ವಿರುಷ್ಕಾ ರೊಮ್ಯಾಂಟಿಕ್ ಫೋಟೋಗೆ ಕ್ಯೂಟ್ ಕಮೆಂಟ್ ಮಾಡಿದ ಪ್ರಿಯಾಂಕಾ

Public TV
2 Min Read
Priyanka Chopra virushka

– ಕೆಜಿಎಫ್ ನಟಿಯಿಂದಲೂ ಕೊಹ್ಲಿ ಅನುಷ್ಕಾಗೆ ಮೆಚ್ಚುಗೆ

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಅವರ ರೊಮ್ಯಾಂಟಿಕ್ ಫೋಟೋಗೆ ಬಾಲಿವುಡ್ ಪಿಗ್ಗಿ ಪ್ರಿಯಾಂಕಾ ಚೋಪ್ರಾ ಅವರು ಕ್ಯೂಟ್ ಕಮೆಂಟ್ ಮಾಡಿದ್ದಾರೆ.

ಗುರುವಾರ ವಿರಾಟ್ ಕೊಹ್ಲಿಯವರು ತಮ್ಮ 32ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಐಪಿಎಲ್‍ಗಾಗಿ ಯುಎಇಯಲ್ಲಿ ತಂಗಿರುವ ಕೊಹ್ಲಿ ಅಲ್ಲೇ ತಮ್ಮ ಆರ್‌ಸಿಬಿ ತಂಡ ಮತ್ತು ಪತ್ನಿ ಜೊತೆ ಬರ್ತಡೇ ಸಲೆಬ್ರೇಷನ್ ಮಾಡಿಕೊಂಡಿದ್ದಾರೆ. ಅಂತೆಯೇ ಪತಿಯ ಹುಟ್ಟುಹಬ್ಬಕ್ಕೆ ಅನುಷ್ಕಾ ಶರ್ಮಾ ಅವರು ರೊಮ್ಯಾಟಿಕ್ ಫೋಟೋಗಳನ್ನು ಹಂಚಿಕೊಂಡಿದ್ದರು.

 

View this post on Instagram

 

❤️

A post shared by AnushkaSharma1588 (@anushkasharma) on

ನಿನ್ನೆ ವಿರಾಟ್ ಕೊಹ್ಲಿ ಹುಟ್ಟುಹಬ್ಬದ ವಿಚಾರವಾಗಿ ಮೂರು ಫೋಟೋಗಳನ್ನು ಅನುಷ್ಕಾ ಶರ್ಮಾ ಇಮ್ಮ ಇನ್‍ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಫೋಟೋಗೆ ಬಾಲಿವುಡ್‍ನ ಹಲವಾರು ನಟಿಯರು ಕಮೆಂಟ್ ಮಾಡಿದ್ದಾರೆ. ಇದರಲ್ಲಿ ಪ್ರಿಯಾಂಕ ಚೋಪ್ರಾ ಕೂಡ ಕಮೆಂಟ್ ಮಾಡಿದ್ದು, ಅಳುವ ಮತ್ತು ಹಾರ್ಟ್ ಇಮೋಜಿಯನ್ನು ಕಳುಹಿಸಿದ್ದಾರೆ. ಜೊತೆಗೆ ಹಿಂದಿ ಕೆಜಿಎಫ್-1ರಲ್ಲಿ ಗಲಿ ಗಲಿ ಹಾಡಿಗೆ ಯಶ್ ಜೊತೆ ಸೊಂಟ ಬಳುಕಿಸಿದ್ದ ಬಾಲಿವುಡ್‍ನ ನಟಿ ಮೌನಿ ರಾಯ್ ಕೂಡ ಕಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

Capture 1

ತನ್ನ ಹುಟ್ಟುಹಬ್ಬವನ್ನು ಕೊಹ್ಲಿ ಅಬುಧಾಬಿಯ ಪ್ರೈವೇಟ್ ಬೋಟ್‍ನಲ್ಲಿ ಆರ್‌ಸಿಬಿ ಆಟಗಾರರು ಮತ್ತು ಗರ್ಭಿಣಿಯಾಗಿರುವ ಪತ್ನಿ ಅನುಷ್ಕಾರೊಂದಿಗೆ ಆಚರಿಸಿಕೊಂಡಿದ್ದರು. ಅನುಷ್ಕಾ ಕೊಹ್ಲಿಗೆ ಕೇಕ್ ತಿನ್ನಿಸಿ, ಅಪ್ಪುಗೆ ಕೊಟ್ಟು ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಜೊತೆಗೆ ಆರ್‌ಸಿಬಿ ತಂಡದ ಆಟಗಾರರು ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ್ದರು. ಈ ಕುರಿತ ವಿಡಿಯೋ ಹಾಗೂ ಫೋಟೋಗಳನ್ನು ಆರ್‍ಸಿಬಿ ತಂಡ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿತ್ತು.

KOHLI BIRHDAY A

ಇಂದು ಅಬುಧಾಬಿಯಲ್ಲಿ ಸನ್‍ರೈಸರ್ಸ್ ಹೈದರಾಬಾದ್ ಹಾಗೂ ಆರ್‌ಸಿಬಿ ತಂಡಗಳು ಎಲಿಮಿನೇಟರ್-1 ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಐಪಿಎಲ್ 2020ರ ಟೂರ್ನಿಯಲ್ಲಿ 14 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿ ಕೊಹ್ಲಿ ಪಡೆ ಪ್ಲೇ ಆಫ್ ಪ್ರವೇಶ ಮಾಡಿದೆ. ನಾಲ್ಕು ವರ್ಷಗಳ ಬಳಿಕ ಪ್ಲೇ ಆಫ್ ತಲುಪಿರುವ ಕೊಹ್ಲಿ ಪಡೆಗೆ ಕಪ್ ಗೆಲ್ಲಲು ಇನ್ನು ಮೂರು ಗೆಲುವು ಬೇಕಿದೆ. 2020ರ ಟೂರ್ನಿಯಲ್ಲಿ ಕೊಹ್ಲಿ ಇದುವರೆಗೂ 122ರ ಸ್ಟ್ರೈಕ್ ರೇಟ್‍ನಲ್ಲಿ 460ರನ್ ಗಳಿಸಿದ್ದು, ಆರೆಂಜ್ ಕ್ಯಾಪ್ ರೇಸ್‍ನಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಟೂರ್ನಿಯಲ್ಲಿ 23 ಬೌಂಡರಿ, 11 ಸಿಕ್ಸರ್ ಸಿಡಿಸಿದ್ದು, 3 ಅರ್ಧ ಶತಕಗಳು ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *