ಮೆಲ್ಬರ್ನ್: ಆಸ್ಟ್ರೇಲಿಯಾ ಕ್ರಿಕೆಟಿಗ ಹಾಗೂ ಕೋಲ್ಕತ ನೈಟ್ ರೈಡರ್ಸ್ ತಂಡದ ಮಾರಕ ವೇಗಿ ಪ್ಯಾಪ್ ಕಮಿನ್ಸ್ ಮದುವೆಗೂ ಮೊದಲೇ ತಂದೆಯಾಗುತ್ತಿದ್ದಾರೆ.
ಕಮಿನ್ಸ್ ಭಾವಿ ಪತ್ನಿ ಬೆಕೆ ಬೋಸ್ಟನ್ ತಮ್ಮ ಚೊಚ್ಚಲ ಮಗುವಿನ ನೀರಿಕ್ಷೆಯಲ್ಲಿದ್ದಾರೆ. ಈ ಕುರಿತಾಗಿ ಕಮಿನ್ಸ್ ಹಾಗೂ ಭಾವಿ ಪತ್ನಿ ಬೆಕೆ ಬೀಸ್ಟನ್‍ಗೆ ಕೋಲ್ಕತ್ತಾ ರೈಡರ್ಸ್ ಫ್ರಾಂಚೈಸಿ ಟ್ವೀಟ್ ಮೂಲಕವಾಗಿ ಶುಭ ಕೋರಿದೆ.
ಕೆಲವು ದಿನಗಳಹಿಂದೆ ಬೆಕೆ ಕಲಡಲ ಕಿಮಾರೆಯಲ್ಲಿ ತಮ್ಮ ಬೇಬಿ ಬಂಪ್ಸ್‍ನೊಂದಿಗೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಕೆಲವು ಫೊಟೋವನ್ನುಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ತಾಯಂದಿರ ದಿನದಂದೇ ಎಂತಹ ಸಂತೋಷದ ಸುದ್ದಿಯಿದೆ ಎಂದು ಕೆಕೆಆರ್ ಟ್ವೀಟ್ ಮಾಡುವ ಮೂಲಕವಾಗಿ ಶುಭಕೋರಿದ್ದಾರೆ.
View this post on Instagram
ಆಸ್ಟ್ರೇಲಿಯಾ ಸ್ಟಾರ್ ವೇಗಿ ಕಮಿನ್ಸ್ ಗೆಳತಿ ಬೆಕೆ ಬೋಸ್ಟನ್ ಇಂಗ್ಲೆಂಡ್ ದೇಶದವರು. ಬೆಕೆಯವರು ಒಂದು ಶಾಪಿಂಗ್ ವೆಬ್‍ಸೈಟ್ ನಡೆಸುತ್ತಿದ್ದಾರೆ. 2014ರಲ್ಲಿ ಬೆಕೆ ಬೋಸ್ಟರ್ನ್ ವೇಗಿ ಕಮಿನ್ಸ್ ಜತೆಗಿರುವ ಫೋಟೋವನ್ನು ಮೊದಲ ಬಾರಿಗೆ ಸಾಮಾಜಿಕಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಮೂಲಕವಾಗಿ ತಮ್ಮ ಗೆಳೆತನವನ್ನು ಜಗತ್ತಿನ ಮುಂದೆ ಅನಾವರಣ ಮಾಡಿದ್ದರು. ನಂತರ ಬರೋಬ್ಬರು 6 ವರ್ಷಗಳ ನಂತರ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇನ್ನು ಮದುವೆಯಾಗಿಲ್ಲ. ಇದೀಗ ಮದುವೆಗೂ ಮುನ್ನಾ ತಂದೆಯಾಗುತ್ತಿದ್ದಾರೆ
What a fantastic piece of news on #MothersDay! ????????????
Send your love and good wishes for the couple in ???? below ⤵️https://t.co/LDbY2DcYwj #IPL #PatCummins #BeckyBoston #Cricket @patcummins30
— KolkataKnightRiders (@KKRiders) May 9, 2021
ಭಾರತದಲ್ಲಿ ನಡೆಯುತ್ತಿದ್ದ 14 ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಕೊರೊನಾ ಕಾರಣದಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಹೀಗಾಗಿ ಆಸ್ಟ್ರೇಲಿಯಾದ ಇತರ ಆಟಗಾರರೊಂದಿಗೆ ಕಮಿನ್ಸ್ ಮಾಲ್ಡೀವ್ಸ್‍ನಲ್ಲಿ ಕ್ವಾರಂಟೈನ್ ಆಗಿದ್ದಾರೆ.