ಬೆಂಗಳೂರು: ಕೇರಳದ ಕರಿಪುರ ವಿಮಾನ ನಿಲ್ದಾಣದಲ್ಲಿ ನಡೆದ ಭೀಕರ ದುರಂತದಲ್ಲಿ ಕನ್ನಡಿಗರು ಇದ್ದರೆ ರಾಜ್ಯ ಸರ್ಕಾರ ಕೂಡಲೇ ನೆರವಿಗೆ ಧಾವಿಸಬೇಕು ಎಂದು ಮಾಜಿ ಸಚಿವ ಯು.ಟಿ ಖಾದರ್ ಆಗ್ರಹಿಸಿದ್ದಾರೆ.
Advertisement
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೇರಳದ ಕಲ್ಲಿಕೋಟೆಯಲ್ಲಿ ಸಂಭವಿಸಿದ ವಂದೇ ಭಾರತ್ ವಿಮಾನ ದುರಂತ ನನ್ನನ್ನು ದಿಗ್ಭ್ರಮೆಗೊಳಿಸಿದೆ. ದೂರದ ದುಬೈನಿಂದ ತವರಿನ ಕನಸು ಹೊತ್ತು ಬಂದವರು ಕ್ಷಣಾರ್ಧದಲ್ಲೇ ಕಣ್ಮುಚ್ಚಿರುವುದು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಮೃತರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ಗಾಯಾಳುಗಳು ಶೀಘ್ರಗುಣಮುಖರಾಗಲಿ ಎಂದಿದ್ದಾರೆ.
Advertisement
ಕೇರಳದ ಕಲ್ಲಿಕೋಟೆಯಲ್ಲಿ ಸಂಭವಿಸಿದ ವಂದೇ ಭಾರತ್ ವಿಮಾನ ದುರಂತ ನನ್ನನ್ನ ದಿಗ್ಭ್ರಮೆಗೊಳಿಸಿದೆ. ದೂರದ ದುಬೈನಿಂದ ತವರಿನ ಕನಸು ಹೊತ್ತ ಬಂದವರು ಕ್ಷಣಾರ್ಧದಲ್ಲೇ ಕಣ್ಮುಚ್ಚಿರುವುದು ನನಗೆ ನಂಬಲು ಸಾಧ್ಯವಾಗುತ್ತಿಲ್ಲ.ಮೃತರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ಗಾಯಾಳುಗಳು ಶೀಘ್ರಗುಣಮುಖರಾಗಲಿ. (1)
— UT Khadér (@utkhader) August 7, 2020
Advertisement
ಇನ್ನೊಂದು ಟ್ವೀಟ್ ಮಾಡಿ, ವಿಮಾನದಲ್ಲಿ ಕನ್ನಡಿಗರು ಇರುವ ಬಗ್ಗೆ ನಾನು ಮಾಹಿತಿ ಕಲೆ ಹಾಕುತ್ತಿದ್ದೇನೆ. ಕನ್ನಡಿಗರು ಈ ವಿಮಾನದಲ್ಲಿ ಇದ್ದಿದ್ದೇ ಆದಲ್ಲಿ ರಾಜ್ಯ ಸರ್ಕಾರ ಕೂಡಲೇ ಅವರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಇಬ್ಭಾಗವಾದ್ರೂ ಬದುಕುಳಿದ ಪುಟ್ಟ ಕಂದಮ್ಮ
Advertisement
ವಿಮಾನದಲ್ಲಿ ಕನ್ನಡಿಗರು ಇರುವ ಬಗ್ಗೆ ನಾನು ಮಾಹಿತಿ ಕಲೆ ಹಾಕುತ್ತಿದ್ದೇನೆ. ಕನ್ನಡಿಗರು ಈ ವಿಮಾನದಲ್ಲಿ ಇದ್ದಿದ್ದೇ ಆದಲ್ಲಿ ರಾಜ್ಯ ಸರ್ಕಾರ ಕೂಡಲೇ ಅವರ ನೆರವಿಗೆ ಧಾವಿಸಬೇಕು.(2)
— UT Khadér (@utkhader) August 7, 2020
ಇಂದು ಸಂಜೆ 7.45ರ ಸುಮಾರಿಗೆ ದುಬೈನಿಂದ ಬಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಕೋಯಿಕ್ಕೋಡ್‍ನ ಕರಿಪುರದಲ್ಲಿ ಲ್ಯಾಂಡಿಗೆ ವೇಳೆ ನಿಲ್ದಾಣದ ರನ್ ವೇಯಲ್ಲಿ ಜಾರಿ ದುರಂತಕ್ಕೀಡಾಗಿದೆ. ಲ್ಯಾಂಡಿಂಗ್ ವೇಳೆ ಬೆಂಕಿ ಹೊತ್ತಿಕೊಂಡಿಲ್ಲ. ವಿಮಾನದಲ್ಲಿ 174 ಮಂದಿ ಪ್ರಯಾಣಿಕರಿದ್ದರು. 10 ಮಂದಿ ಮಕ್ಕಳು, ಇಬ್ಬರು ಪೈಲಟ್‍ಗಳು ಹಾಗೂ ಐವರು ಕ್ಯಾಬಿನ್ ಸಿಬ್ಬಂದಿ ಇದ್ದರು. ಸದ್ಯ ಪ್ರಯಾಣಿಕರ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಇದನ್ನೂ ಓದಿ: ಕೋಯಿಕ್ಕೋಡ್ ವಿಮಾನ ದುರಂತ- 14 ಸಾವು, 15 ಮಂದಿ ಗಂಭೀರ
#WATCH Kerala: Visuals from outside the Karipur Airport, after Dubai-Kozhikode Air India flight (IX-1344) with 190 people onboard skidded during landing at the airport. pic.twitter.com/hCimakcNRY
— ANI (@ANI) August 7, 2020