ಚೆನ್ನೈ: ಆನ್‍ಲೈನ್ ಜೂಜಾಟವನ್ನು ಉತ್ತೇಜಿಸಿದ್ದಕ್ಕಾಗಿ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಹಾಗೂ ನಟಿ ತಮನ್ನಾ ಅವರನ್ನು ಬಂಧಿಸುವಂತೆ ಕೋರಿ ಮದ್ರಾಸ್ ಹೈ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಚೆನ್ನೈ ಮೂಲದ ವಕೀಲರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಯುವ ಜನತೆ ಆನ್‍ಲೈನ್ ಜೂಜಾಟದ ಗೀಳಿಗೆ ಹೆಚ್ಚು ಆಕರ್ಷಿತರಾಗುತ್ತಿದ್ದು, ಪರಿಣಾಮ ಇವುಗಳ ಮೇಲೆ ನಿಷೇಧ ವಿಧಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಆನ್‍ಲೈನ್ ಜೂಜಾಟ ಕಂಪೆನಿಗಳು ಭಾರೀ ಹಣವನ್ನು ನೀಡಿ ವಿರಾಟ್ ಕೊಹ್ಲಿ, ತಮನ್ನಾ ರಂತಹ ಸ್ಟಾರ್ ಕ್ರೀಡಾಪಟು ಹಾಗೂ ನಟ-ನಟಿಯನ್ನು ಬಳಿಸಿಕೊಂಡು ಯುವ ಜನತೆಯ ಬ್ರೈನ್ ವಾಶ್ ಮಾಡುತ್ತಿದ್ದಾರೆ ವಕೀಲರು ಆರೋಪಿಸಿದ್ದಾರೆ.
ಆನ್‍ಲೈನ್ ಜೂಜಾಟಕ್ಕೆ ಯುವಕರು ಮಾಡಿದ ಸಾಲದ ಹಣವನ್ನು ಹಿಂದಿರುಗಿಸಲು ಸಾಧ್ಯವಾಗದ ಹಣ ಆತ್ಮಹತ್ಯೆಯತ್ತ ಮುಖ ಮಾಡುತ್ತಿದ್ದಾರೆ ಎಂದು ಪ್ರಕರಣವೊಂದರ ಉದಾರಣೆಯೊಂದನ್ನು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣವನ್ನು ನ್ಯಾಯಾಲಯ ಮಂಗಳವಾರ ವಿಚಾರಣೆಗೆ ಮುಂದೂಡಿದೆ.