕೆಯ ಪತಿಯನ್ನ ಕೊಲೆಗೈದಿರುವ ಘಟನೆ ಬಿಹಾರದ ಪೂರ್ಣಿಯಾದ ತಾರಾನಗರದಲ್ಲಿ ನಡೆದಿದೆ.

ವಿನೋದ್ ಮೆಹ್ತಾ ಕೊಲೆಯಾದ ವ್ಯಕ್ತಿ. ವಿನೋದ್ ಪತ್ನಿ ನೀಲುಳನ್ನ ಅದೇ ಗ್ರಾಮದ ವಿಜಯ್ ಪ್ರೀತಿಸುತ್ತಿದ್ದನು. ವಿಜಯ್ ಗೆ ಮದುವೆಯಾಗಿದ್ರೂ ನೀಲು ಹಿಂದೆ ಓಡಾಡುತ್ತಿದ್ದನು. ವಿಜಯ್ ತನ್ನ ಜೊತೆ ಅಸಭ್ಯವಾಗಿ ವರ್ತಿಸುತ್ತಿರುವ ಬಗ್ಗೆ ನೀಲು ಪತಿಗೆ ಹೇಳಿದ್ದರು. ವಿನೋದ್ ಮೆಹ್ತಾ ಆತನಿಗೆ ಎಚ್ಚರಿಕೆ ನೀಡಿದ್ದನು. ಆದ್ರೂ ವಿಜಯ್ ತನ್ನ ಚಾಳಿಯನ್ನ ಮುಂದುವರಿಸಿದ್ದನು.

crime

ವಿಜಯ್ ಉಪಟಳ ಹೆಚ್ಚಾಗುತ್ತಿದ್ದಂತೆ ವಿನೋದ್ ಮತ್ತು ನೀಲು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಪೊಲೀಸರು ಆರೋಪಿಯನ್ನ ವಿಚಾರಣೆ ನಡೆಸಿ ಒಂದು ದಿನದ ನಂತರ ಬಿಟ್ಟು ಕಳುಹಿಸಿದ್ದರು. ಜೈಲಿನಿಂದ ಬಂದವನೇ ಕೊಲೆ ಮಾಡಿದ್ದಾನೆ.

crime scene e1602054934159

ನನ್ನ ಪತಿಯನ್ನ ಗ್ರಾಮದ ವಿಜಯ್ ಕೊಲೆ ಮಾಡಿದ್ದಾನೆ. ಕೊಲೆಯ ಬಳಿಕ ಅನುಮಾನ ಬಾರದಿರಲಿ ಎಂದು ಶವವನ್ನ ಮನೆಯ ಹೊರಗೆ ನೇತು ಹಾಕಿದ್ದಾನೆ ಎಂದು ನೀಲು ಆರೋಪಿಸಿದ್ದಾರೆ. ಇಂದು ಬೆಳಗ್ಗೆ ಶವ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

Police Jeep

ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನ ಮರಣೋತ್ತರ ಶವ ಪರೀಕ್ಷೆಗಾಗಿ ರವಾನಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಕುಟುಂಬಸ್ಥರು ಕೊಲೆ ಎಂದು ಆರೋಪಿಸುತ್ತಿದ್ದಾರೆ. ಶಂಕಿತ ಕೊಲೆ ಆರೋಪಿ ವಿಜಯ್ ಸಹ ಗ್ರಾಮದಿಂದಪರಾರಿಯಾಗಿದ್ದಾನೆ. ಮರಣೋತ್ತರ ಶವ ಪರೀಕ್ಷೆಯಲ್ಲಿ ವಿನೋದ್ ಸಾವು ಹೇಗಾಗಿದೆ ಎಂಬುವುದು ಸ್ಪಷ್ಟವಾಗಿ ತಿಳಿಯಲಿದೆ. ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *