-ಮಂಗಳೂರು ವಿಮಾನ ದುರಂತದಿಂದ ನಾವು ಪಾಠ ಕಲಿತಿದ್ದೇವೆ
ತಿರುವನಂತಪುರ: ದುಬೈ-ಕೋಯಿಕ್ಕೋಡ್ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ತಲಾ ಹತ್ತು ಲಕ್ಷ ಪರಿಹಾರವನ್ನು ಏರ್ ಇಂಡಿಯಾ ನೀಡಲಿದೆ ಎಂದು ಕೇಂದ್ರ ವಿಮಾನಯಾನ ಸಚಿವ ಹರಿದೀಪ್‍ಸಿಂಗ್ ಪುರಿ ತಿಳಿಸಿದ್ದಾರೆ.
My heart goes out to the families & friends of the 18 people who lost their lives in the air accident involving @FlyWithIX Flight IX-1344 in Kozhikode last evening & offer my heartfelt condolences.
Reasons for the mishap are being investigated. pic.twitter.com/awEGpU9EmK
— Hardeep Singh Puri (@HardeepSPuri) August 8, 2020
Advertisement
ಇಂದು ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡದ ಪ್ರದೇಶಕ್ಕೆ ತೆರಳಿ ಪರಿಶೀಲಿಸಿದ ಅವರು ದುರ್ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದರು. ಬಳಿಕ ಮಾತನಾಡಿ, ಜೀವಗಳನ್ನು ಉಳಿಸುವುದು ನಮ್ಮ ಆದ್ಯತೆಯಾಗಿದ್ದು ಸಾವನ್ನಪ್ಪಿದರ ಕುಟುಂಬಕ್ಕೆ ಹತ್ತು ಲಕ್ಷ, ಗಂಭೀರ ಗಾಯಗೊಂಡವರಿಗೆ ಎರಡು ಲಕ್ಷ ಮತ್ತು ಸಣ್ಣ ಪುಟ್ಟ ಗಾಯಾಳುಗಳಿಗೆ 50 ಸಾವಿರ ಪರಿಹಾರ ಏರ್ ಇಂಡಿಯಾ ಕಡೆಯಿಂದ ನೀಡಲಾಗುವುದು. ಈಗಾಗಲೇ 23 ಮಂದಿ ಆಸ್ಪತ್ರೆ ಡಿಸ್ಚಾರ್ಜ್ ಆಗಿದ್ದಾರೆ. 149 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು. ಇದನ್ನೂ ಓದಿ: ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್ ಸಾಠೆ 2 ಬಾರಿ ಲ್ಯಾಂಡಿಗ್‌ಗೆ ಪ್ರಯತ್ನಿಸಿದ್ರು
Advertisement
Reached Kozhikode to take stock of the status & implementation of relief measures after the air accident last evening.
Will hold consultations with senior civil aviation officials & professionals. pic.twitter.com/wyjFkbaJrH
— Hardeep Singh Puri (@HardeepSPuri) August 8, 2020
Advertisement
ದುರಂತ ನಡೆದ ಸ್ಥಳದಲ್ಲಿ ವಿಮಾನದ ಎರಡು ಬ್ಲಾಕ್ ಬಾಕ್ಸ್ ಸಿಕ್ಕಿವೆ, ಮುಂದಿನ ಹಂತದಲ್ಲಿ ದುರಂತಕ್ಕೆ ನಿಖರ ಕಾರಣ ಪತ್ತೆಹಚ್ಚಲಾಗುವುದು ಈ ಬಗ್ಗೆ ತನಿಖೆ ನಡೆಸಿದೆ. ವಿಮಾನ ಹಾರಾಟ ನಡೆಸುತ್ತಿದ್ದವರು ಅನುಭವಿ ಪೈಲೆಟ್ ಗಳು ಈ ಪೈಕಿ ಮುಖ್ಯ ಪೈಲೈಟ್ ಸಾಠೆ ಹಿಂದೆ 27 ಬಾರಿ ಇದೇ ರನ್ ವೇ ಲ್ಯಾಂಡ್ ಮಾಡಿದ್ದಾರೆ ಅವರಿಗೆ 10,848 ಗಂಟೆ ವಿಮಾನ ಹಾರಾಟ ನಡೆಸಿರುವ ಅನುಭವ ಇದೆ ಆದರು ಅವಘಡ ಸಂಭವಿಸಿದೆ. ಇದನ್ನೂ ಓದಿ: ಮರಳಿ ಮನೆಗೆ – ಟೇಕಾಫ್ ಮೊದಲು ಕುಟುಂಬದೊಂದಿಗೆ ಫೇಸ್‌ಶೀಲ್ಡ್ ಹಾಕಿ ಸೆಲ್ಫಿ, ಪ್ರಯಾಣಿಕ ಸಾವು
Advertisement
Digital Flight Data Recorder & Cockpit Voice Recorder of the ill-fated aircraft have been retrieved. AAIB is conducting investigations. pic.twitter.com/WCOPV5ETTf
— Hardeep Singh Puri (@HardeepSPuri) August 8, 2020
ನಾವು ಮಂಗಳೂರು ವಿಮಾನ ದುರಂತದಿಂದ ಪಾಠ ಕಲಿತಿದ್ದೇವೆ, ಪ್ರತಿನಿತ್ಯವೂ ಹೊಸ ಪಾಠ ವಿಮಾನಯಾನ ಕ್ಷೇತ್ರದಲ್ಲಿ ಕಲಿಯುತ್ತಿದ್ದೇವೆ, ಈಗ ಈ ಘಟನೆ ಮತ್ತೊಂದು ಹೊಸ ಪಾಠ ಕಲಿಸಿದೆ, ಅಪಘಾತಕ್ಕೆ ಕಾರಣ ನೈಜ ಸಮಯ ಆಧರಿಸಿ ಹೊರ ಬರಲಿದ್ದು ಇದನ್ನು ಆಧರಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.