ವಿಫಲ ಪ್ರದರ್ಶನ: ಖ್ಯಾತ ಮೂವರು ಆಟಗಾರರು ಚೆನ್ನೈ ತಂಡದಿಂದ ಔಟ್‌?

CHENNAI IPL

ಚೆನ್ನೈ : ಈ ಬಾರಿ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಚೆನ್ನೈ ತಂಡ ಖ್ಯಾತ ಮೂವರು ಆಟಗಾರನ್ನು ಕೈ ಬಿಡುವ ಸಾಧ್ಯತೆಯಿದೆ.

2008 ರಿಂದ ಆರಂಭಗೊಂಡ ಐಪಿಎಲ್‌ನಲ್ಲಿ ಚೆನ್ನೈ ತಂಡ ಪ್ರತಿ ಆವೃತ್ತಿಯಲ್ಲಿ ಪ್ಲೇ ಆಫ್‌ ಪ್ರವೇಶಿಸುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಪ್ಲೇ ಆಫ್‌ ಪ್ರವೇಶಿಸದೇ 7ನೇ ಸ್ಥಾನ ಪಡೆದು ಟೂರ್ನಿಯಿಂದ ಹೊರ ಬಿದ್ದಿದೆ.

CSK

ಈ ಬಾರಿಯ ಕಳಪೆ ಪ್ರದರ್ಶನಕ್ಕೆ ಬ್ಯಾಟಿಂಗ್‌, ಬೌಲಿಂಗ್‌ ವೈಫಲ್ಯ ಎದ್ದು ಕಾಣುತ್ತಿರುವ ಹಿನ್ನೆಲೆಯಲ್ಲಿ ಖ್ಯಾತ ಬ್ಯಾಟ್ಸ್‌ಮನ್‌ ಮತ್ತು ಬೌಲರ್‌ಗಳನ್ನು ಕೈ ಬಿಡಲು ಚೆನ್ನೈ ತಂಡ ಚಿಂತನೆ ನಡೆಸಿದೆ. ಅದರಲ್ಲೂ ಮುಖ್ಯವಾಗಿ ಆಸ್ಟ್ರೇಲಿಯಾದ ಶೇನ್‌ ವಾಟ್ಸನ್‌, ಕೇದಾರ್‌ ಜಾಧವ್‌, ಪಿಯೂಶ್‌ ಚಾವ್ಲಾ ಅವರನ್ನು ಕೈ ಬಿಡುವ ಸಾಧ್ಯತೆ ಹೆಚ್ಚಿದೆ.

 

ಶೇನ್‌ ವಾಟ್ಸನ್‌:
ಆಸ್ಟ್ರೇಲಿಯಾದ ಆಲ್‌ ರೌಂಡರ್‌ ಶೇನ್‌ ವಾಟ್ಸನ್‌ 2008ರಲ್ಲಿ ರಾಜಸ್ಥಾನ ಪರ ಆಡಿದ್ದರು. ಈ ಆವೃತ್ತಿಯಲ್ಲಿ ರಾಜಸ್ಥಾನ ಚಾಂಪಿಯನ್‌ ಆಗಿದ್ದು ವಾಟ್ಸನ್‌ ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದರು. ಬಳಿಕ ಆರ್‌ಸಿಬಿ ಪರ ಆಡಿದ್ದ ವಾಟ್ಸನ್‌ 2018ರಲ್ಲಿ ಚೆನ್ನೈ ಪರ ಆಡಲು ಆರಂಭಿಸಿದ್ದರು. ಚೆನ್ನೈ 4 ಕೋಟಿ ರೂ. ನೀಡಿ ವಾಟ್ಸನ್‌ ಅವರನ್ನು ಖರೀದಿಸಿತ್ತು.

Shane Watson 1

2018 ರಲ್ಲಿ 15 ಪಂದ್ಯಗಳಿಂದ 555 ರನ್‌, 2019 ರಲ್ಲಿ 17 ಪಂದ್ಯಗಳಿಂದ 398 ರನ್‌ ಹೊಡೆದಿದ್ದ ವಾಟ್ಸನ್‌ ಈ ಬಾರಿಯ 11 ಪಂದ್ಯ ಮಾತ್ರ ಆಡಿದ್ದರು. 247 ಬಾಲ್‌ ಎದುರಿಸಿದ್ದ ವಾಟ್ಸನ್‌ 29.90 ಸರಾಸರಿಯಲ್ಲಿ 299 ರನ್‌ ಮಾತ್ರ ಹೊಡೆದಿದ್ದರು.

Piyush Chawla CSK vs MI IPL 1

ಪಿಯೂಶ್‌ ಚಾವ್ಲಾ:
2008ರಲ್ಲಿ ರಾಜಸ್ಥಾನ ರಾಯಲ್ಸ್‌ ನಂತರ ಕೋಲ್ಕತ್ತಾ ನೈಟ್‌ ರೈಡರ್ಸ್‌ ಪರ ಆಡಿದ್ದ ಪಿಯೂಶ್‌ ಚಾವ್ಲಾರನ್ನು 2020ರ ಹರಾಜಿನಲ್ಲಿ ಚೆನ್ನೈ ತಂಡ 6.75 ಕೋಟಿ ರೂ. ನೀಡಿ ಖರೀದಿಸಿತ್ತು.ಹರ್ಭಜನ್‌ ಸಿಂಗ್‌ ತವರಿಗೆ ಮರಳಿದ ಹಿನ್ನೆಲೆಯಲ್ಲಿ ಈ ಬಾರಿ ಚಾವ್ಲಾ ಮೇಲೆ ಒತ್ತಡ ಜಾಸ್ತಿ ಇತ್ತು. ಈ ಬಾರಿ ಒಟ್ಟು 126 ಬಾಲ್‌ ಎಸೆದಿದ್ದು 191 ರನ್‌ ನೀಡಿ 6 ವಿಕೆಟ್‌ ಪಡೆದಿದ್ದರು.

Kedar Jadhav 1

ಕೇದಾರ್‌ ಜಾಧವ್‌:
ಡೆಲ್ಲಿ ಡೇರ್‌ ಡೆವಿಲ್ಸ್‌ , ಕೊಚ್ಚಿ ಟಸ್ಕರ್ಸ್‌, ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಪರ ಆಡಿದ್ದ ಕೇದಾರ್‌ ಜಾಧವ್‌ ಅವರನ್ನು ಚೆನ್ನೈ ತಂಡ 2018ರಲ್ಲಿ 7.8 ಕೋಟಿ ರೂ. ನೀಡಿ ಖರೀದಿಸಿತ್ತು. ಈ ಬಾರಿ ಯಾವುದೇ ಅತ್ಯುತ್ತಮ ಆಟ ಜಾಧವ್‌ ಅವರಿಂದ ಬರಲಿಲ್ಲ. ಈ ವರ್ಷ 8 ಪಂದ್ಯವಾಡಿದ್ದ ಜಾಧವ್‌ 62 ರನ್‌ ಮತ್ರ ಹೊಡೆದಿದ್ದರು. 2019ರಲ್ಲಿ 14 ಪಂದ್ಯಗಳಿಂದ 162 ರನ್‌ ಹೊಡೆದಿದ್ದರು.

Comments

Leave a Reply

Your email address will not be published. Required fields are marked *