ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ

Public TV
2 Min Read
BIJ AIRPORT 5

ವಿಜಯಪುರ: ವಿಜಯಪುರದ ಮದಬಾವಿ-ಬುರನಾಪೂರ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮೊದಲನೇ ಹಂತದ ವಿಮಾನ ನಿಲ್ದಾಣ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಪರಿಶೀಲನೆ ನಡೆಸಿದರು.

BIJ AIRPORT 9 medium

ವಿಜಯಪುರ ನಗರದ ವಿಮಾನ ನಿಲ್ದಾಣದ ಮೊದಲನೇ ಹಂತದಲ್ಲಿ 95.00 ಕೋಟಿ ರೂ. ಗಳಲ್ಲಿ ಕಾಮಗಾರಿ ಕೈಗೊಳ್ಳಲಾಗಿದ್ದು, ಉತ್ತಮ ದರ್ಜೆಯಲ್ಲಿ ಯಾವುದೇ ಲೋಪವಾಗದೇ ವ್ಯವಸ್ಥಿತವಾಗಿ ಕಾಮಗಾರಿ ಕೈಗೊಳ್ಳಲು ಸೂಚಿಸಿದರು.

BIJ AIRPORT 7 medium

ವಿಮಾನ ನಿಲ್ದಾಣದ ರನ್ ವೇ ಉದ್ದವು ಒಟ್ಟು 2,650 ಮೀಟರ ಉದ್ದವಿದ್ದು, 280 ಮೀಟರ ಅಗಲವಿರುತ್ತದೆ. ಅದರಲ್ಲಿ 1,800 ಮೀಟರ ಉದ್ದ 280 ಮೀಟರ್ ಅಗಲಕ್ಕೆ ಫಾರಮೇಶನ್ ಕೆಲಸ ಪ್ರಗತಿಯಲ್ಲಿರುವ ಬಗ್ಗೆ ಪರಿಶೀಲನೆ ನಡೆಸಿದರು. ಹಾಗೆಯೇ ಟ್ಯಾಕ್ಸಿ ವೇ ಉದ್ದವು ಒಟ್ಟು 190.50 ಮೀಟರ್ ಉದ್ದವಿದ್ದು, 26.00 ಮೀಟರ್ ಅಗಲವಿದ್ದು ಮೇಶನ್ ಕೆಲಸ ಪೂರ್ಣಗೊಂಡಿರುತ್ತದೆ. 170×104 ಮೀಟರ್ ಅಳತೆಯ ಏಪ್ರಾನ್ ಕೆಲಸವು ಪ್ರಗತಿಯಲ್ಲಿದ್ದು, ಆಯಸೊಲೇಶನ್‍ಬೇ ಉದ್ದವು ಒಟ್ಟು 190.50 ಮೀಟರ್ ಉದ್ದವಿದ್ದು, 26.00 ಮೀಟರ ಅಗಲವಿದ್ದು ಫಾರಮೇಶನ್ ಕೆಲಸ ಪೂರ್ಣಗೊಂಡಿರುವ ಬಗ್ಗೆ ವೀಕ್ಷಣೆ ನಡೆಸಿದರು. ಇದನ್ನು ಓದಿ: ರಾಜ್ಯಕ್ಕೆ ತಕ್ಷಣ 50 ಸಾವಿರ ಆಂಫೋಟೆರಿಸಿನ್ ಬಿ ಪೂರೈಸಿ: ಈಶ್ವರ್ ಖಂಡ್ರೆ

ಫೆರಿಫೆರಲ್ ರಸ್ತೆಯ ಉದ್ದವು ಒಟ್ಟು 8,598 ಮೀಟರ ಉದ್ದವಿದ್ದು, 3.75 ಮೀಟರ ಅಗಲ ಹಾಗೂ ಎರಡು ಬದಿಗಳಲ್ಲಿ 2 ಮೀಟರ್ ಅಗಲಕ್ಕೆ ಶೋಲ್ಡರ್ ಅಳವಡಿಸಲಾಗಿದೆ. ಅದರಲ್ಲಿ 6,000 ಮೀಟರ್ ಉದ್ದಕ್ಕೆ ಫಾರಮೇಶನ್ ಕೆಲಸ ಪೂರ್ಣಗೊಂಡಿದ್ದು, ಬಾಕಿ ಕೆಲಸ ಪ್ರಗತಿಯಲ್ಲಿರುತ್ತದೆ.

BIJ AIRPORT 8 medium

ಅದರಂತೆ 1,350 ಮೀಟರ್, ಬಾಕ್ಷ ಕಲ್ವರ್ಟ್ ಉದ್ದವು 300 ಮೀಟರ್ (2.50 x 2 50ಮೀ) ಇದ್ದು, ಅದರಲ್ಲಿ 300 ಮೀಟರ್ ಉದ್ದಕ್ಕೆ ಕೆಳಗಡೆಯ ಕಾಮಗಾರಿಯು ಮುಗಿದಿದ್ದು ಎರಡು ಬದಿಗಳ ಗೋಡೆಗಳನ್ನು 1.50 ಮೀಟರ್ ಎತ್ತರಕ್ಕೆ 250 ಮೀಟರ್ ಉದ್ದದ ಕಾಮಗಾರಿಯು ಸರಳು ಸಹಿತ ಮುಗಿದಿದ್ದು ಬಾಕಿ ಕೆಲಸ ಪ್ರಗತಿಯಲ್ಲಿರುತ್ತದೆ. ಇದನ್ನು ಓದಿ: ಸಂಪುಟದಲ್ಲಿ ಮುನಿರತ್ನಗೆ ಅವಕಾಶ ಸಿಗುತ್ತೆ: ಡಾ.ಸಿ.ಎನ್.ಅಶ್ವತ್ಥನಾರಾಯಣ

ಚತುಷ್ಪಥ ರಸ್ತೆ ಒಟ್ಟು 715 ಮೀಟರ ಉದ್ದವಿದ್ದು ಅದರಲ್ಲಿ 715 ಮೀಟರ ಉದ್ದ 25 ಮೀಟರ್ ಅಗಲಕ್ಕೆ ಫಾರಮೇಶನ್ ಕೆಲಸ ಪೂರ್ಣಗೊಂಡಿದ್ದು, 1,568 ಮೀಟರ್ ಉದ್ದದ ದ್ವೀಪಥದ ಲೂಪ ರಸ್ತೆಯಿದ್ದು, ಅದರಲ್ಲಿ 1,500 ಮೀಟರ್ ಉದ್ದ 15.00 ಮೀಟರ್ ಅಗಲಕ್ಕೆ ಫಾರಮೇಶನ್ ಕೆಲಸ ಮುಗಿದಿರುತ್ತದೆ.

BIJ AIRPORT 6 medium

4,892 ಮೀಟರ ಉದ್ದದ ಒಳ ರಸ್ತೆಗಳಿದ್ದು 2,462 ಮೀಟರ್ ಫಾರಮೇಶನ್ ಕೆಲಸ ಮುಕ್ತಾಯಗೊಂಡಿದ್ದು ಹಾಗೂ ಬಾಕಿ ಕೆಲಸ ಪ್ರಗತಿ ಹಂತದಲ್ಲಿದೆಯೆಂದು ಸಂಬಂಧಿಸಿದ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಇದನ್ನು ಓದಿ: ಆಶಾ ಕಾರ್ಯಕರ್ತೆ ಮೇಲೆ ಅಂಗಡಿ ಮಾಲೀಕನಿಂದ ಹಲ್ಲೆ

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಪ್ರಶಾಂತ್ ಗಿಡದಾಣಪ್ಪಗೋಳ, ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರ ಶ್ರೀ ಎಸ್.ಬಿ. ಪಾಟೀಲ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮುಜುಮದಾರ್, ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *