ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಷಮೆಯಾಚನೆಯ ಬೆನ್ನಲ್ಲೇ ಮನಸ್ಸು ಹಗುರವಾಯಿತು ಎಂದು ನವರಸ ನಾಯಕ ಜಗ್ಗೇಶ್ ಹೇಳಿದ್ದಾರೆ.
ಅಭಿಮಾನಿಗಳಿಂದ ಆಗಿರುವ ನೋವಿಗೆ ನಾನು ಕ್ಷಮೆಯಾಚಿಸುತ್ತೇನೆ ಎಂದು ದರ್ಶನ್ ಹೇಳಿದ ನಂತರ ಜಗ್ಗೇಶ್, ಪ್ರೀತಿ ವಿಶ್ವಾಸಕ್ಕೆ ತಾತ್ಕಾಲಿಕ ಸಮಸ್ಯೆ. ವೈಶಾಲ್ಯತೆ ಚಿಂತನೆ ಹೃದಯ ಇದ್ದಾಗ ಅಪನಂಬಿಕೆ ಮೋಡ ಸರಿದು ಮತ್ತೆ ಸೂರ್ಯ ಪ್ರಜ್ವಲಿಸುತ್ತಾನೆ. ಕನ್ನಡಕ್ಕೆ ಒಗ್ಗಟ್ಟಿರಲಿ. ಧನ್ಯವಾದ ದರ್ಶನ್ ಎಂದು ಟ್ವೀಟ್ ಮಾಡಿದ್ದಾರೆ.
Advertisement
ಸಮಯ ಸಂದರ್ಭ ವಿಷಘಳಿಗೆ
ಪ್ರೀತಿ ವಿಶ್ವಾಸಕ್ಕೆ ತಾತ್ಕಾಲಿಕ ಸಮಸ್ಯ!
ವೈಶಾಲ್ಯತೆ ಚಿಂತನೆ ಹೃದಯ ಇದ್ದಾಗ ಅಪನಂಬಿಕೆ ಮೋಡ ಸರಿದು ಮತ್ತೆ ಸೂರ್ಯ ಪ್ರಜ್ವಲಿಸುತ್ತಾನೆ!
ಕನ್ನಡಕ್ಕೆ ಒಗ್ಗಟ್ಟಿರಲಿ!
ಧನ್ಯವಾದ @dasadarshan
ಮನಸ್ಸು ಹಗುರವಾಯಿತು..
ಧನ್ಯವಾದ ಮಾಧ್ಯಮಮಿತ್ರರಿಗೆ.
ಧನ್ಯವಾದ ಕನ್ನಡದ ಮನಗಳಿಗೆ.
ಇನ್ನೆಂದು ಇಂಥ ದಿನ ಬರದಿರಲಿ???? pic.twitter.com/1rJQSYsiRr
— ನವರಸನಾಯಕ ಜಗ್ಗೇಶ್ (@Jaggesh2) February 24, 2021
Advertisement
ಈ ಮೂಲಕ ಕಳೆದ ಎರಡು ದಿನಗಳಿಂದ ಜಗ್ಗೇಶ್ ಮತ್ತು ದರ್ಶನ್ ಅಭಿಮಾನಿಗಳ ಜೊತೆಗಿನ ಕಿತ್ತಾಟ ಸುಖಾಂತ್ಯ ಕಡಿದೆ.
Advertisement
ಮನಸ್ಸು ಹಗುರವಾಯಿತು. ಧನ್ಯವಾದ ಮಾಧ್ಯಮಮಿತ್ರರಿಗೆ, ಧನ್ಯವಾದ ಕನ್ನಡದ ಮನಗಳಿಗೆ. ಇನ್ನೆಂದು ಇಂಥ ದಿನ ಬರದಿರಲಿ ಎಂದು ಜಗ್ಗೇಶ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.