ಅಲಾಸ್ಕಾ: ಅಮೆರಿಕದ ಆಂಕಾರೋಜ್‍ನಲ್ಲಿ ಶುಕ್ರವಾರ ಹಾರಾಡುತ್ತಿದ್ದಾಗ ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿ ವಿಮಾನಗಳಲ್ಲಿ ಪ್ರಯಾಣ ಮಾಡುತ್ತಿದ್ದ ಒಬ್ಬರು ಜನಪ್ರತಿನಿಧಿಯೊಂದಿಗೆ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಲಾಸ್ಕಾ ರಾಜ್ಯದ ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ಒಂದು ವಿಮಾನದ ಪೈಲಟ್ ಗ್ರೆಗೊರಿ ಬೆಲ್ (67), ಮಾರ್ಗದರ್ಶಿ ಡೇವಿಡ್ ರೋಜರ್ಸ್ (40) ಮತ್ತು ದಕ್ಷಿಣ ಕೆರೊಲಿನಾ ಸಂದರ್ಶಕರಾದ ಕ್ಯಾಲೆಬ್ ಹಲ್ಸಿ (26), ಹೀದರ್ ಹಲ್ಸಿ (25) ಮ್ಯಾಕೆ ಹಲ್ಸಿ (24) ಮತ್ತು ಕಸ್ರ್ಟಿನ್ ರೈಟ್ (23) ಎಂದು ಗುರುತಿಸಲಾಗಿದೆ. ಇನ್ನೊಂದು ವಿಮಾನದಲ್ಲಿ ರಾಜ್ಯ ಪ್ರತಿನಿಧಿ ಗ್ಯಾರಿ ನಾಪ್ (67) ಒಬ್ಬರೇ ಇದ್ದರು ಎಂದು ತಿಳಿದು ಬಂದಿದೆ.
Advertisement
Advertisement
ಕೆನಾಯ್ ಪೆನಿನ್ಸುಲಾದ ನಗರದ ಸೋಲ್ಡೊಟ್ನಾ ವಿಮಾನ ನಿಲ್ದಾಣದ ಬಳಿ ಈ ಅಪಘಾತ ನಡೆದಿದೆ. ಈ ಅಪಘಾತದಲ್ಲಿ ಎರಡು ವಿಮಾನಗಳಲ್ಲಿದ್ದ ಏಳು ಮಂದಿ ಮೃತಪಟ್ಟಿದ್ದಾರೆ. ಇದೇ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದ ರಾಜ್ಯ ಪ್ರತಿನಿಧಿ ಗ್ಯಾರಿ ನಾಪ್ ಅವರು ಒಂದು ವಿಮಾನದಲ್ಲಿ ಇದ್ದರು ಎಂದು ಹೇಳಲಾಗಿದೆ. ಇನ್ನೊಂದು ವಿಮಾನದಲ್ಲಿ ದಕ್ಷಿಣ ಕೆರೊಲಿನಾ ನಾಲ್ಕು ಪ್ರವಾಸಿಗರು, ಕಾನ್ಸಾಸ್‍ನ ಮಾರ್ಗದರ್ಶಿ ಮತ್ತು ಸೋಲ್ಡೊಟ್ನಾದ ಪೈಲಟ್ ಇದ್ದರು ಎಂದು ಸೈನಿಕರು ತಿಳಿಸಿದ್ದಾರೆ.
Advertisement
Advertisement
ಡಿಕ್ಕಿಯಾದ ಎರಡು ವಿಮಾನಗಳು ಅವಶೇಷ ಬಂದು ಕೆನಾಯ್ ಪೆನಿನ್ಸುಲಾದ ನಗರದ ಹೆದ್ದಾರಿಯಲ್ಲಿ ಬಿದ್ದವೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಅಪಘಾತವಾದ ವಿಮಾನಗಳಲ್ಲಿ ಒಂದನ್ನು ಡಿ ಹ್ಯಾವಿಲ್ಯಾಂಡ್ ಡಿಹೆಚ್‍ಸಿ-2 ಬೀವರ್ ಎಂದು ಗುರುತಿಸಿದೆ. ಅಪಘಾತದ ಬಗ್ಗೆ ಎಫ್‍ಎಎ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ತನಿಖೆ ನಡೆಸುತ್ತಿದೆ. ರಾಜ್ಯ ಪ್ರತಿನಿಧಿ ಗ್ಯಾರಿ ನಾಪ್ ಅವರ ಸಾವಿಗೆ ಅವರ ಸಹೋದ್ಯೋಗಿಗಳು ಸಂತಾಪ ಸೂಚಿಸಿದ್ದಾರೆ.
ಅಲಾಸ್ಕಾದಲ್ಲಿ 2019ರ ಮೇ ತಿಂಗಳಿನಲ್ಲಿ ಎರಡು ವಿಮಾನಗಳ ಮಧ್ಯೆ ಡಿಕ್ಕಿ ಸಂಭವಿಸಿತ್ತು. ಈ ಘಟನೆಯಲ್ಲಿ 6 ಮಂದಿ ಮೃತಪಟ್ಟಿದ್ದರು.