ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪರಿಸ್ಥಿತಿಗೆ ಅನುಗುಣವಾಗಿ ಯಾವುದೇ ಸಮಯದಲ್ಲಿ ತಮ್ಮ ಆಟವನ್ನು ಬದಲಾಯಿಸುತ್ತಾರೆ. ಇದು ಅವರ ವಿಶೇಷತೆಯಾಗಿದೆ ಎಂದು ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಹೊಗಳಿದ್ದಾರೆ.
ಮಾಧ್ಯಮ ಸಂದರ್ಶನವೊಂದಲ್ಲಿ ಮಾತನಾಡಿದ ವಿಕ್ರಮ್ ರಾಥೋಡ್, “ಕೊಹ್ಲಿಯ ಬದ್ಧತೆ ಅವರ ಅತ್ಯುತ್ತಮ ಕೆಲಸ ಎಂದು ನಂಬುತ್ತೇನೆ. ಅವರು ವಿಶ್ವದ ಅತ್ಯುತ್ತಮ ಆಟಗಾರರಾಗಲು ಬಯಸುತ್ತಾರೆ. ಅದಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇದನ್ನು ನಾನು ಗಮನಿಸುತ್ತಾ ಬಂದಿದ್ದೇನೆ. ಪ್ರತಿಯೊಂದು ಸನ್ನಿವೇಶಕ್ಕೂ ಹೊಂದಿಕೊಳ್ಳುವ ಸಾಮರ್ಥ್ಯವೇ ಅವರ ದೊಡ್ಡ ಬಲ ಎಂದು ಹೇಳಿದ್ದಾರೆ.
Advertisement
Advertisement
“ವಿರಾಟ್ ಒಂದೇ ರೀತಿ ಆಡುವ ಆಟಗಾರ ಮಾತ್ರವಲ್ಲ. ಅಗತ್ಯಕ್ಕೆ ಅನುಗುಣವಾಗಿ ಯಾವುದೇ ಸಮಯದಲ್ಲಿ ತಮ್ಮ ಆಟವನ್ನು ಬದಲಾಯಿಸಬಹುದು. ಅವರು ಎಲ್ಲಾ ಸ್ವರೂಪಗಳಲ್ಲಿ ವಿಭಿನ್ನವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಇದು ಅವರ ಪ್ರಮುಖ ಶಕ್ತಿಯಲ್ಲಿ ಒಂದಾಗಿದೆ” ಎಂದು ವಿಕ್ರಮ್ ರಾಥೋಡ್ ತಿಳಿಸಿದ್ದಾರೆ.
Advertisement
“2016ರ ಐಪಿಎಲ್ ಆವೃತ್ತಿಯಲ್ಲಿ ವಿರಾಟ್ ಅತ್ಯುತ್ತಮ ಪ್ರದರ್ಶನದ ಉದಾಹರಣೆಗಳಲ್ಲಿ ಒಂದಾಗಿದೆ. ನಂತರ ನಾನು ಅವರ ಅದ್ಭುತ ಆಟವನ್ನು ನೋಡಿದೆ. ಆ ಸಮಯದಲ್ಲಿ ಕೊಹ್ಲಿ 4 ಶತಕ ಗಳಿಸಿದ್ದರು. ಆಗ ಕೊಹ್ಲಿ ಐಪಿಎಲ್ ಆವೃತ್ತಿಯಲ್ಲಿ 973 ರನ್ ಗಳಿಸಿದ್ದರು. ಎರಡು ತಿಂಗಳ ಕಾಲ ಐಪಿಎಲ್ ಆಡಿದ ನಂತರ ತಂಡವು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿತ್ತು. ಅಲ್ಲಿಯೂ ಕೊಹ್ಲಿ ಟೆಸ್ಟ್ ನಲ್ಲಿ ದ್ವಿಶತಕ ಬಾರಿಸಿದ್ದರು ಎಂದು ನೆನೆದರು.
Advertisement
ವಿರಾಟ್ ಕೊಹ್ಲಿ 86 ಟೆಸ್ಟ್ ಪಂದ್ಯಗಳನ್ನು ಆಡಿ 53.62 ಸರಾಸರಿಯಲ್ಲಿ 27 ಶತಕ ಸೇರಿ 7,240 ರನ್ ಗಳಿಸಿದ್ದಾರೆ. 248 ಏಕದಿನ ಪಂದ್ಯಗಳಲ್ಲಿ 11,867 ರನ್ ಮತ್ತು 81 ಟಿ20 ಪಂದ್ಯಗಳಲ್ಲಿ 2,794 ರನ್ ಗಳಿಸಿದ್ದಾರೆ. ಐಪಿಎಲ್‍ನ 177 ಪಂದ್ಯಗಳಲ್ಲಿ ಕೊಹ್ಲಿ ಇದುವರೆಗೆ 5,412 ರನ್ ದಾಖಲಿಸಿದ್ದಾರೆ.